Friday, May 10, 2024

IPL 2024: ಟಾಸ್​ ಗೆದ್ದ ಡೆಲ್ಲಿ ಬ್ಯಾಟಿಂಗ್​ ಆಯ್ಕೆ

ವಿಶಾಖಪಟ್ಟಣಂ: ಸತತ ಎರಡು ಸೋಲುಗಳಿಂದ ನಿರಾಸೆ ಅನುಭವಿಸಿರುವ ರಿಷಬ್​ ಪಂತ್​ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​ (ಡಿಸಿ), ಬಲಿಷ್ಠ ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ಎದುರಿನ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ. ಋತುರಾಜ್​ ಗಾಯಕ್ವಾಡ್​ ನೇತೃತ್ವದ ಸಿಎಸ್​ಕೆ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಕಂಡಿದೆ.

ಆಂಧ್ರಪ್ರದೇಶದ ವೈಎಸ್​ ರಾಜಶೇಖರ್​ರೆಡ್ಡಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಸಿಎಸ್​ಕೆ ಮೂರನೇ ಗೆಲುವಿನ ಹುಮ್ಮಸ್ಸಿನಲ್ಲಿದೆ. ಇತ್ತ ಡೆಲ್ಲಿ ಮೊದಲ ಗೆಲುವಿಗಾಗಿ ಹೋರಾಡಲಿದೆ. ರಿಷಬ್​ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಸ್ಪಿನ್ನರ್​ ಕುಲದೀಪ್​ ಯಾದವ್​ ಬದಲಿಗೆ ಪೃಥ್ವಿ ಶಾ, ರಿಕ್ಕಿ ಬುಯಿ ಸ್ಥಾನಕ್ಕೆ ಇಶಾಂತ್​ ಶರ್ಮಾರನ್ನು ಕರೆತರಲಾಗಿದೆ.

ತಂಡಗಳು ಇಂತಿವೆ- ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಥೀಶ ಪತಿರಾನ, ಮುಸ್ತಾಫಿಜುರ್ ರೆಹಮಾನ್.

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಅಕ್ಷರ್ ಪಟೇಲ್, ಅನ್ರಿಚ್ ನೋಕಿಯಾ, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

 

RELATED ARTICLES

Related Articles

TRENDING ARTICLES