Friday, May 10, 2024

IPL​ 2024: CSK ವಿರುದ್ಧ ಟಾಸ್​ ಗೆದ್ದ ಗುಜರಾತ್ ಟೈಟಾನ್ಸ್​ ಬೌಲಿಂಗ್​ ಆಯ್ಕೆ

ಚೆನ್ನೈ : ಐಪಿಎಲ್​ 17 ಆವೃತ್ತಿಯ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಗುಜರಾತ್ ಟೈಟಾನ್ಸ್​ ತಂಡ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಗೆಲುವಿಗಾಗಿ ಕಾದಾಡಲಿದ್ದು ಟಾಸ್​ ಗೆದ್ದಿರುವ ಶುಭಮನ್​ ಗಿಲ್​ ನೇತೃತ್ವದ ಗುಜರಾತ್​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. 

ಕಳೆದ ಐಪಿಎಲ್​ ಆವೃತ್ತಿಯ ಫೈನಲ್​ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಗಿಲ್ ಪಡೆ ರಣತಂತ್ರ ರೂಪಿಸಿದೆ.ಪ್ರಸ್ತುತ ಉಭಯ ತಂಡಗಳು ತಲಾ ಒಂದು ಪಂದ್ಯ ಗೆಲ್ಲುವ ಮೂಲ ಅಂಕಪಟ್ಟಿಯಲ್ಲಿ ಸಮಬಲ ಸಾಧಿಸಿವೆ.

ಎರಡು ತಂಡಗಳು ಈವರೆಗೆ ಐಪಿಎಲ್​ನಲ್ಲಿ ಐದು ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ 2 ಬಾರಿ ಗೆದ್ದಿದೆ. ಗುಜರಾತ್ ಟೈಟಾನ್ಸ್ 3 ಬಾರಿ ಗೆಲುವಿನ ನಗೆ ಬೀರಿದೆ. ಇನ್ನೂ ಈವರೆಗೆ ಅತಿಥೇಯ ತಂಡ ತವರು ಅಂಗಳದಲ್ಲಿ ಆಡಿರುವ ಎಲ್ಲಾ ಪಂದ್ಯಗಳನ್ನು ಜಯಿಸಿದೆ.

ಇಂದು ಸಹ ಆ ಟ್ರೆಂಡ್ ಮುಂದುವರಿಸಲು ಋತುರಾತ್ ಪಡೆ ರಣತಂತ್ರ ರೂಪಿಸಿದೆ. ಇತ್ತ, ಶುಭ್​ಮನ್ ಗಿಲ್ ಸೇನೆ ಚೆನ್ನೈ ಸೋಲಿಸಿ, ಆ ಟ್ರೆಂಡ್ ಅಳಿಸಲು ಸಜ್ಜಾಗಿದೆ.

ಚೆನ್ನೈ ಸಂಭವನೀಯ ತಂಡ

ಋತುರಾಜ್ ಗಾಯಕ್ವಾಡ್(ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ರವೀಂದ್ರ ಜಡೇಜಾ, ಎಂ.ಎಸ್. ಧೋನಿ (ವಿ.ಕೀ), ಸಮೀರ್ ರಿಜ್ವಿ, ದೀಪಕ್ ಚಾಹರ್, ಮಹೇಶ್ ತೀಕ್ಷಣ, ಮುಸ್ತಾಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ.

ಗುಜರಾತ್ ಸಂಭವನೀಯ ತಂಡ

ಶುಭಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್.

ಪಂದ್ಯ ಆರಂಭ : ಸಂಜೆ 7.30

ಸ್ಥಳ : ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ

RELATED ARTICLES

Related Articles

TRENDING ARTICLES