Saturday, May 11, 2024

ಸವಾಲ್ ಯಾಕೆ ಕುಸ್ತಿ ಆಡೋಕೆ ಬರಲಿ ನೋಡೋಣ : ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಜಾತಿ ಗಣತಿ ಬಿಡುಗಡೆ ವಿಚಾರದಲ್ಲಿ ನಾವಾ ನೀವಾ ನೋಡೇ ಬಿಡೋಣ ಎಂದು ಅಹಿಂದ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರ್​ ಶಿವಶಂಕಪ್ಪಗೆ ಸವಾಲ್ ಹಾಕಿದ್ದರು. ಇದಕ್ಕೆ ಶಾಮನೂರು ಶಿವಶಂಕರಪ್ಪ ತಿರುಗೇಟು ನೀಡಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ಬಿಡುಗಡೆ ವಿಚಾರವಾಗಿ ಅಹಿಂದ ಮುಖಂಡರು ನಮ್ಮ ಜೊತೆ ಮಾತನಾಡಿಲ್ಲ, ಈ ಕುರಿತು ನಮ್ಮ ಸಮಾಜದ ಮುಖಂಡರೊಂದಿಗೆ ಮಾತನಾಡಿ ಬಳಿಕ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇವೆ. ಇನ್ನು, ಅಹಿಂದ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಅವರು ಜಾತಿ ಗಣತಿ ಬಿಡುಗಡೆ ವಿಚಾರದಲ್ಲಿ ನಾನಾ ನೀನ ನೋಡಿಯೇ ಬಿಡೋಣ ಎಂದಿರುವ  ಕುರಿತು ಪ್ರತಿಕ್ರಿಯಿಸಿ, ಅಹಿಂದ ಪಹಿಂದ ನಮಗೆ ಗೊತ್ತು, ಅವರನ್ನ ತಗೋಂಡ್​ ನಾವೇನು ಮಾಡೋಣ ನಮಗೆ ಜಾತಿ ಗಣತಿ ಒಂದೇ ಗೊತ್ತಿರೋದು, ಬರೀ ಸವಾಲ್ ಯಾಕೆ ನೇರವಾಗಿ ಕುಸ್ತಿ ಆಡೋಕೆ ಬರಲಿ ಎಂದು ಶಾಮನೂರು ಗುಡುಗಿದ್ದಾರೆ.

ಇದನ್ನೂ ಓದಿ: ಶಿವರಾತ್ರಿ ಹಬ್ಬಕ್ಕೆ KSRTC ವತಿಯಿಂದ ಸಿಹಿಸುದ್ದಿ!

ಜಾತಿ ಗಣತಿ ಪ್ರತಿ ಸ್ವೀಕರಿಸಿದ ಸಿಎಂ! :

ಕಳೆದ 9 ವರ್ಷಗಳಿಂದ ನಿರಂತರವಾಗಿ ಸಂಚಲನ ಸೃಷ್ಟಿಸಿದ್ದ ಕರ್ನಾಟಕ ಜಾತಿಗಣತಿ ವರದಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶಗಳ ಅಧ್ಯಯನ ವರದಿ 2024)ಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವೀಕಾರ ಮಾಡಿದ್ದಾರೆ. ಇನ್ನು ಎರಡು ಬೃಹತ್ ಮೂಟೆಗಳಲ್ಲಿ ಜಾತಿ ಗಣತಿ ವರದಿಗಳ ಪ್ರತಿಯನ್ನು ವಿಧಾನಸೌಧಕ್ಕೆ ತಂದು ಅವುಗಳನ್ನು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಹಸ್ತಾಂತರ ಮಾಡಿದ್ದರು.

ಜಾತಿ ಗಣತಿ ವರದಿಯಲ್ಲಿ ಏನೇನಿದೆ? :
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರಿಂದ ಸಲ್ಲಿಕೆಯಾದ ಜಾತಿ ಗಣತಿ ವರದಿಯಲ್ಲಿ ಒಟ್ಟು 13 ಪ್ರತಿಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲ ಪ್ರತಿಗಳು ಕೂಡ ದೊಡ್ಡ ಸಂಪುಟಗಳಾಗಿವೆ. ಕೆಲವು ಸಂಪುಟಗಳನ್ನು ಎರಡು-ಮೂರು ಭಾಗಗಳಾಗಿ ಮಾಡಲಾಗಿದೆ. ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಎಲ್ಲ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಾನಮಾನಗಳ ಸಮೀಕ್ಷೆಯನ್ನು ವರದಿಯು ಒಳಗೊಂಡಿದೆ.

RELATED ARTICLES

Related Articles

TRENDING ARTICLES