Saturday, May 11, 2024

ನಾನು ಕೋಲು ಹಿಡಿದು ರಾಜಕಾರಣ ಮಾಡಲ್ಲ : ಸಿದ್ದರಾಮಯ್ಯ

ಕೊಳ್ಳೇಗಾಲ : ನಾನು ಕೋಲು ಹಿಡಿದು ರಾಜಕಾರಣ ಮಾಡಲ್ಲ. 81 ವರ್ಷದ ನಂತರ ಚುನಾವಣೆಗೆ ನಿಲ್ಲಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಕೊಳ್ಳೇಗಾಲದ ಬಸ್ತಿಪುರ ಬಡಾವಣೆಯಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ. ಮುಂದೆಯೂ ಸಹ ಮಾಡುತ್ತೇನೆ ಎಂದಿದ್ದಾರೆ. ಮುಂದಿನ ವಿಧಾನಸಭಾ ಅವಧಿ ಪೂರ್ಣಗೊಂಡಾಗ ನನಗೆ 81 ವರ್ಷ ಆಗುತ್ತದೆ. ಹಾಗಾಗಿ, ಇದು ನನ್ನ ಕೊನೆಯ ಚುನಾವಣೆ. ನನ್ನ ಮಗ ಈಗಾಗಲೇ ರಾಜಕೀಯಕ್ಕೆ ಪ್ರವೇಶಿಸಿ ಶಾಸಕನೂ ಆಗಿದ್ದಾನೆ. ರಾಜಕೀಯ ಎಂದರೆ ಅಧಿಕಾರ ಪಡೆದು ಹಣ ಮಾಡುವುದಲ್ಲ, ಮಜಾ ಮಾಡುವುದಲ್ಲ, ನಾಡಿನ ಜನರ ಸೇವೆಯನ್ನು ಮಾಡುವುದು ಎಂದರು.

RELATED ARTICLES

Related Articles

TRENDING ARTICLES