Friday, May 10, 2024

ಕೊಡಗಿನ ಮಕ್ಕಳಿಗೆ ಕುಂಡೇ ಹಬ್ಬದ ಸಂಭ್ರಮ

ಮಡಿಕೇರಿ : ವಿಚಿತ್ರ ವೇಷ ಹಾಕಿ ಹಾಡುತ್ತಾ ಅಶ್ಲೀಲವಾಗಿ ಬೈಯುತ್ತಾ ಹಬ್ಬ ಮಾಡ್ತಿರೋ ದೃಷ್ಯಗಳು ಕಂಡು ಬಂದಿದ್ದು, ಕರ್ನಾಟಕದ ಕಾಶ್ಮೀರದಲ್ಲಿ. ಕೊಡಗಿನಲ್ಲಿ ನಡೆಯುವ ಬುಡಕಟ್ಟು ಜನರ ವಿಶೇಷ ಕುಂಡೆ ಹಬ್ಬ ಇದು. ಕೊಡಗಿನ ಬುಡಕಟ್ಟು ಜನಾಂಗದವರು ಚಿತ್ರ ವಿಚಿತ್ರ ವೇಷ ಹಾಕಿ ಎರಡು ದಿನ ಬಾಯಿಗೆ ಬಂದಂತೆ ಬೈಯ್ಯುತ್ತಾ ರಸ್ತೆಗಳಲ್ಲಿ ಕುಣಿಯುತ್ತಾ ಈ ವಿಶಿಷ್ಟ ಹಬ್ಬ ಆಚರಿಸುತ್ತಾರೆ. ನಂತರ ಗೋಣಿಕೊಪ್ಪದ ದೇವರಪುರದ ಅಯ್ಯಪ್ಪ ದೇವಾಲಯದ ಮೈದಾನದಲ್ಲಿ ಸೇರಿ ಬೈಯ್ದಿದ್ದಕ್ಕೆ ದೇವರಲ್ಲಿ ಕ್ಷಮೆ ಕೇಳಿ ಹಬ್ಬವನ್ನು ಆಚರಿಸುವುದು ಇಲ್ಲಿನ ವಾಡಿಕೆ.

ಕುಂಡೇ ಅಂದ ನೋಡು…ಕುಂಡೆ ಚಂದ ನೋಡು, ಕುಂಡೆಗ್​ ಲಕ್ಸ್‌ ಸೋಪು ಕುಂಡೇಗ್​ ಜ್ವರ ಬಂತು ಕುಂಡೆಗ್​ ವಿಕ್ಸ್​ ಹಚ್ಚಿ… ಹೀಗೆ ಬಾಯಿಗೆ ಬರುವ ಅಷ್ಟೂ ಅಶ್ಲೀಲ ಶಬ್ದಗಳನ್ನು ಖುಷಿ-ಖುಷಿಯಾಗಿ ಆನಂದಿಸುವುದೇ ಕುಂಡೆ ಹಬ್ಬ. ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ರದ್ದಾಗಿದ್ದ ಕುಂಡೆ ಹಬ್ಬ ಈ ಬಾರಿ ಬಹಳ ಅದ್ಧೂರಿಯಾಗಿ ಜರುಗಿದೆ. ಕೆಟ್ಟ ಪದಗಳಿಂದ ಬೈಯ್ಯುತ್ತಿದ್ದರೂ ಯಾರು ಏನೂ ಹೇಳುವುದಿಲ್ಲ, ಅವರಿಗೆ ಸ್ವಲ್ಪ ಹಣ ನೀಡಿ ಆ ಬೈಗುಳವನ್ನು ಕೇಳಿ ಖುಷಿ ಪಡುತ್ತಾರೆ, ಅದುವೇ ಈ ಹಬ್ಬದ ವಿಶೇಷ.

ಹಬ್ಬದಲ್ಲಿ ಪುರುಷರು ಮಹಿಳೆಯರ ಉಡುಪು ಧರಿಸಿ ಅಥವಾ ಸ್ತ್ರೀಯಂತೆ ಕಾಣುವಂತೆ ವಿಚಿತ್ರದಲ್ಲಿ ವಿಚಿತ್ರ ವೇಷಗಳನ್ನು ತೊಟ್ಟು ಮೈಗೆಲ್ಲಾ ಬಣ್ಣ ಬಳಿದು, ಕೈಗಳಲ್ಲಿ ಕೋಲು, ಹಳೆಯ ಡ್ರಮ್‌ ಅಥವಾ ಟಿನ್ ಬಡಿದು ಭಿಕ್ಷೆ ಬೇಡುತ್ತಾರೆ. ದಾರಿಯಲ್ಲಿ ಕಂಡ ಎಲ್ಲರನ್ನೂ ಅಡ್ಡ ಹಾಕಿ ಬೈಯ್ದು ಹಣ ಕೇಳುತ್ತಾರೆ. ಹಣ ಕೊಟ್ಟಾಗ ಒಳ್ಳೆ ಕುಂಡೇ ಎಂದು ಹಾಡುತ್ತಾ ಮುಂದೆ ಸಾಗುತ್ತಾರೆ. ನಂತ್ರ ಈ ಹಬ್ಬದಲ್ಲಿ ಭದ್ರಕಾಳಿಯನ್ನು ಪೂಜಿಸಲಾಗುತ್ತೆ. ಕಷ್ಟಗಳು ಬಂದ್ರೆ ಈ ದೇವರ ಹತ್ತಿರ ಬಂದು ಹರಕೆ ಕಟಿಕೊಂಡ್ರೆ ಒಳೆಯದಾಗುತ್ತೆ ಎಂಬ ಪ್ರತೀತಿ ಇದೇ. ಈ ಕಾರಣಕ್ಕಾಗಿ ಈ ರೀತಿ ವೇಷ ಧರಿಸಿ ಹರಕೆ ತೀರಿಸುತ್ತಾರೆ. ಕೊಡಗು ಅಲ್ಲದೇ ಮೈಸೂರು ಜಿಲ್ಲೆಯ ಹಲವು ಹಾಡಿಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಕೆಲಸ ಮಾಡುವ ಬುಡಕಟ್ಟು ಜನರು ಕುಂಡೇ ಹಬ್ಬ ಆಚರಿಸುತ್ತಾರೆ.

ಹೀಗೆ ಎರಡು ದಿನ ಬಾಯಿಗೆ ಬಂದಂತೆ ಬೈಯ್ದು ನಂತರ ಭದ್ರಕಾಳಿ ದೇವಾಲಯಕ್ಕೆ ಬಂದು ದೇವಿ ಬಳಿ ಬೈಯ್ದಿದ್ದಕ್ಕೆ ತಪ್ಪಾಯ್ತು ಎಂದು ಕೇಳಿಕೊಳ್ಳುವುದರೊಂದಿಗೆ ಹಬ್ಬವು ಮುಕ್ತಾಯವಾಗುತ್ತದೆ.

RELATED ARTICLES

Related Articles

TRENDING ARTICLES