Friday, May 10, 2024

ಚುನಾವಣೆ ಸಹಜ, ಸ್ಪರ್ಧೆ ಆರೋಗ್ಯಕರವಾಗಿರಬೇಕು : ಡಿಕೆಸುಗೆ ಮಂಜುನಾಥ್ ತಿರುಗೇಟು

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್​ ಅಭ್ಯರ್ಥಿ ಡಿ.ಕೆ. ಸುರೇಶ್ ಕುಕ್ಕರ್ ಹಂಚಿಕೆ ವಿಚಾರ ಕುರಿತು ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಪ್ರತಿಕ್ರಿಯೆ ನೀಡಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಹಜ, ಸ್ಪರ್ಧೆ ಆರೋಗ್ಯಕರವಾಗಿರಬೇಕು ಎಂದು ಹೇಳಿದರು.

ಕುಕ್ಕರ್ ಹಂಚಿಕೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಬಗ್ಗೆ ಸುದ್ದಿಗೋಷ್ಟಿ ಮಾಡಿದ್ದಾರೆ. ಈಗಾಗಲೇ ಏನಾಗ್ತಿದೆ ಅಂತ‌ ಗೊತ್ತಿದೆ. ಪ್ರತೀ ಬಾರಿ ಚುನಾವಣೆ ಸಹಜ, ಆದ್ರೆ, ಆರೋಗ್ಯಕರ ಸ್ಪರ್ಧೆ ಆಗಬೇಕು. ಪ್ರಜಾತಂತ್ರ ವ್ಯವಸ್ಥೆಗೆ ಅರ್ಥ ಇರಬೇಕು. ಸ್ಪರ್ಧೆ ಆರೋಗ್ಯಕರ ಆಗಿರಬೇಕು ಅನ್ನೋದು ನನ್ನ ಆಶಯ ಎಂದು ಅಭಿಪ್ರಾಯಪಟ್ಟರು.

BJP ತೆಕ್ಕೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ

ಈಗಾಗಲೇ ಅಶ್ವತ್ಥ ನಾರಾಯಣ್ ಹೇಳಿದಂತೆ ಈ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಆಗಿದ್ದೇನೆ. ಬಿಜೆಪಿ ಹಾಗೂ ಜೆಡಿಎಸ್ ಎನ್‌ಡಿಎ ಅಭ್ಯರ್ಥಿ ಆಗಿದ್ದೇನೆ. ನನಗೆ ಆತ್ಮ ವಿಶ್ವಾಸ ಇದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಬಿಜೆಪಿ ತೆಕ್ಕೆಗೆ ಬರುವುದು ವಿಶ್ವಾಸ ಇದೆ ಎಂದು ಹೇಳಿದರು.

400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ನೋಡಿ ಬಿಜೆಪಿ, ಎನ್‌ಡಿಎ ಪರ ಅಲೆ ಇದೆ. ಇದು ಹ್ಯಾಟ್ರಿಕ್ ಅಂತ ಹೇಳಬಹುದು. ಮೂರನೇ ಬಾರಿ ಮೋದಿಯವರು ವಿಜಯ ಸಾಧಿಸಲಿದ್ದಾರೆ. 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ. ನಮ್ಮೆಲ್ಲರ ಆಶಯ ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗುವುದು ಎಂದು ಡಾ. ಮಂಜುನಾಥ್ ತಿಳಿಸಿದರು.

RELATED ARTICLES

Related Articles

TRENDING ARTICLES