Friday, May 10, 2024

ನನ್ನ ಬಗ್ಗೆ ಮಾತನಾಡುದ್ರೆ ಸುಮ್ಮನೇ ಇರಲ್ಲ : ಹೆಚ್ಡಿಕೆ

ಬೆಂಗಳೂರು: ಸಿದ್ದರಾಮಯ್ಯನವರ ಸಭೆಯನ್ನ ನಿಲ್ಲಿಸಲು ಹುನ್ನಾರ ನಡೆಸಿದ್ದಾರೆ ಅಂತಾರೆ, ಅದು ಅವರ ಸಭೆ. ಅದನ್ನ ದುರುಪಯೋಗ ಪಡಿಸಿಕೊಳ್ಳೋ ಅಗತ್ಯ ನಂಗೆ ಇಲ್ಲ ಎಂದು ಮಾಜಿ ಕಾಂಗ್ರೆಸ್​​ ಶಾಸಕ ಕೆ.ಎನ್​​ ರಾಜಣ್ಣ ಹೇಳಿಕೆಗೆ ಹೆಚ್​​ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತಾ ಮಿತ್ರ ವಾಹನಗಳಿಗೆ ಚಾಲನೆ ಕೊಟ್ಟಿದ್ದೇವೆ. ಬೆಂಗಳೂರಿಗರ ಜನತೆಗೆ ನಮ್ಮ ಸಾಧನೆಗಳನ್ನ ತಲುಪಿಸಲು ಎಂದರು.

ಇನ್ನು ಸಿದ್ದರಾಮಯ್ಯನವರನ್ನು ನಾನ್ಯಾಕೆ ದ್ವೇಷ ಮಾಡಲಿ. ನನ್ನ ಹೇಳಿಕೆಯನ್ನ ತಿರುಚಿ ಬಿಟ್ಟಿದ್ದಾರೆ ಅಂತಾರೆ. ಆದರೆ, ನಿನ್ನೆ ನಾನು ಕಾಂಗ್ರೆಸ್ ಬಗ್ಗೆ ಮಾತಾಡಲೇ ಇಲ್ಲ. ನನ್ನ ಬಗ್ಗೆ ಮಾತಾಡಿದಾಗ ನಾನು ಮೌನಕ್ಕೆ ಶರಣಾಗಲು ಸಾಧ್ಯವಿಲ್ಲ. ಪಾಪ ಅವರು 75 ವರ್ಷ ಆಚರಣೆ ಮಾಡಿಕೊಳ್ತಿದ್ದಾರೆ ಎಂದು ತಿಳಿಸಿದರು.

ಇನ್ನು ಇದೇ ವೇಳೆ ಹಿಂದಿನ ಸರ್ಕಾರಗಳ ನಿರ್ಲಕ್ಷ್ಯದಿಂದ ಬೆಂಗಳೂರು ಅಭಿವೃದ್ದಿ ನೆನೆಗುದಿಗೆ ಎಂದು ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, 2008-10 ರವರೆಗೆ ಬಿಜೆಪಿ ಸರ್ಕಾರ ಇತ್ತು. ಮತ್ತೆ ಐದು ವರ್ಷ ಬಿಜೆಪಿನೇ ಇತ್ತು. 2006ರಲ್ಲಿ ನಾನು ಸಿಎಂ ಆಗಿದ್ದೆ. ಮೈತ್ರಿ ಸರ್ಕಾರ ಅವಧಿಯಲ್ಲಿ ಪಿಆರ್ ಆರ್ ಯೋಜನೆಯನ್ನ ಜಾರಿ ಮಾಡಿದ್ದೆ. ಐದು ಸ್ಯಾಟಲೈಟ್ ಟೌನ್ ನಿರ್ಮಾಣ ಮಾಡಲು ಮುಂದಾಗಿದ್ದೆ. ಕೊನೆ ಹಂತದವರೆಗೆ ಯೋಜನೆ ತಂದು ನಿಲ್ಲಿಸಿದ್ದೆ. ಟನಲ್ ರೋಡ್ ಅಡಿಪಾಯ ಹಾಕಿದ್ದೆ. ನಗರೋತ್ಥಾನ ಯೋಜನೆಯಡಿ 9 ಸಾವಿರ ನೀಡಬೇಕು. ಆದ್ರೆ ಇವರು 4 ಸಾವಿರ ಕೋಟಿಗೆ ನಿಲ್ಲಿಸಿದ್ದಾರೆ. ಕಾಂಗ್ರೆಸ್ -ಬಿಜೆಪಿ ಎರಡು ಪಕ್ಷಗಳಿಂದ ಬೆಂಗಳೂರು ಅಭಿವೃದ್ಧಿ ನೆನೆಗುದಿಗೆ ತಂದು ನಿಲ್ಲಿಸಿದ್ದಾರೆ ಎಂದು ಕಿಡಿಕಾಡಿದರು.

ಅಲ್ಲದೆ ಯಾವ ಕಾರಣಕ್ಕೆ ಬಿಬಿಎಂಪಿ ಕಚೇರಿಗೆ ಬೆಂಕಿ ಇಟ್ಟರು. ಇಂಥ ಪರಿಸ್ಥಿತಿಗೆ ಎರಡು ಪಕ್ಷಗಳು ಕಾರಣ. ಅಭಿವೃದ್ಧಿ ಹೆಸರಿನಲ್ಲಿ ಲೂಟಿ ನಡೀತಾನೇ ಇದೆ ಎಂದು ಆಕ್ರೋಶ ಹೊರಹಾಕಿದರು.

RELATED ARTICLES

Related Articles

TRENDING ARTICLES