Saturday, May 11, 2024

ಮ್ಯಾಕ್ಸ್​ವೆಲ್​ ಮತ್ತೆ ಡಕ್​ : 6 ಪಂದ್ಯದಲ್ಲಿ 3 ಬಾರಿ ಸೊನ್ನೆ ಸುತ್ತಿ, ಕೆಟ್ಟ ದಾಖಲೆ ಬರೆದ ಮ್ಯಾಕ್ಸಿ

ಬೆಂಗಳೂರು : ಆಡಿದ್ದು 6 ಪಂದ್ಯ. 3 ಪಂದ್ಯಗಳಲ್ಲಿ ಗೋಲ್ಡನ್​ ಡಕ್. ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಕೆಟ್ಟ ದಾಖಲೆ ಬರೆದ ಮ್ಯಾಕ್ಸ್​ವೆಲ್.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೆ ಗೋಲ್ಡನ್ ಡಕ್ ಆದರು. ಈ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟಿಂಗ್ ಮಾಡಿತು. ಸತತ ವೈಫಲ್ಯದ ನಡುವೆಯೂ ಅವಕಾಶ ಪಡೆದ ಮ್ಯಾಕ್ಸ್​ವೆಲ್ ಶೂನ್ಯಕ್ಕೆ ಔಟಾದರು.

ಪ್ರಸಕ್ತ ಐಪಿಎಲ್​ ಆವೃತ್ತಿಯಲ್ಲಿ ಮ್ಯಾಕ್ಸ್​ವೆಲ್ 6 ಪಂದ್ಯಗಳನ್ನು ಆಡಿದ್ದಾರೆ. ಕೇವಲ 32 ರನ್​ ಮಾತ್ರ ಸಿಡಿಸಿದ್ದಾರೆ. ಚೆನ್ನೈ ವಿರುದ್ಧದ ಆರಂಭಿಕ ಪಂದ್ಯದಲ್ಲಿ ದೀಪಕ್ ಚಹಾರ್ ಬೌಲಿಂಗ್​ನಲ್ಲಿ ಶೂನ್ಯಕ್ಕೆ ಔಟಾದರು. ಪಂಜಾಬ್ ವಿರುದ್ಧದ ಎರಡನೇ ಪಂದ್ಯದಲ್ಲಿ ಕೇವಲ 3 ರನ್ ಗಳಿಸಿ ಔಟಾದರು.

ಕೆಕೆಆರ್ ವಿರುದ್ಧ 19 ಎಸೆತಗಳಲ್ಲಿ 228 ರನ್​ ಗಳಿಸಿದ್ದೇ ಮ್ಯಾಕ್ಸ್​ವೆಲ್ ಸಾಧನೆ. ಮತ್ತೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ಡಕೌಟ್ ಆದರು. ಆರ್​ಆರ್​ ವಿರುದ್ಧದ ಪಂದ್ಯದಲ್ಲಿ ಕೇವಲ ಒಂದು ರನ್​ ಗಳಿಸಿ ಪೆವಿಲಿಯನ್​ ಕಡೆ ಮುಖ ಮಾಡಿದರು. ಇಂದಿನ ಪಂದ್ಯದಲ್ಲಿ ಶ್ರೇಯಸ್​ ಗೋಪಾಲ್​ಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಹೀಗೆ ಬಂದು, ಹಾಗೆ ಹೋದ ವಿಲ್ ಜಾಕ್ಸ್

ಮುಂಬೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಪರ ಪದಾರ್ಪಣೆ ಮಾಡಿದ ವಿಲ್ ಜಾಕ್ಸ್ ಸಹ ನಿರಾಸೆ ಮೂಡಿಸಿದರು. ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಅಭಿಮಾನಿಗಳನ್ನು ರಂಜಿಸಿದರು. ಆದರೆ, ಎಂಟು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. 4ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಆಕಾಶ್ ಮಧ್ವಲ್ ಅವರಿಗೆ ವಿಕೆಟ್​ ಒಪ್ಪಿಸಿದರು.

RELATED ARTICLES

Related Articles

TRENDING ARTICLES