Friday, May 10, 2024

Dinesh Karthik : ಬೌಂಡರಿ-ಸಿಕ್ಸ್​ಗಳ ಸುರಿಮಳೆ : RCBಗೆ ಆಪತ್ಬಾಂಧವನಾದ ದಿನೇಶ್ ಕಾರ್ತಿಕ್

ಬೆಂಗಳೂರು : ದಿನೇಶ್​​ ಕಾರ್ತಿಕ್​ ಮತ್ತೊಮ್ಮೆ RCB ತಂಡದ ಆಪದ್ಭಾಂದವನಾಗಿ ಗುರುತಿಸಿಕೊಂಡರು. ಸಂಕಷ್ಟದಲ್ಲಿದ್ದ RCBಗೆ ಆಸರೆಯಾದ ಡಿಕೆ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ತವರು ಅಂಗಳ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 4 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಪಂಜಾಬ್​ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್​ ಗಳಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ RCB ನಿಗದಿತ 19.2 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು (178) ಗೆಲುವಿನ ನಗೆ ಬೀರಿತು.

ಈ ಗೆಲುವಿನ ಪ್ರಮುಖ ರುವಾರಿ ವಿರಾಟ್ ಕೊಹ್ಲಿ. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ ವಿಕೆ 49 ಎಸೆತದಲ್ಲಿ 11 ಬೌಂಡರಿ​ ಮತ್ತು 2 ಸಿಕ್ಸರ್​ ಮೂಲಕ 77 ರನ್​ ಸಿಡಿಸಿದರು. ಆದರೆ, ಕೊಹ್ಲಿ ಔಟಾದ ಬಳಿಕ ಬ್ಯಾಕ್​ ಟು ಬ್ಯಾಕ್​ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆರ್​ಸಿಬಿಗೆ ನೆರವಅಗಿದ್ದು ದಿನೇಶ್ ಕಾರ್ತಿಕ್.

ವಿಕೆ ಹೋದ್ರು ಡಿಕೆ ಇದಾನೆ ಎಂಬ ಮಾತು ಸುಳ್ಳಾಗಲಿಲ್ಲ. ಕೊಹ್ಲಿ ಔಟಾಗುತ್ತಿದ್ದಂತೆ ಪಂದ್ಯ ಪಂಜಾಬ್​ ಕಡೆ ವಾಲಿತು. ಆದರೆ, ಕೊನೆಯಲ್ಲಿ ದಿನೇಶ್​​ ಕಾರ್ತಿಕ್​ ಮತ್ತು ಮಹಿಪಾಲ್​ ಲೋಮ್ರೋರ್​ ಪಂಜಾಬ್​ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಈ ಮೂಲಕ​ ತಂಡವನ್ನು ಗೆಲುವಿನ ದಡ ಸೇರಿಸಿದರು.

ದಿನೇಶ್​​ ಕಾರ್ತಿಕ್​ 10 ಎಸೆತದಲ್ಲಿ 2 ಸಿಕ್ಸರ್​ ಮತ್ತು 3 ಬೌಂಡರಿ ಮೂಲಕ 28 ರನ್​ ಹಾಗೂ ಲೋಮ್ರೋರ್​ 8 ಎಸೆತದಲ್ಲಿ 1 ಸಿಕ್ಸರ್ ಮತ್ತು 2 ಬೌಂಡರಿ ಮೂಲಕ 17 ರನ್​ ಗಳಿಸಿದರು. ಈ ಮೂಲಕ ದಿನೇಶ್ ಕಾರ್ತಿಕ್ ಫಿನಿಶರ್​ ಆಗಿ ಗುರುತಿಸಿಕೊಂಡರು. ನಾಯಕ ಡುಪ್ಲೆಸಿಸ್ ​3, ಕ್ಯಾಮರೂನ್​ ಗ್ರೀನ್​ 3, ರಜತ್​ ಪಾಟಿದಾರ್​​ 18 ರನ್​ ಗಳಿಸಿದರು. ಪಂಜಾಬ್ ಪರ ರಬಾಡ, ಬ್ರಾರ್ ತಲಾ 2, ಕರ್ರನ್ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES