Tuesday, May 21, 2024

ಕಾಮುಕ ‘ಪ್ರಜ್ವಲ್’ ವಿರುದ್ಧ ಮತ್ತೊಂದು FIR : ತಾಯಿ ಭವಾನಿಗೆ ನೋಟಿಸ್!

ಬೆಂಗಳೂರು : ಕಾಮುಕ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದ್ದು, ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಸಿಐಜಿ ಸೈಬರ್ ಕ್ರೈಂ ಠಾಣೆಯಲ್ಲಿ FIR ದಾಖಲಾಗಿದ್ದು, 3ನೇ ಎಫ್ಐಆರ್‌ನಲ್ಲಿ ಒಂದಕ್ಕಿಂತ ಒಂದು ಕಠಿಣ ಸೆಕ್ಷನ್‌ ಹಾಕಲಾಗಿದೆ. ಹೀಗಾಗಿ, ಪ್ರಜ್ವಲ್​ ವಿರುದ್ಧ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗ್ತಿದೆ.

IPC ಸೆಕ್ಷನ್ 376(2)(N), 376(2)(K), 354(A), 354(B), 354(C), 506 ಅಡಿಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ FIR ದಾಖಲಾಗಿದೆ. ಎಸ್​ಐಟಿ ಪ್ರಜ್ವಲ್​ ರೇವಣ್ಣ ರಾಸಲೀಲೆ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.

ಎಸ್​ಐಟಿ ಅಧಿಕಾರಿಗಳು ಇಂದು ಬೆಂಗಳೂರಿನ ಬಸವನಗುಡಿ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. SIT ಅಧಿಕಾರಿಗಳು ಪಂಚನಾಮೆ ಮಾಡುವ ಸಾಧ್ಯತೆಯಿದ್ದು, ಪಂಚನಾಮೆಗೆ ಬೇಕಿರುವ ಪರಿಕರಗಳನ್ನ ತಂದಿದ್ದಾರೆ. ಲ್ಯಾಪ್​ಟಾಪ್​, ಪ್ರಿಂಟರ್​ ತಂದಿದ್ದು, ಸಂತ್ರಸ್ತೆ ಮಾಡಿರುವ ಆರೋಪಗಳ ಬಗ್ಗೆ SIT ತಾಳೆ ಮಾಡಿದ್ದಾರೆ.

ತಾಯಿ ಭವಾನಿಗೆ ನೋಟಿಸ್​..!

ಪ್ರಕರಣದ ಸಂತ್ರಸ್ತೆ ಅಪಹರಣ ಕೇಸ್ ಸಂಬಂಧ ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣಗೂ ಎಸ್ಐಟಿ ನೋಟಿಸ್ ನೀಡಿದೆ. 2ನೇ ಬಾರಿಗೆ ನೋಟಿಸ್ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ. ವಾಟ್ಸಾಪ್‌ ಮೂಲಕ SIT ನೋಟಿಸ್ ರವಾನೆ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಭವಾನಿ ರೇವಣ್ಣರನ್ನೂ ಎಸ್​ಐಟಿ ಅರೆಸ್ಟ್ ಮಾಡಲಿದ್ಯಾ? ಎಂದು ಕಾದುನೋಡಬೇಕಿದೆ.

3ನೇ ಕೇಸ್​ನಲ್ಲಿ ಹಾಕಿರುವ ಸೆಕ್ಷನ್..?

  • 376(2)(N) : ಮಹಿಳೆ ಮೇಲೆ ಪದೇಪದೆ ಅತ್ಯಾಚಾರ
  • 354(A) : ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ‌
  • 354(B) : ಬಟ್ಟೆ ಹಿಡಿದು ಎಳೆದಾಡಿದ ಆರೋಪ
  • 354(C) : ಖಾಸಗಿ ಚಿತ್ರ ಸೆರೆ ಹಿಡಿದು ವೀಕ್ಷಣೆ, ಒಪ್ಪಿಗೆ ಇಲ್ಲದೆ ಪ್ರಸಾರ
  • 506 : ಬೆದರಿಕೆ ಹಾಕುವುದು

RELATED ARTICLES

Related Articles

TRENDING ARTICLES