Friday, May 10, 2024

ಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ : ಆರ್​. ಅಶೋಕ್​

ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ ಎಂದು ವಿಪಕ್ಷ ನಾಯಕ ಆರ್​.ಅಶೋಕ್​ ವಾಗ್ದಾಳಿ ಮಾಡಿದ್ದಾರೆ. 

ಸುದ್ದಿಗಾರೊಂದಿಗೆ ಮಾತನಾಡಿದ ಅವರು,ರಾಜ್ಯಸರ್ಕಾರ ಮನಸ್ಸಿಗೆ ಬಂದ ಹಾಗೆ ಐದು ಗ್ಯಾರಂಟಿಗಳನ್ನೂ ಘೋಷಿಸಿ ಅದನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಿಲ್ಲ ಕಾಂಗ್ರೆಸ್ ಸರ್ಕಾರದ ಬೇಜವಬ್ದಾರಿಯಿಂದ KRS ನೀರನ್ನು ತಮಿಳುನಾಡಿಗೆ ಬಿಟ್ಟು ಕೊಟ್ಟಿದ್ದಾರೆ.ಇದೇ ಕಾರಣ ಇವತ್ತು ಬೆಂಗಳೂರಲ್ಲಿ ನೀರಿನ ಸಮಸ್ಯೆ ಆಗಿರೋದು ಇಲ್ಲಿ ಇವರ ರಾಜಕೀಯ ಬೇಳೆ ಬೇಯಿಸಿಕೊಳ್ತಿದ್ದಾರೆ.ಬೆಂಗಳೂರಿನ ವಾರ್ಡ್ ಮಟ್ಟದಲ್ಲಿ ಒಂದು ಸಭೆಯನ್ನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ಮಾತನಾಡಿದ ಅವರು,ಕರ್ನಾಟಕದಲ್ಲಿ ಎಡಬಿಡಂಗಿ ಸರ್ಕಾರ ಇದೆ. ಗ್ಯಾರಂಟಿ ಬಗ್ಗೆ ಮಾತಾಡ್ತಾರೆ.ಅಧಿಕಾರಕ್ಕೆ ಬಂದ್ರೆ 24 ಗಂಟೆಯಲ್ಲಿ ಗ್ಯಾರಂಟಿ ಅಂತ ಹೇಳಿದ್ದರು.ಅದ್ರೆ ಕೊಡಲಿಲ್ಲ.ಕಾವೇರಿ ನೀರನ್ನ ತಮಿಳು ನಾಡಿಗೆ ಕೊಡಬಾರದಿತ್ತು. 5TMC ನೀರು ತಮಿಳು ನಾಡಿಗೆ ಹರಿದಿದೆ.

ಬೇಸಿಗೆ ಮೊದಲೇ ನೀರಗೆ ಆಹಾಕಾರ ಬಂದಿದೆ.ಮುಂದೆ ಹೇಗೆ ಸಮಸ್ಯೆ ಆಗಲಿದೆ ಊಹಿಸಿ.ಮುಂದೆ ಕುಡಿಯುವ ನೀರಿಗೆ ಸಮಸ್ಯೆ ಆದ್ರೆ ಕಾಂಗ್ರೆಸ್ ಸರ್ಕಾರವೇ ಕಾರಣ.ಟ್ಯಾಂಕರ್ ನೀರಿಗೆ ದರ ಫಿಕ್ಸ್ ಮಾಡಿದಾರೆ ಬಿಟ್ರೆ ಏನೂ ಮಾಡಿಲ್ಲ ಎಂದರು.

ನಾವು ಕೊವಿಡ್ ಸಂದರ್ಭದಲ್ಲಿ ಸಭೆ ಮಾಡಿ ಸಮರ್ಥವಾಗಿ ನಿಭಾಯಿಸಿದ್ದೇವೆ.ಕೇಂದ್ರ ಸರ್ಕಾರದ ಮೇಲೆ ಹೇಳ್ತೀರಲ್ಲ ನಿಮಗೆ‌ ನಾಚಿಕೆ ಆಗಲ್ವಾ.?ರಾಜ್ಯದಲ್ಲಿ ಕುಡಿಯುವ ನೀರನ್ನು ಒದಗಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಪಾತಳಕ್ಕೆ ಇಳಿದಿದೆ ಎಂದು ಕಿಡಿಕಾರಿದ್ದರು.

RELATED ARTICLES

Related Articles

TRENDING ARTICLES