Friday, May 10, 2024

ಮಹಿಳಾ ಪ್ರಯಾಣಿಕರೊಬ್ಬರಿಗೆ ಥಳಿಸಿದ ಬಿಎಂಟಿಸಿ ಕಂಡಕ್ಟರ್​! ವೀಡಿಯೋ ವೈರಲ್

ಬೆಂಗಳೂರು: ಟಿಕೆಟ್​ ವಿಚಾರಕ್ಕಾಗಿ ಮಹಿಳೆಯನ್ನು ಬಸ್​ ಕಂಡಕ್ಟರ್​ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ.

ನಗರದ ಸಿದ್ದಾಪುರ ಪೊಲೀಸ್​ ಠಾಣಾವ್ಯಾಪ್ತಿಲ್ಲಿ ಸಂಚರಿಸುವ ಬಿಎಂಟಿಸಿ ಬಸ್​ ನಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ, ಟಿಕೆಟ್​ ವಿಚಾರವಾಗಿ ಬಸ್ ಕಂಡಕ್ಟರ್ ಬಸವರಾಜ ಮತ್ತು ಮಹಿಳಾ ಪ್ರಯಾಣಿಕರೊಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: ಹಡಗು ಗುದ್ದಿ ಬಾಲ್ಟಿಮೋರ್​ನ ಬ್ರಿಡ್ಜ್ ಕುಸಿತ

ಇಬ್ಬರ ನಡುವಿನ ಮಾತುಗಳು ಮಿತಿಮೀರಿ ಮಹಿಳೆ ಕಂಡಕ್ಟರ್​ ಕೆನ್ನೆಗೆ ಬಾರಿಸಿದ್ದಾರೆ, ಏಟು ತಿಂದ ಕಂಡೆಕ್ಟರ್ ರೊಚ್ಚಿಗೆದ್ದು ತಿರುಗಿ ಮಹಿಳೆ ಕೆನ್ನೆಗೆ ಮತ್ತು ಬೆನ್ನಿಗೆ ಬಾರಿಸಿದ್ದಾನೆ, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕಂಡಕ್ಟರ್ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇನ್ನು ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಂಡಕ್ಟರ್​ ಅಮಾನತು: 

ಬಿಎಂಟಿಸಿ ಬಸ್​ನಲ್ಲಿ ಮಹಿಳೆಯ ಮೇಲೆ ಬಸ್​ ಕಂಡಕ್ಟರ್ ಹಲ್ಲೆ ನಡೆಸಿದ​ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕಂಡಕ್ಟರ್​ ಬಸವರಾಜು ನನ್ನು ಅಧಿಕಾರಿಗಳು ಅಮಾನತು ಮಾಡಿದ್ದಾರೆ.

RELATED ARTICLES

Related Articles

TRENDING ARTICLES