Saturday, May 11, 2024

ವೆಡ್ಡಿಂಗ್ ಆನಿವರ್ಸರಿ ಗಿಫ್ಟ್ ಕೊಡದ ಗಂಡ : ಕೋಪಗೊಂಡು ಚಾಕುವಿನಿಂದ ಇರಿದ ಹೆಂಡತಿ

ಬೆಂಗಳೂರು : ಮದುವೆ ವಾರ್ಷಿಕೋತ್ಸವಕ್ಕೆ ಉಡುಗೊರೆ (ಗಿಫ್ಟ್) ಕೊಡಲಿಲ್ಲ ಎಂದು ಕೋಪ ಮಾಡಿಕೊಂಡು ಪತ್ನಿಯೊಬ್ಬಳು ತನ್ನ ಪತಿಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ಬೆಳ್ಳಂದೂರಿನಲ್ಲಿ ನಡೆದಿದೆ.

ಫೆಬ್ರವರಿ 27 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮದುವೆ ವಾರ್ಷಿಕೋತ್ಸವದ ದಿನ ಮಧ್ಯರಾತ್ರಿ 1.30ರ ಸಮಯದಲ್ಲಿ ಗಂಡನಿಗೆ ಹೆಂಡತಿ ಚಾಕುವಿನಿಂದ ಇರಿದಿದ್ದಾಳೆ.

ಮದುವೆ ವಾರ್ಷಿಕೋತ್ಸವದ ದಿನ ಗಂಡ ನಿದ್ದೆಗೆ ಜಾರಿದ್ದನು. ಈ ವೇಳೆ ಅಡುಗೆ ಮನೆಯಿಂದ ಚಾಕು ತಂದು ಪತ್ನಿ ಇರಿದಿದ್ದಾಳೆ. ಚಾಕುವಿನಿಂದ ಇರಿದ ಹಿನ್ನೆಲೆ ಗಂಡನ ಕೈಗೆ ರಕ್ತಗಾಯವಾಗಿದೆ. ಸ್ಥಳೀಯರ ಸಹಾಯದಿಂದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪತಿ ಗಿಫ್ಟ್​ ನೀಡದಿರಲು ಕಾರಣ ಏನು?

ಈ ಘಟನೆ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಡ-ಹೆಂಡತಿಗೆ ಪೊಲೀಸರು ಕೌನ್ಸೆಲಿಂಗ್ ನಡೆಸಿದ್ದಾರೆ. ತನಿಖೆ ವೇಳೆ ಗಿಫ್ಟ್ ನೀಡಿಲ್ಲ ಎಂದು ಮಹಿಳೆ ಕೃತ್ಯ ಎಸಗಿದ್ದಾಳೆ ಎಂಬ ಮಾಹಿತಿ ತಿಳಿದು ಬಂದಿದೆ. ಆರೋಪಿ ಮಹಿಳೆಯ ಗಂಡನ ತಾತ ತೀರಿ ಹೋಗಿದ್ದರು. ಈ ಹಿನ್ನೆಲೆ ಗಂಡ ತನ್ನ ಪತಿ ಗಿಫ್ಟ್‌ ನೀಡಿರಲಿಲ್ಲ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES