Tuesday, May 21, 2024

ಬಸವ ಜಯಂತಿ : ಮಗುವನ್ನು ಬಸವಣ್ಣನಂತೆ ಅಲಂಕರಿಸಿ, ಪೂಜೆ ಮಾಡಿದ ತಾಯಿ

ಬೆಂಗಳೂರು : ಇಂದು ವಿಶ್ವಗುರು ಎಂದೇ ಖ್ಯಾತಿ ಪಡೆದ ಬಸವಣ್ಣನವರ ಜಯಂತಿ. ಈ ಸಂಭ್ರಮದಲ್ಲಿ ತಾಯಿಯೊಬ್ಬರು ತನ್ನ ಮುದ್ದು ಮಗುವನ್ನು ಬಸವಣ್ಣನಂತೆ ಅಲಂಕರಿಸಿ, ಎತ್ತುಗಳ ಜೊತೆ ಪೂಜೆ ಸಲ್ಲಿಸಿದ್ದಾರೆ. ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

12ನೇ ಶತಮಾನದಲ್ಲಿ ಅಸ್ಪೃಶ್ಯತೆ ಹಾಗೂ ಅಸಮಾನತೆ ವಿರುದ್ಧ ಶಾಂತಿಯುತ ಹೋರಾಟ ಮಾಡಿದ್ದು ಅಣ್ಣ ಬಸವಣ್ಣ. ಇದರ ಜೊತೆಗೆ ಸತಿ ಪದ್ಧತಿ, ಜಾತಿ ಅಸಮಾನತೆ, ಶಿಕ್ಷಣ ಹಾಗೂ ತಮ್ಮ ವಚನಗಳ ಮೂಲಕ ಕ್ರಾಂತಿಯನ್ನೇ ಸೃಷ್ಟಿಸಿಸದ್ದು ಬಸವಣ್ಣ.

ಈ ಮಹಾನ್ ಮಾನವತಾವಾದಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿದರು. ತಂದೆ ಮಾದರಸ, ತಾಯಿ ಮಾದಲಂಬಿಕೆ (ಬಸವ, ಬಸವೇಶ್ವರ ). ಭಾರತದ 12ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು. ಅಲ್ಲದೇ, ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು.

ಕರ್ನಾಟಕದ ಬಸವಣ್ಣ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಬಸವೇಶ್ವರರು ಒಬ್ಬ ಸಂತ, ಕವಿ, ಆಡಳಿತಗಾರ ಮತ್ತು ಉತ್ಕಟ ಸಮಾಜ ಸುಧಾರಕ ಮತ್ತು ಭಾರತದ ಶ್ರೇಷ್ಠ ಆಧ್ಯಾತ್ಮಿಕ ಶಿಕ್ಷಕರಲ್ಲಿ ಒಬ್ಬರು. ಬಸವಣ್ಣನವರ ಈ ಸಂಕ್ಷಿಪ್ತ ಜೀವನ ಚರಿತ್ರೆಯು ಕೇವಲ ಔಪಚಾರಿಕ ವಿವರವಾಗಿದೆ. ಪ್ರವಾದಿಗಳು ಮತ್ತು ಸಂತರ ನಿಜವಾದ ಜೀವನಚರಿತ್ರೆ ಅವರ ಪ್ರಪಂಚದ ವಿಕಸನದ ಇತಿಹಾಸ, ಅವರ ಆಧ್ಯಾತ್ಮಿಕ ಜೀವನ, ಅವರ ದೃಷ್ಟಿ, ಸಾಕ್ಷಾತ್ಕಾರ ಮತ್ತು ಧ್ಯೇಯ.

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ

ರಾಜ್ಯ ಸರ್ಕಾರ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಘೋಷಣೆ ಮಾಡಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಇಡುವಂತೆ ಆದೇಶ ಮಾಡಿದೆ. ಅದರಂತೆ ಇಂದು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವ ಜಯಂತಿ ಆಚರಿಸಲಾಗಿದೆ.

RELATED ARTICLES

Related Articles

TRENDING ARTICLES