Monday, May 13, 2024

ಹಡಗು ಗುದ್ದಿ ಬಾಲ್ಟಿಮೋರ್​ನ ಬ್ರಿಡ್ಜ್ ಕುಸಿತ

ಅಮೇರಿಕಾ : ಸರಕು ಸಾಗಾಣಿಕ ಹಡಗೊಂದು ಬಾಲ್ಟಿಮೋರ್​ನ ಹೊರವಲಯದಲ್ಲಿರುವ ಫ್ರಾನ್ಸಿಸ್ ಸ್ಕಾಟ್​ ಕೀ ಬ್ರಿಡ್ಜ್​ ನ ಪಿಲ್ಲರ್​ಗೆ ಗುದ್ದಿದ ಪರಿಣಾಮ ಬ್ರಿಡ್ಜ್​ ಸಂಪೂರ್ಣ ಕುಸಿದು ಬಿದ್ದಿರುವ ಘಟನೆ ನಡೆದಿದೆ.

ಮಂಗಳವಾರ ಮುಂಜಾಬೆ 1.25ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಬ್ರಿಡ್​ ಸಂಪೂರ್ಣ ಕುಸಿದುಬಿದ್ದಿದೆ. ಘಟನೆಯಿಂದಾಗಿ ಹಡಗಿನಲ್ಲಿದ್ದ ಕಾರ್ಮಿಕರು ನೀರುಪಾಲಾಗಿರುವ ಸಾಧ್ಯತೆ ಇದೆ ಎಂದು ಬಾಲ್ಟಿಮೋರ್​ ಕೌಂಟಿ ಅಗ್ನಿಶಾಮಕ ಸಿಬ್ಬಂದಿಗಳು ಧೃಡಪಡಿಸಿದ್ದಾರೆ.

ಇದನ್ನೂ ಓದಿ:  ಯುದ್ಧ ಆರಂಭಿಸುವ ಮುನ್ನ ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದೇನೆ : ಡಿ.ಕೆ. ಶಿವಕುಮಾರ್

ಇನ್ನು ಈ ಘಟನೆಯಿಂದಾಗಿ ಎರಡು ರಾಜ್ಯಗಳ ಸಂಪರ್ಕಕೊಂಡಿ ಕಡಿತಗೊಂಡಿದ್ದು ಸದ್ಯ ಈ ಮಾರ್ಗವನ್ನು ಬಳಸದೆ ಅನ್ಯ ಮಾರ್ಗದಲ್ಲಿ ಸಂಚರಿಸುವಂತೆ ಮೇರಿಲ್ಯಾಂಡ್​ ಸಾರಿಗೆ ಇಲಾಖೆ ಮನವಿ ಮಾಡಿಕೊಂಡಿದೆ.

ಮೆರಿಲ್ಯಾಂಡ್​ ನ ಪೆಟಾಪ್ಸ್​ಕೋ ನದಿಗೆ ಅಡ್ಡಲಾಗಿ ಕಟ್ಟಿದ್ದ ಈ ಸೇತುವೆ ಇದಾಗಿದ್ದು. ಅಪಘಾತಕ್ಕೆ ಕಾರಣವಾದ ಹಡಗು ಸಿಂಗಾಪುರ ಮೂಲದ ‘ದಿ ಡಾಲಿ’ ಎಂದು ತಿಳಿದು ಬಂದಿದೆ. ಈ ಹಡಗು 948 ಅಡಿಗಳಷ್ಟು ಉದ್ದವಿದ್ದು  ಸರಕುಗಳನ್ನು ಹೊತ್ತು ಶ್ರೀಲಂಕಾದ ಕೊಲೊಂಬೊಗೆ ಹೋಗುವುದಿತ್ತು ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES