Tuesday, May 21, 2024

CSK vs GT ಕಾಳಗ : ಚೆನ್ನೈ ಗೆದ್ದರೆ RCBಗೆ ಸಂಕಷ್ಟ! CSK ಸೋಲಿಗಾಗಿ RCB ಫ್ಯಾನ್ಸ್ ಪ್ರಾರ್ಥನೆ

ಬೆಂಗಳೂರು : ಐಪಿಎಲ್​ನಲ್ಲಿ ಇಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕಳೆದ ಬಾರಿಯ ರನ್ನರ್ ಅಪ್ ಗುಜರಾತ್‌ ಟೈಟಾನ್ಸ್‌ ಮುಖಾಮುಖಿಯಾಗಲಿವೆ. ಈ ಪಂದ್ಯದ ಫಲಿತಾಂಶ ಆರ್​ಸಿಬಿ ಪ್ಲೇಆಫ್​ ಕನಸನ್ನು ನಿರ್ಧರಿಸಲಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನ 59ನೇ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಇಂದು ಚೆನ್ನೈ ಸೂಪರ್​ ಕಿಂಗ್ಸ್​ ಗೆದ್ದರೆ, ಆರ್​ಸಿಬಿಗೆ ಸಂಕಷ್ಟ ಎದುರಾಗಲಿದೆ. ಹೀಗಾಗಿ, ಆರ್​ಸಿಬಿ ಅಭಿಮಾನಿಗಳು ಚೆನ್ನೈ ಸೋಲಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್​ ಮೊದಲ ತಂಡವಾಗಿ ಟೂರ್ನಿಯಿಂದ ಹೊರಬಿದ್ದಿದೆ. ನಿನ್ನೆ ಆರ್​ಸಿಬಿ ವಿರುದ್ಧ ಹೀನಾಯ ಸೋಲಿನ ಬಳಿಕ ಪಂಜಾಬ್​ ಕಿಂಗ್ಸ್ ಸಹ ಎರಡನೇ ತಂಡವಾಗಿ ಟೂರ್ನಿಯಿಂದ ನಿರ್ಗಮಿಸಿದೆ. ಇಂದು ಗುಜರಾತ್ ಸೋತರೆ ಬಹುತೇಕ ಮನೆಗೆ ತೆರಳಲಿದೆ. ಹೀಗಾಗಿ, ಇಂದಿನ ಪಂದ್ಯ ರೋಚಕವಾಗಿರಲಿದೆ.

ಚೆನ್ನೈ ಮಣಿಸುವುದು ತುಸು ಕಷ್ಟ

ಚೆನ್ನೈ ಆಡಿರುವ 11 ಪಂದ್ಯಗಳಲ್ಲಿ 6 ಗೆಲುವು ಹಾಗೂ 5 ಪಂದ್ಯಗಳಲ್ಲಿ ಸೋಲು ಕಂಡಿದೆ. ಗುಜರಾತ್ ಸಹ 11 ಪಂದ್ಯಗಳನ್ನು ಆಡಿದ್ದು, ನಾಲ್ಕು ಪಂದ್ಯಗಳಲ್ಲಿ ಗೆಲುವು ಹಾಗೂ 7 ಪಂದ್ಯಗಳಲ್ಲಿ ಸೋಲು ಕಂಡಿದೆ. ಚೆನ್ನೈ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, ಗುಜರಾತ್ ಕೊನೆಯ ಸ್ಥಾನದಲ್ಲಿದೆ. ಇನ್ನೂ GT ವಿರುದ್ಧದ ಕಳೆದ ಮೂರು ಪಂದ್ಯಗಳಲ್ಲಿ ಚೆನ್ನೈ ಗೆದ್ದಿದೆ.

CSK vs GT ಬಲಾಬಲ

  • ಒಟ್ಟು ಪಂದ್ಯ : 6
  • ಚೆನ್ನೈ ಸೂಪರ್‌ ಕಿಂಗ್ಸ್‌ : 3 ಗೆಲುವು
  • ಗುಜರಾತ್‌ ಟೈಟಾನ್ಸ್‌ : 3 ಗೆಲುವು

ಚಿದಂಬರಂ ಸ್ಟೇಡಿಯಂ (ಚೆನ್ನೈ)

  • ಒಟ್ಟು ಪಂದ್ಯ : 02
  • ಚೆನ್ನೈ ಸೂಪರ್‌ ಕಿಂಗ್ಸ್‌ : 2 ಗೆಲುವು
  • ಗುಜರಾತ್‌ ಟೈಟಾನ್ಸ್‌ : 0

ಮೋದಿ ಸ್ಟೇಡಿಯಂ (ಅಹಮದಾಬಾದ್‌)

  • ಒಟ್ಟು ಪಂದ್ಯ : 02
  • ಚೆನ್ನೈ ಸೂಪರ್‌ ಕಿಂಗ್ಸ್‌ : 0
  • ಗುಜರಾತ್‌ ಟೈಟಾನ್ಸ್‌ : 2 ಗೆಲುವು

ಹೇಗಿದೆ ಪಿಚ್‌..?

  • ಮೋದಿ ಸ್ಟೇಡಿಯಂ ಪಿಚ್ ಬೌಲರ್‌ಗಳಿಗೆ ಸಹಕಾರಿ
  • ದೊಡ್ಡ ಗ್ರೌಂಡ್‌ ಆಗಿರೋದ್ರಿಂದ ಬ್ಯಾಟರ್​ಗಳಿಗೂ ಅನುಕೂಲ
  • ಬ್ಯಾಟರ್‌ ಲಯ ಕಂಡುಕೊಂಡ್ರೆ ಬಿಗ್‌ ಸ್ಕೋರ್‌
  • ಚೇಸಿಂಗ್‌ ಮಾಡಿರೋ ತಂಡ ಹೆಚ್ಚು ಬಾರಿ ಗೆದ್ದಿದೆ

ಚೆನ್ನೈ ಸೂಪರ್‌ ಕಿಂಗ್ಸ್‌

ಅಜಿಂಕ್ಯ ರಹಾನೆ, ಋತುರಾಜ್ ಗಾಯಕ್ವಾಡ್ (ನಾಯಕ), ಡೇರಿಲ್ ಮಿಚೆಲ್, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂ.ಎಸ್. ಧೋನಿ (ವಿ.ಕೀ.), ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ರಿಚರ್ಡ್ ಗ್ಲೀಸನ್, ತುಷಾರ್ ದೇಶಪಾಂಡೆ

ಗುಜರಾತ್‌ ಟೈಟಾನ್ಸ್‌

ವೃದ್ಧಿಮಾನ್ ಸಹಾ (ವಿ.ಕೀ.), ಶುಭ್​ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ನೂರ್ ಅಹ್ಮದ್, ಮೋಹಿತ್ ಶರ್ಮಾ

RELATED ARTICLES

Related Articles

TRENDING ARTICLES