Tuesday, May 21, 2024

ವಿಡಿಯೋ ಬ್ಲರ್ ಮಾಡಿಲ್ಲ, ಹೆಣ್ಣು ಮಕ್ಕಳ ಮರ್ಯಾದೆ ಏನಾಗಬೇಕು? : ನಿಖಿಲ್ ಕುಮಾರಸ್ವಾಮಿ

ಮಂಡ್ಯ : ಪೆನ್ ಡ್ರೈವ್ ಹಂಚಿದ್ದು ಯಾರು? ಹೆಣ್ಣು ಮಕ್ಕಳ ಚಿತ್ರ ಬ್ಲರ್ ಮಾಡದೆ ವೈರಲ್ ಮಾಡಿದ್ರೆ ಮರ್ಯಾದೆ ಏನಾಗಬೇಕು? ಎಂದು ಜೆಡಿಎಸ್​​​ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ಜೀವ ಹೋದರೆ ಯಾರು ಹೊಣೆ? ರಾಜ್ಯ ಸರ್ಕಾರ ಉತ್ತರ ಕೊಡಲಿ. ವಿಡಿಯೋ ಮಾಡಿದ್ದು ಹಾಗೂ ಪೆನ್ ಡ್ರೈವ್ ಮಾಡಿ ಹಂಚಿರುವ ಪಾಪಿಗಳ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜ್ವಲ್‌ ನನ್ನ ಸಂಪರ್ಕದಲ್ಲಿ ಇಲ್ಲ. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಪೆನ್​​ಡ್ರೈವ್ ಹಂಚಿದ್ದವರ ವಿರುದ್ಧವೂ ಕ್ರಮಕೈಗೊಳ್ಳಿ. ಜೊತೆಗೆ ಹೆಣ್ಣು ಮಕ್ಕಳ ಮುಖ ಕೂಡ ಬ್ಲರ್ ಮಾಡಿಲ್ಲ, ಒಂದು ವೇಳೆ ಹೆಣ್ಣುಮಕ್ಕಳ ಜೀವ ಹೋದರೆ ಯಾರು ಹೊಣೆ? ಈಗಾಗಲೇ ಹಾಸನ ಸಂಸದರನ್ನ ಅಮಾನತು ಮಾಡಿದ್ದಾರೆ, ನಮಗೆ ‘SIT ಮೇಲೆ ನಂಬಿಕೆ ಇಲ್ಲ, CBIಗೆ ಕೊಡಿ ಎಂದು ಹೇಳಿದ್ದಾರೆ.

ತನಿಖೆ ಪಾರದರ್ಶಕವಾಗಿ ನಡೀತಿದ್ಯಾ? ​​​

ತನಿಖೆ ಪಾರದರ್ಶಕವಾಗಿ ನಡೆಯುತ್ಯಿದ್ಯಾ? ಇಲ್ವಾ? ಅನ್ನೋದು ಜನರ ಮನಸ್ಸಿನಲ್ಲಿ ಪ್ರಶ್ನೆ ಇದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಬೆಳವಣಿಗೆ ನೋಡಿದ್ರೆ ತನಿಖೆ ಬಗ್ಗೆ ಸಾಕಷ್ಟು ಪ್ರಶ್ನೆ ಇದೆ. ಕೋರ್ ಕಮಿಟ್ ಅಧ್ಯಕ್ಷ ಜಿಟಿ ದೇವೇಗೌಡ್ರು ಸಭೆ ಮಾಡಿದ್ದಾರೆ. SIT ತನಿಖೆ ಮುಂದುವರಿಸಲಿ. ರಾಜ್ಯದ ಪ್ರಜೆಯಾಗಿ ಬೇಸರವಾಗುತ್ತೆ. ವಿಡಿಯೋ ಮಾಡಿರೋದು ಒಂದು ಕಡೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಾದ ಒಂದು ಸರ್ಕಾರ ಬೀದಿಗೆ ತಂದಿಟ್ಟಿದೆ. ಎಲ್ಲೊ ಒಂದು ಕಡೆ ಸರ್ಕಾರ ಕೂಡ ಉತ್ತರ ಕೊಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES