Friday, May 10, 2024

ಟಾಸ್ ಗೆದ್ದ RR ಬೌಲಿಂಗ್ ಆಯ್ಕೆ : ಬಲಿಷ್ಠ RR ವಿರುದ್ಧ ರಾಹುಲ್ ಪಡೆ ಗೆಲ್ಲುತ್ತಾ? ಕಾಮೆಂಟ್ ಮಾಡಿ

ಬೆಂಗಳೂರು : ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಟಾಸ್​ ಗೆದ್ದ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್​ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಅಟಲ್ ಬಿಹಾರಿ ವಾಜಪೇಯಿ (ಏಕನಾ) ಸ್ಟೇಡಿಯಂನಲ್ಲಿ ಐಪಿಎಲ್​ನ 44ನೇ ರೋಚಕ ಪಂದ್ಯ ನಡೆಯುತ್ತಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್​ಆರ್​ ಇಂದಿನ ಪಂದ್ಯವನ್ನು ಗೆದ್ದು ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ಸಜ್ಜಾಗಿದೆ.

ಐಪಿಎಲ್​ ಇತಿಹಾಸದಲ್ಲಿ ಉಭಯ ತಂಡಗಳು 4 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ರಾಜಸ್ಥಾನ್ ರಾಯಲ್ಸ್​ 3 ಪಂದ್ಯ ಹಾಗೂ ಲಕ್ನೋ ಒಂದು ಪಂದ್ಯ ಗೆದ್ದಿದೆ. ಮೊದಲು ಬ್ಯಾಟ್​ ಮಾಡಿದ ತಂಡವೇ ಎಲ್ಲಾ ಪಂದ್ಯಗಳನ್ನು ಗೆದ್ದಿದೆ.

ಪ್ರಸಕ್ತ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್​ 8 ಪಂದ್ಯಗಳನ್ನು ಆಡಿದೆ. ಈ ಪೈಕಿ 7 ಪಂದ್ಯಗಳನ್ನು ಗೆದ್ದು ಒಂದು ಪಂದ್ಯ ಮಾತ್ರ ಸೋತಿದೆ. 14 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಲಕ್ನೋ ಆಡಿರುವ 8 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು 3 ಪಂದ್ಯ ಸೋತಿದೆ. ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಲಕ್ನೋ ಸೂಪರ್ ಜೈಂಟ್ಸ್

ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್(ನಾಯಕ/ವಿ.ಕೀ.), ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಮ್ಯಾಟ್ ಹೆನ್ರಿ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಯಶ್ ಠಾಕೂರ್

ರಾಜಸ್ಥಾನ್ ರಾಯಲ್ಸ್

ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ/ವಿ.ಕೀ), ಪೊವೆಲ್, ಶಿಮ್ರಾನ್ ಹೆಟ್ಮೆಯರ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಾಲ್

RELATED ARTICLES

Related Articles

TRENDING ARTICLES