Friday, May 10, 2024

ದಲಿತ ಸಿಎಂ ಕಿಚ್ಚು ಹಚ್ಚಿದ ಮಹದೇವಪ್ಪ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬರುವ ಎಲ್ಲ ಲಕ್ಷಣ ಗೋಚರಿಸುತ್ತಿದೆ. ದಲಿತರಿಗೆ ಸಿಎಂ ಆಗುವ ಅವಕಾಶ ಸಿಗಲಿಲ್ಲವೆಂದು ಸಚಿವ ಡಾ. ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದು, ರಾಜ್ಯ ರಾಜಕೀಯದಲ್ಲಿ ಕಿಚ್ಚು ಹಚ್ಚುವ ಸಾಧ್ಯತೆ ಇದೆ.

ನಗರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಎಸ್​ಸಿ, ಎಸ್​ಟಿ ನೌಕರರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಗೆ ಸಿಎಂ ಆದರು ಎಂದು ವಿವರಿಸಿದರು. ಆದರೆ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್, ನಾನು ಪಾಲಿಸಿ ಮೇಕಿಂಗ್ ಸ್ಥಾನದಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನೀವು ನಾಯಕರನ್ನು ಫಾಲೋ ಮಾಡುತ್ತಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡರು ಯಾಕೆ ಸಿಎಂ ಆದರು? ರಾಜ್ಯದಲ್ಲಿ ಒಗ್ಗಟಾಗಿ ಪಕ್ಷಕ್ಕೆ ಮತ ನೀಡಿದ ಬಳಿಕವೂ ಪುನಃ ಸಿಎಂ ಸ್ಥಾನ ಕೊಡಿ ಎಂದು ಕೇಳುವ ಪರಿಸ್ಥಿತಿ ನಮ್ಮದಾಗಿದೆ.

ಇದನ್ನೂ ಓದಿ: ಧರ್ಮದ ಹೆಸರಲ್ಲಿ ನಿಮ್ಮನ್ನು ಕೆರಳಿಸಿ ವಂಚಿಸುವವರು ಬೇಕಾ? ನಾವು ಬೇಕಾ? ಹೃದಯ ಮುಟ್ಟಿ ಕೇಳಿಕೊಳ್ಳಿ

ಮತ ನಮ್ಮದಿದೆ, ನಾಯಕತ್ವ ಇನ್ಯಾರ ಬಳಿಯೋ ಇದೆ. ಇದಕ್ಕೆ ನಾವು ನಮ್ಮ ನಾಯಕತ್ವ ಬೆಳೆಸದಿರುವುದೇ ಕಾರಣ ಎಂದು ಮಹದೇವಪ್ಪ ಬೇಸರದಿಂದ ಹೇಳಿದರು.

ಅಂಬೇಡ್ಕರ್ ಹೋದ ಮೇಲೆ ರಾಷ್ಟ್ರಮಟ್ಟದಲ್ಲಿ ಪರಿಣಾಮ ಬೀರುವ ದಲಿತ ನಾಯಕರಿಲ್ಲ. ಕರ್ನಾಟಕದಲ್ಲಿ ಪ್ರಭಾವಿ ದಲಿತ ನಾಯಕರು ಇದ್ದರೂ ಸಿಎಂ ಆಗುವ ಅವಕಾಶ ಸಿಗಲಿಲ್ಲ. ಇದು ಇವತ್ತಿನ ರಾಜ್ಯದ ದೇಶದ ರಾಜಕೀಯ ಸನ್ನಿವೇಶ ಎಂದು ಎಚ್. ಸಿ ಮಹಾದೇವಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಕಾಂಗ್ರೆಸ್‌ ಬಗ್ಗೆ ಹೇಳಿದ್ದಲ್ಲ ಎಂದ ಮಹದೇವಪ್ಪ :

ʻಬಹುಜನ ಸಮಾಜ ಒಂದಾಗಿದೆ. ನಿಮಗೆ ಕಣ್ಣು ಕಾಣಲ್ವಾ..? ಬಹುನರು ಒಂದಾಗಿದ್ದಕ್ಕೇ ಕಾಂಗ್ರೆಸ್ ಗೆಲ್ತಾ ಇರೋದುʼʼ ಎಂದು ಹೇಳಿದ ಅವರಿಗೆ ತಾವು ಮಾತನಾಡಿದ್ದು ವಿವಾದ ಆಗಬಹುದು ಎಂಬ ವಾಸನೆ ಬಡಿಯುತ್ತಿದ್ದಂತೆಯೇ ಬೇರೆ ಕಡೆಗೆ ತಿರುಗಿದರು.

ನಾನು ಸಮುದಾಯಗಳ ಬಗ್ಗೆ ಮಾತನಾಡಿದ್ದೇನೆ. ಪಕ್ಷಗಳ ಬಗ್ಗೆ ಹೇಳಿಕೆ ನೀಡಿಲ್ಲ. ನೀವು ವಿಷಯವನ್ನು ಕಾಂಪ್ಲಿಕೇಟ್‌ ಮಾಡಬೇಡಿ ಎಂದು ಹೇಳಿದರು ಮಹದೇವಪ್ಪ. ಕಾಂಗ್ರೆಸ್‌ ಹಲವಾರು ದಲಿತ ನಾಯಕರಿಗೆ ಸಿಎಂ ಸ್ಥಾನ ನೀಡಿದೆ. ಬೇರೆ ಪಾರ್ಟಿ ಕೂಡಾ ಸಿಎಂ ಮಾಡಬೇಕು ಎಂದು ಅವರು ಹೇಳಿದರು. ಕಾಂಗ್ರೆಸ್ ಮಾತ್ರ ನಾಲ್ಕಾರು ರಾಜ್ಯದಲ್ಲಿ ದಲಿತರನ್ನು ಸಿಎಂ ಮಾಡಿರೋದು, ಬೇರೆ ಯಾರು ಮಾಡಿದ್ದಾರೆ ಅಂತ ತೋರಿಸಿ ಎಂದರು.

RELATED ARTICLES

Related Articles

TRENDING ARTICLES