Monday, May 20, 2024

ದೇವೇಗೌಡ್ರು ‘ಚೋರ್ ಬಚಾವ್ ಸಂಸ್ಥೆ’ ಎಂದಿದ್ರು, ಈಗ CBI ಮೇಲೆ ಪ್ರೀತಿ ಬಂತ? : ಸಿದ್ದರಾಮಯ್ಯ

ಮೈಸೂರು : ಸ್ವತಃ ಹೆಚ್.ಡಿ. ದೇವೇಗೌಡ್ರು ಸಿಬಿಐ ‘ಚೋರ್ ಬಚಾವ್ ಸಂಸ್ಥೆ’ ಎನ್ನುತ್ತಿದ್ದರು. ಈಗ ಏಕಾಏಕಿ ಸಿಬಿಐ ಮೇಲೆ ಪ್ರೀತಿ ಬಂತ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇಡಬೇಕು. ಎಸ್‌ಐಟಿ ಮೇಲೆ ನಂಬಿಕೆ ಇಲ್ಲ ಅಂದ್ರೆ, ಇನ್ಯಾರ ಮೇಲೆ ನಂಬಿಕೆ ಇಡ್ತೀರಿ? ಎಂದು ಪ್ರಶ್ನೆ ಮಾಡಿದರು.

ಎಸ್​ಐಟಿ ತನಿಖೆ ಮಾಡುತ್ತಿದೆ. ನಮ್ಮ ಪೋಲಿಸರ ಬಗ್ಗೆ ನಂಬಿಕೆ‌ ಇದೆ. ನಿಸ್ಪಕ್ಷಪಾತ ತನಿಖೆ ಮಾಡಿ, ವರದಿ ಕೊಡುತ್ತಾರೆ‌. ಬಿಜೆಪಿ ಆಡಳಿತದಲ್ಲಿ ಸಿಬಿಐಗೆ ಒಂದೇ ಒಂದು ಕೇಸ್ ಕೊಡಲಿಲ್ಲ. ಬಿಜೆಪಿ ಅವರು ಸಿಬಿಐ ಅನ್ನ ಕರಪ್ಷನ್ ಬ್ಯೂರ್ ಆಫ್ ಇನ್ವೆಸ್ಟಿಗೇಶನ್ ಎನ್ನುತ್ತಿದ್ದರು. ಈಗ ನೋಡಿದ್ರೆ ಸಿಬಿಐಗೆ ಕೊಡಿ ಅನ್ನುತ್ತಿದ್ದಾರೆ, ಇದರ ಅರ್ಥ ಏನು? ನನಗೆ ನಂಬಿಕೆ ಇದೆ, ಸರಿಯಾದ ದಾರಿಯಲ್ಲಿ ತನಿಖೆ ನಡೆಯುತ್ತದೆ ಎಂದು ಹೇಳಿದರು.

ನಮ್ಮ ಪೊಲೀಸರೇ ತನಿಖೆ ಮಾಡುತ್ತಾರೆ

ನಾನು ಯಾವತ್ತು ಪೊಲೀಸರಿಗೆ ಕಾನೂನಿನ‌ ವಿರುದ್ಧವಾಗಿ ತನಿಖೆ ಮಾಡಿ ಅಂಥ ಹೇಳುವುದಿಲ್ಲ. ಎಸ್ಐಟಿ ಮೇಲೆ‌ ನಂಬಿಕೆ‌ ಇಡಬೇಕು. ನಮ್ಮ ಪೊಲೀಸ್ ಮೇಲೆ ಅವರಿಗೆ ನಂಬಿಕೆ ಇಲ್ವಾ? ಈ ಹಿಂದೆ ಸಿಬಿಐಗೆ ನಾವೇ. ಸಿಬಿಐಗೆ ಲಾಟರಿ ಕೇಸ್, ಜಾರ್ಜ್ ಕೇಸ್ ಹಾಗೂ ಡಿ.ಕೆ. ರವಿ ಕೇಸ್ ಕೊಟ್ಟಿದ್ದೆವು. ಆ ಪ್ರಕರಣದಲ್ಲಿ ಯಾರಿಗಾದರೂ ಶಿಕ್ಷೆಯಾಗಿದ್ಯಾ? ಹಾಗಂತ ನನಗೆ ಸಿಬಿಐ ಮೇಲೆ ನಂಬಿಕೆ ಇಲ್ಲ ಅಂಥ ಅರ್ಥ ಅಲ್ಲ. ಈ ಪ್ರಕರಣದಲ್ಲಿ ನಮ್ಮ ಪೊಲೀಸರೇ ತನಿಖೆ ಮಾಡುತ್ತಾರೆ ಎಂದು ತಿಳಿಸಿದರು.

ಅಂತರಾಷ್ಟ್ರೀಯ ಸಂಕರ್ಪ ಇದೆ ಅಂತಾರೆ

ಪ್ರಕರಣದಲ್ಲಿ ಯಾರ ಇನ್ವಾಲ್ ಮೆಂಟ್ ಇಲ್ಲ, ನನ್ನ ಇನ್ವಾಲ್ ಮೆಂಟ್ ಕೂಡ ಇಲ್ಲ. ಪೊಲೀಸರ ಮೇಲೆ ವಿಶ್ವಾಸ ಇದೆ. ಸತ್ಯ ಸತ್ಯಾತೆ ಹೊರಗೆ ಬರುತ್ತದೆ. ಪ್ರಕರಣಕ್ಕೆ ಅಂತರಾಷ್ಟ್ರೀಯ ಸಂಕರ್ಪ ಇದೆ ಎಂಬುದೆಲ್ಲಾ ನಿಜವಲ್ಲ. ಈ ಪ್ರಕರಣವನ್ನ ಸಿಬಿಐಗೆ ವಹಿಸಲಿ ಎನ್ನುವ ಕಾರಣಕ್ಕೆ ಈ ರೀತಿ ಹೇಳುತ್ತಿದ್ದಾರೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

RELATED ARTICLES

Related Articles

TRENDING ARTICLES