Saturday, May 11, 2024

ಗುಡ್ ನ್ಯೂಸ್ : ರಿಷಭ್ ಪಂತ್ ಫುಲ್ ಫಿಟ್, ಕ್ರಿಕೆಟ್​ನಲ್ಲಿ ಪಂತ್ 2.0 ಆರಂಭ

ಬೆಂಗಳೂರು : ಭಾರತದ ಸ್ಟಾರ್ ಬ್ಯಾಟರ್ ರಿಷಭ್ ಪಂತ್​ ಅವರಿಗೆ ಐಪಿಎಲ್​-2024 ಆಡಲು ಬಿಸಿಸಿಐ ಗ್ರೀನ್​ ಸಿಗ್ನಲ್ ನೀಡಿದೆ.

ರಿಷಭ್​ ಪಂತ್ ಅವರು ಸಂಪೂರ್ಣವಾಗಿ ಫಿಟ್​ ಆಗಿದ್ದಾರೆ ಎಂದು ಬಿಸಿಸಿಐ ಘೋಷಿಸಿದೆ. ಈ ಮೂಲಕ 1 ವರ್ಷ 2 ತಿಂಗಳ ರಿಹಾಬ್ ಹಾಗೂ ರಿಕವರಿ ಪ್ರಕ್ರಿಯೆಯ ನಂತರ ರಿಷಭ್ ಪಂತ್ ಅವರು ಕ್ರಿಕೆಟ್ ಮೈದಾನಕ್ಕೆ ಇಳಿಯುತ್ತಿದ್ದಾರೆ.

2022ರ ಡಿಸೆಂಬರ್ 30ರಂದು ಉತ್ತರಖಂಡದ ರೂರ್ಕಿ ಬಳಿ ಭೀಕರ ಕಾರು ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಕ್ರಿಕೆಟ್‌ನಲ್ಲಿ ಪಂತ್ 2.0 ಆರಂಭ

ಈ ಕುರಿತು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 30, 2022 : ರಿಷಭ್ ಪಂತ್ ಕಾರು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಮಾರ್ಚ್ 12, 2024 : ರಿಷಭ್ ಪಂತ್ ಅವರು ಸಂಪೂರ್ಣ ಫಿಟ್ ಎಂದು ಬಿಸಿಸಿಐ ಘೋಷಿಸಿದೆ. ಹೊಸ ಪ್ರಯಾಣವನ್ನು ಸ್ಕ್ರಿಪ್ಟ್ ಮಾಡುವ ಸಮಯ ಬಂದಿದೆ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಂತ್ 2.0 ಆರಂಭ. ಆಲ್ ದಿ ಬೆಸ್ಟ್ ಎಂದು ಶುಭ ಹಾರೈಸಿದ್ದಾರೆ

ರಿಷಬ್​ಗೆ ನಾಯಕತ್ವ ಡೌಟ್?

ರಿಷಭ್ ಪಂತ್ ಸಂಪೂರ್ಣ ಫಿಟ್ ಆಗಿರುವುದರಿಂದ ಐಪಿಎಲ್​ ಆಡಲಿದ್ದಾರೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್​ ಅವರಿಗೆ ಈ ಆವೃತ್ತಿಯಲ್ಲಿ ನಾಯಕತ್ವ ನೀಡುತ್ತಾ? ಎಂದು ದೃಢವಾಗಿಲ್ಲ. 100%ಫಿಟ್​ನೆಸ್ ಸಾಧಿಸದಿದ್ದರೆ ಅವರಿಗೆ ನಾಯಕತ್ವದ ಬದಲು ಮತ್ತೊಂದು ಪಾತ್ರ ನೀಡಬಹುದು. ಇನ್ನೂ, ಗಾಯದ ಸಮಸ್ಯೆಯಿಂದಾಗಿ ಮೊಹಮ್ಮದ್ ಶಮಿ ಹಾಗೂ ಪ್ರಸಿದ್ಧ್ ಕೃಷ್ಣ ಐಪಿಎಲ್​ನಿಂದ ಹೊರಬಿದ್ದಿದ್ದಾರೆ.

RELATED ARTICLES

Related Articles

TRENDING ARTICLES