Monday, May 20, 2024

ಹಾಸನ, ಮಂಡ್ಯ ಅಲ್ಲ.. ಹುಬ್ಬಳ್ಳಿ-ಧಾರವಾಡ ಜನರೂ ಪ್ರಜ್ವಲ್ ವಿಡಿಯೋ ನೋಡಿದ್ದಾರೆ : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ಹಾಸನ, ಮಂಡ್ಯ ಅಲ್ಲ.. ಇಲ್ಲಿನ ಹುಬ್ಬಳ್ಳಿ-ಧಾರವಾಡದ ಹಳ್ಳಿ ಭಾಗದಲ್ಲಿಯೂ ಜನರು ಪ್ರಜ್ವಲ್ ರೇವಣ್ಣರ ಅಶ್ಲೀಲ ವಿಡಿಯೋ ನೋಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಸಮಾಧಾನ ಹೊರಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪೂರ್ಣವಾಗಿ ಈ ಪ್ರಕರಣದಲ್ಲಿ ಸಾಕಷ್ಟು ಗೊಂದಲವಿದೆ. ನಮ್ಮ ಪಾರ್ಟಿ ಹಾಗೂ ನನ್ನ ನಿಲುವು ಸ್ಪಷ್ಟವಿದೆ. ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ತನಿಖೆ ನಿಕ್ಷಪಾತವಾಗಿ ನಡೆಯಬೇಕು. ಆದರೆ, ಇಲ್ಲಿಯವರೆಗೆ ರಾಜ್ಯ ಸರ್ಕಾರ ಯಾವುದೇ ರೀತಿ ಉತ್ತರ ಕೊಟ್ಟಿಲ್ಲ. ಏಪ್ರಿಲ್ 21ನೇ ತಾರೀಖಿನಂದು ಪೆನ್​ಡ್ರೈವ್ ಹೊರಗ ಬಂತು. ಗ್ರಾಮೀಣ ಪ್ರದೇಶದ ಜನರು ಈ ವಿಡಿಯೋ ನೋಡಿದ್ದಾರೆ. ಆದರೂ, ಸರ್ಕಾರ ಯಾಕೆ ಕನ್ಮುಚ್ಚಿ ಕುಳಿತಿತ್ತು? ಎಂದು ಪ್ರಶ್ನೆ ಮಾಡಿದ್ದಾರೆ.

ಸರ್ಕಾರದ ನಡೆ ಸಂಶಯಕ್ಕೆ ಹುಟ್ಟಿಸಿದೆ

ಸರ್ಕಾರ ಬೇಗನೇ ಎಫ್ಐಆರ್ ಮಾಡಲಿಲ್ಲ, ಪ್ರಜ್ವಲ್ ರೇವಣ್ಣರನ್ನು ವಿದೇಶಕ್ಕೆ ಹೋಗೋದನ್ನ ತಡೆಯಲಿಲ್ಲ. ಇಂತಹ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಉತ್ತರ ನೀಡಿಲ್ಲ. ರೇವಣ್ಣನವರ ವಿಷಯದಲ್ಲಿ ಸರ್ಕಾರದ ನಡೆಯನ್ನ ಗಮನಿಸಿದರೆ ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಡಿ.ಕೆ. ಶಿವಕುಮಾರ್ ರಾಜೀನಾಮೆ ಕೊಡಲಿ

ಮಹಿಳೆ ಅಪಹರಣ ವಿಚಾರದಲ್ಲಿ ಸರಿಯಾದ ದಾಖಲೆಗಳನ್ನು ಮೆಂಟೇನ್ ಮಾಡಿಲ್ಲ. ಹಾಗಾಗಿ, ಈ ಪ್ರಕರಣವನ್ನ ಸಿಬಿಐಗೆ ಕೊಡಬೇಕು. ಸಮಗ್ರ ತನಿಖೆಯಾಗಬೇಕಾಗಿದೆ. ಇಲ್ಲವಾದರೆ, ಡಿ.ಕೆ. ಶಿವಕುಮಾರ್ ರಾಜೀನಾಮೆ ಕೊಡಬೇಕು. ಡಿ.ಕೆ. ಶಿವಕುಮಾರ್ ರಾಜೀನಾಮೆ ಕೊಟ್ಟು ಎಸ್​ಐಟಿ ತನಿಖೆ ಎದುರಿಸಲಿ ಎಂದು ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES