Friday, May 10, 2024

ಮೈಲಾರಿಗೆ 14 ವರ್ಷ: ಶಿವಣ್ಣ ಜತೆ ಆರ್ ಚಂದ್ರು ಹೊಸ ಸಿನಿಮಾ ಅನೌನ್ಸ್!

ಫಿಲ್ಮಿಡೆಸ್ಕ್​: ಸರ್ಕಾರದ ಪಂಚವಾರ್ಷಿಕ ಯೋಜನೆಗಳ ರೀತಿ ಒಟ್ಟೊಟ್ಟಿಗೆ ಐದೈದು ಪ್ರಾಜೆಕ್ಟ್​​ಗಳನ್ನ ಅನೌನ್ಸ್ ಮಾಡೋ ಮೂಲಕ ಆಡಿಕೊಳ್ಳೋರಿಗೆ ಸಖತ್ ಪಂಚ್ ನೀಡಿದ್ರು ಕಬ್ಜ ಡೈರೆಕ್ಟರ್ ಆರ್ ಚಂದ್ರು. ಇದೀಗ ಸ್ಯಾಂಡಲ್​ವುಡ್ ಲೀಡರ್ ಶಿವಣ್ಣನೊಟ್ಟಿಗೆ ಹೊಚ್ಚ ಹೊಸ ಸಿನಿಮಾನ ಅನೌನ್ಸ್ ಮಾಡಿದ್ದಾರೆ. ಅದಕ್ಕೆ ಒಂದು ಮಹತ್ವದ ಕಾರಣವೂ ಇದೆ.

ಹೌದು, ಆರ್​​ಸಿ ಸ್ಟುಡಿಯೋಸ್​,ಹೊಂಬಾಳೆ, ಕೆವಿಎನ್ ರೀತಿ ತಲೆ ಎತ್ತಿರೋ ಕನ್ನಡದ ಬಹುದೊಡ್ಡ ನಿರ್ಮಾಣ ಸಂಸ್ಥೆ. ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಕನ್ನಡ ಚಿತ್ರರಂಗವನ್ನು ಮತ್ತಷ್ಟು ಸಮೃದ್ದಗೊಳಿಸೋ ಇರಾದೆ ಹೊಂದಿರೋ ಸಿನಿಮೋತ್ಸಾಹಿಯ ಮಹತ್ವದ ಕನಸು.

ಯೆಸ್.. ರೀಸೆಂಟ್ ಆಗಿ ಮುಂಬೈನ ದಾದಾ ಆನಂದ್ ಪಂಡಿತ್ ಅಂತಹ ಘಟಾನುಘಟಿಯ ಜೊತೆ ಸಿಎಂ ಸಿದ್ದರಾಮಯ್ಯರನ್ನ ಕರೆಸಿ ಆರ್​ಸಿ ಸ್ಟುಡಿಯೋಸ್ ಬ್ಯಾನರ್ ಜೊತೆ ಐದು ಬಿಗ್ ಬಜೆಟ್ ಪ್ರಾಜೆಕ್ಟ್​​ಗಳನ್ನ ಅನೌನ್ಸ್ ಮಾಡಿಡಿದ್ದರು ಆರ್​. ಚಂದ್ರು.

ಸದ್ಯ ಅವುಗಳಲ್ಲಿ ಫಾದರ್ ಅನ್ನೋ ಸಿನಿಮಾ ಶೂಟಿಂಗ್ ಹೋಗುವ ಹಂತದಲ್ಲಿದೆ. ಉಳಿದಂತೆ ನಾಲ್ಕು ಸಿನಿಮಾಗಳು ಪ್ರೀ ಪ್ರೊಡಕ್ಷನ್ ಹಂತದಲ್ಲಿವೆ. ಇದೀಗ ಅವುಗಳ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆ ಆಗಿದೆ. ಅದೇ ಪ್ರೊಡಕ್ಷನ್ ನಂ 6.

ಪ್ಯಾಷನೇಟ್ ಡೈರೆಕ್ಟರ್ ಆರ್ ಚಂದ್ರು. ಮೈಲಾರಿ ಹಾಗೂ ಕಬ್ಜ ಸಿನಿಮಾಗಳ ಬಳಿಕ ಮೂರನೇ ಬಾರಿ ಹ್ಯಾಟ್ರಿಕ್ ಹೀರೋ ಜೊತೆ ಕೆಲಸ ಮಾಡೋಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಈ ಹೊಚ್ಚ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡೋದ್ರ ಹಿಂದೆ ಒಂದು ಇಂಟರೆಸ್ಟಿಂಗ್ ಮ್ಯಾಟರ್ ಇದೆ. ಅದೇನಪ್ಪಾ ಅಂದ್ರೆ ಚಂದ್ರು ಅವ್ರು ಶಿವಣ್ಣನಿಗೆ ಆ್ಯಕ್ಷನ್ ಕಟ್ ಹೇಳಿದ ಮೊದಲ ಸಿನಿಮಾ ಮೈಲಾರಿ ತೆರೆಕಂಡು 14 ವರ್ಷಗಳಾಗ್ತಿದೆ. ಈ ನಿಟ್ಟಿನಲ್ಲಿ ಇದೀಗ ಹೊಸ ಚಿತ್ರವನ್ನ ಅನೌನ್ಸ್ ಮಾಡಲಾಗಿದೆ. ಅಂದಹಾಗೆ ಮೈಲಾರಿ ಸಿನಿಮಾ ಶಿವಣ್ಣ ಕರಿಯರ್​​​ನ ಮಹತ್ವದ ಚಿತ್ರಗಳಲ್ಲೊಂದು. ಮ್ಯೂಸಿಕಲಿ ಸೂಪರ್ ಡೂಪರ್ ಹಿಟ್ ಸಿನಿಮಾ. ಗುರುಕಿರಣ್ ಕಂಪೋಸ್ ಮಾಡಿದ್ದ ಈ ಚಿತ್ರದ ಆಲ್ಬಂ ಬಿಡುಗಡೆ ಆಗ್ತಿದ್ದಂತೆ ಎರಡೇ ದಿನದಲ್ಲಿ ಬರೋಬ್ಬರಿ 540 ಆಡಿಯೋ ಸಿಡಿಗಳು ಸೋಲ್ಡ್ ಔಟ್ ಆಗಿದ್ದವು.

ಶಿವಣ್ಣ- ಸದಾ ಜೋಡಿ ಮೋಡಿ ಮಾಡಿತ್ತು. ತಂದೆಯೊಟ್ಟಿಗೆ ಜಗಳವಾಡಿಕೊಂಡು ಹಳ್ಳಿಯಿಂದ ಸಿಟಿ ಸೇರೋ ನಾಯಕನಟ, ಇಲ್ಲಿ ಜರ್ನಲಿಸ್ಟ್ ಆಗಿ ಜಗಮಗಿಸುತ್ತಾರೆ. ಅದ್ರ ಮಧ್ಯೆ ಸುದ್ದಿ ವಿಚಾರ ಜಗಳ ಬಂದು ವಿರೋಧ ಪಕ್ಷದ ನಾಯಕನನ್ನ ಕೊಲೆ ಕೂಡ ಮಾಡ್ತಾರೆ. ಜೈಲು ಸೇರೋ ನಾಯಕನಟ ಅದ್ರಿಂದ ಹೇಗೆ ಹೊರಬರ್ತಾನೆ ಅನ್ನೋದನ್ನ ಬಹಳ ಸ್ವಾರಸ್ಯಕರವಾಗಿ ಹೇಳಿದ್ರು ಚಂದ್ರಣ್ಣ. ಸಾಕಷ್ಟು ಹಿರಿಯ ಹಾಗೂ ನುರಿತ ಕಲಾವಿದರ ಬಳಗವಿದ್ದ ಮೈಲಾರಿ ಇಂದಿಗೂ ಎವರ್​​ಗ್ರೀನ್ ಅನಿಸಲಿದೆ.

ಶಿವಣ್ಣ- ಗೀತಕ್ಕ ಜೊತೆ ಉತ್ತಮ ಬಾಂಧವ್ಯ ಹೊಂದಿರೋ ಆರ್ ಚಂದ್ರು ಈ ಸಿನಿಮಾನ ಘೋಷಿಸಿರೋದು ವಿಶೇಷ. ಜೋಗಿ ಪ್ರೇಮ್ ಆರು ಜನ ಹೀರೋಗಳನ್ನ ಇಟ್ಕೊಂಡು ಸಿನಿಮಾ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಚಂದ್ರು ಅವ್ರು ಮಾತ್ರ ಆರು ಚಿತ್ರಗಳನ್ನ ಮಾಡ್ತಿರೋದು ವಾಸ್ತವ.

  • ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES