Saturday, May 11, 2024

ಪಾಂಡ್ಯ ಪಡೆ ವಿರುದ್ಧ ಡೆಲ್ಲಿಗೆ ರೋಚಕ ಗೆಲುವು : ಮುಂಬೈಗೆ ಮತ್ತೆ ಮುಖಭಂಗ

ಬೆಂಗಳೂರು : ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ 10 ರನ್​ಗಳ ರೋಚಕ ಗೆಲುವು ದಾಖಲಿಸಿತು. ಹಾರ್ದಿಕ್ ಪಾಂಡ್ಯ ಪಡೆ ಮತ್ತೆ ಮುಖಭಂಗ ಅನುಭವಿಸಿತು. ಈ ಗೆಲುವಿನೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 257 ರನ್​ ಗಳಿಸಿತು. ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 9 ವಿಕೆಟ್ ಕಳೆದುಕೊಂಡು 427 ರನ್​ ಗಳಿಸಲಷ್ಟೇ ಶಕ್ತವಾಯಿತು.

ಇನ್ನಿಂಗ್ಸ್​ ಆರಂಭಿಸಿದ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೇವಲ 8 ರನ್​ಗೆ ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್ 20 ಹಾಗೂ ಸೂರ್ಯಕುಮಾರ್ ಯಾದವ್ 26 ರನ್​ ಗಳಿಸಿ ಪೆವಿಲಿಯನ್ ಸೇರಿದರು. ಆ ಮೂಲಕ ಮತ್ತೆ ನಿರಾಸೆ ಮೂಡಿಸಿದರು.

ಸಂಕಷ್ಟದಲ್ಲಿದ್ದ ಮುಂಬೈಗೆ ತಿಲಕ್ ವರ್ಮಾ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಆಸೆರೆಯಾದರು. ಈ ಜೋಡಿ ಡೆಲ್ಲಿ ಕ್ಯಾಪಿಟಲ್ಸ್​ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ತಿಲಕ್ ವರ್ಮಾ 32 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 4 ಬೌಂಡರಿಗಳೊಂದಿಗೆ 63 ರನ್​ ಚಚ್ಚಿದರು. ಆದರೆ, ತಿಲಕ್ ವರ್ಮಾ ಏಕಾಂಗಿ ಹೋರಾಟ ಮುಂಬೈಗೆ ಗೆಲುವು ತಂದುಕೊಡಲಿಲ್ಲ.

ಉಳಿದಂತೆ ನಾಯಕ ಹಾರ್ದಿಕ್ ಪಾಂಡ್ಯ 46, ಟೀಮ್ ಡೇವಿಡ್ 37, ಪಿಯೂಷ್ ಚಾವ್ಲಾ 10, ಮೊಹಮ್ಮದ್ ನಬಿ 7 ರನ್​ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಮುಕೇಶ್ ಕುಮಾರ್ ಹಾಗೂ ರಸಿಖ್ ದಾರ್ ಸಲಾಮ್ ತಲಾ 3, ಖಲೀಲ್ ಅಹಮ್ಮದ್ 2 ವಿಕೆಟ್ ಪಡೆದರು.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 257 ರನ್​ ಗಳಿಸಿತು. ಡೆಲ್ಲಿ ​ ಪರ ಫ್ರೇಸರ್ ಮೆಕ್​ ಗುರ್ಕ್​ 84 ರನ್​ ಚಚ್ಚಿದರು. ಸ್ಟಬ್ಸ್​ 48, ಹೋಪ್ 41, ಪೊರೆಲ್ 36, ನಾಯಕ ರಿಷಭ್ ಪಂತ್ 29 ರನ್​ ಸಿಡಿಸಿದರು. ಮುಂಬೈ ಪರ ವುಡ್, ಬುಮ್ರಾ, ನಬಿ ಹಾಗೂ ಚಾವ್ಲಾ ತಲಾ ಒಂದು ವಿಕೆಟ್ ಪಡೆದರು. ಐಪಿಎಲ್​ ಇತಿಹಾಸದಲ್ಲೇ ಡೆಲ್ಲಿ ಕ್ಯಾಪಿಟಲ್ಸ್​ ಇದೇ ಮೊದಲ ಬಾರಿಗೆ 250 ರನ್​ ಗಳಿಸಿದ ದಾಖಲೆ ಬರೆಯಿತು.

RELATED ARTICLES

Related Articles

TRENDING ARTICLES