Friday, May 10, 2024

ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆಯ ಸಂದೇಶ

ಬೆಂಗಳೂರು: ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಭಾಗ್ಯ ಪಡೆಯಲು ಭಕ್ತರು 41 ದಿನಗಳ ಕಾಲ ಮಾಲೆ ಧರಿಸಿ, ಇರುಮುಡಿ ಕಟ್ಟಿಕೊಂಡು ಸ್ವಾಮಿ ದರ್ಶನ ಪಡೆಯುತ್ತಾರೆ.ಇತಂಹ ಸಂದರ್ಭದಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗಬಾರದು ಎಂದು ಸಿದ್ದಲಿಂಗೇಶ್ವರ ಗದ್ದುಗೆ ಮಠದ (ಕಾಲಜ್ಞಾನ ಮಠದ) ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಸಂದೇಶವೊಂದು ಕೊಟ್ಟಿದ್ದಾರೆ.

ಹೌದು, ಗುರುಸ್ವಾಮಿ ಮೂಲಕ ಮಾಲೆ ಧರಿಸುವ ಭಕ್ತರು ಕಠಿಣ ನಿಯಮಗಳಿಂದ 41 ದಿನಗಳ ಕಾಲ ದೀಕ್ಷೆ ಪಡೆದ್ದು ಸ್ವಾಮಿಯ ದರ್ಶನಕ್ಕೆ ತೆರಳುತ್ತಾರೆ ಇಂತಹ ಸನ್ನಿವೇಶದಲ್ಲಿ ಭಕ್ತರು ಎಚ್ಚರಿಕೆಯಿಂದ ಇರಬೇಕು.ಈಗಲೇ ಕೇರಳದಲ್ಲಿ ಕೊರೋನಾ ಹೆಚ್ಚುತ್ತಲೇ ಇದೆ. ಬ್ಯಾಕ್ಟೀರಿಯಾಗಳಿಂದ  ರೋಗರುಜಿನಗಳು ಕೇರಳದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಬಗ್ಗೆ ಕೇರಳ ಸರ್ಕಾರವು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ದಿನಾಂಕ 28-09-2023 ರಂದೇ ತಿಳಿಸಿದ್ದೇವೆ. ಈಗಲೂ ತಿಳಿಸುತ್ತಿದ್ದೇವೆ ಎಂದರು.

ವೃದ್ಧರು, ಮಕ್ಕಳು ಅಯ್ಯಪ್ಪಸ್ವಾಮಿಯ ದರ್ಶನವನ್ನು ಬಹಳ ಎಚ್ಚರದಿಂದ ಮಾಡಿ, ಇಲ್ಲವಾದರೆ ನಿಮ್ಮ ಮನದಲ್ಲೇ ಅಯ್ಯಪ್ಪನನ್ನು ನೆನೆದರೆ ಖಂಡಿತವಾಗಿ ಆ ಕರುಣಾಮಯಿ ಅಯ್ಯಪ್ಪಸ್ವಾಮಿಯು ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ. ಅಲ್ಲಿನ ರಾಜ್ಯ ಸರ್ಕಾರ ಅಯ್ಯಪ್ಪಸ್ವಾಮಿ ಭಕ್ತರ ಬಗ್ಗೆ ಕಣ್ಣುಮುಚ್ಚಿ ಕುಳಿತುಕೊಂಡಿದೆ, ಭಕ್ತರ ಬಗ್ಗೆ ಯಾವುದೇ ಎಚ್ಚರಿಕೆಯ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ, ಕೇರಳ ರಾಜ್ಯ ಸರ್ಕಾರಕ್ಕೆ ಅಯ್ಯಪ್ಪನ ಭಕ್ತರಿಂದ ಬರುವ ಹಣ ಮಾತ್ರ ಬೇಕು ಆದರೆ ಅಯ್ಯಪ್ಪನ ಭಕ್ತರ ಬಗ್ಗೆ ಕಾಳಜಿ ಮಾತ್ರ ಬೇಕಾಗಿಲ್ಲ, ಇಂತಹ ಸರ್ಕಾರಕ್ಕೆ ಅಯ್ಯಪ್ಪನೇ ತಕ್ಕ ಬುದ್ಧಿಯನ್ನು ಕಲಿಸುತ್ತಾನೆ. ಆದಷ್ಟೂ ಅಯ್ಯಪ್ಪ ಭಕ್ತರು ಎಚ್ಚರದಿಂದ ಪ್ರಯಾಣವನ್ನು ಮಾಡುವುದು ಸೂಕ್ತ ಎಂದರು.

ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಬಗ್ಗೆ ತಿಳಿದು ತಿಳಿದು ತದ ತದ ನಂತರ ನ ಯಾತ್ರೆಯನ್ನು ಕೈಗೊಳ್ಳಬೇಕಾಗಿ ತಿಳಿಸುತ್ತಿದ್ದೇವೆ. ಮಠ) ಶ್ರೀಸಿದಲಿಂಗೆ ಎಲ್ಲಾ ಗುರುಸ್ವಾಮಿಗಳಲ್ಲಿ ಒಂದು ವಿನಂತಿ, ಜಾನ ಮಠ) ನೀವು ನಿಮ್ಮ ಯಾತ್ರೆಯನ್ನು ಪ್ರಾರಂಭಿಸುವ ಮೊದಲು ಅಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಒಳಿತು.

ಆದಷ್ಟು ಮಕ್ಕಳು, ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳು ಮತ್ತು ವೃದ್ಧರು ಅಯ್ಯಪ್ಪಸ್ವಾಮಿಯ ದರ್ಶನವನ್ನು ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡುವುದು ಒಳಿತು ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

 

 

 

RELATED ARTICLES

Related Articles

TRENDING ARTICLES