Friday, May 10, 2024

ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಇರಲಿ ಕಾಳಜಿ

ಬೆಂಗಳೂರು: ಈಗಲೇ ಚಳಿಗಾಲ ಶುರುವಾಗಿದೆ. ಈ ಸೀಸನ್​ನಲ್ಲಿ ವಾತಾವರಣವು ದೇಹಕ್ಕೆ ತುಂಬಾ ಕಠಿಣ ಸವಾಲನ್ನು ತಂದು ಆರೊಗ್ಯದಲ್ಲಿ ಏರುಪೇರು ಉಂಟುಮಾಡುತ್ತದೆ ಆದ್ದರಿಂದ ಆರೋಗ್ಯದ ಬಗ್ಗೆ ಣಾವು ಕೊಂಚ ಕಾಳಜಿಯನ್ನು ವಹಿಸಬೇಕು.

ಹೌದು, ಈ ಸಮಯದಲ್ಲಿ ಹೆಚ್ಚಿನ ಅನಾರೋಗ್ಯಗಳು ಬರುವುದು ಮಾತ್ರವಲ್ಲದೆ, ದೈಹಿಕವಾಗಿಯು ಇದು ಹಿಂಡಿಹಿಪ್ಪೆ ಮಾಡುವುದು. ಚಳಿಯಿಂದಾಗಿ ಚರ್ಮದ ಮೇಲೆ ತೀವ್ರ ಪರಿಣಾಮ ಬೀರುವುದು. ಇಷ್ಟು ಮಾತ್ರವಲ್ಲದೆ ಪಾದಗಳು ಕೂಡ ಒಡೆದು ರಕ್ತಸ್ರಾವ ಆಗುವಂತಹ ಪರಿಸ್ಥಿತಿ ನಿರ್ಮಾಣವಾಗುವುದು.

ಇದನ್ನೂ ಓದಿ: ಉತ್ತಮ ಜೀವನಕ್ಕೆ ನಿಮ್ಮ ಆಹಾರ ಪದ್ಧತಿ, ಜೀವನ ಶೈಲಿ ಹೇಗಿರಬೇಕು ಗೊತ್ತಾ?

ಚಳಿಗಾಲದಲ್ಲಿ ಸರಿಯಾದ ಆಹಾರ ಕ್ರಮದೊಂದಿಗೆ ವ್ಯಾಯಾಮ ಮಾಡಿಕೊಂಡಿದ್ದರೆ ಆಗ ಖಂಡಿತವಾಗಿಯೂ ರಕ್ಷಣೆ ಪಡೆಯಬಹುದು. ಇಷ್ಟು ಮಾತ್ರವಲ್ಲದೆ ದೇಹವನ್ನು ಬೆಚ್ಚಗೆ ಇಡಲು ದಪ್ಪಗಿನ ಹತ್ತಿ ಬಟ್ಟೆ, ಶಾಲ್‌ನ್ನು ಕಿವಿಗಳಿಗೆ ಸುತ್ತಿಕೊಳ್ಳಬೇಕು. ಉಣ್ಣೆ ಬಟ್ಟೆಯನ್ನು ನೀವು ಈ ವೇಳೆ ಕಡೆಗಣಿಸಬೇಕು. ನೀವು ಚಳಿಗಾಲದಲ್ಲಿ ಪ್ರಾಣಿಗಳ ಚರ್ಮದಿಂದ ತಯಾರಿಸಿಕೊಂಡಿರುವ ಬಟ್ಟೆ ಧರಿಸಲೇಬಾರದು.

ಕಾಂತಿಯುತ ಚರ್ಮ ಮತ್ತು ದೇಹವನ್ನು ಆರೋಗ್ಯವಾಗಿಡಲು ಚಳಿಗಾಲದಲ್ಲಿ ಪಾಲಿಸಬೇಕಾದ ಕೆಲವು ಆರೋಗ್ಯ ಸಲಹೆಗಳು ಈ ಕೆಳಗಿನಂನೆ ಇವೆ.

  1. ಆರೋಗ್ಯ ಹೆಚ್ಚಿನ ಆದ್ಯತೆ ನೀಡಿ
  2. ಹೆಚ್ಚು ನೀರು ಕುಡಿಯುವ ಅಭ್ಯಾಸವನ್ನು ರೊಢಿಸಿಕೊಳ್ಳಿ.
  3. ಒಳ್ಳೆಯ ನಿದ್ರೆ ಮಾಡುವುದು ಉತ್ತಮ
  4. ಆರೋಗ್ಯಕಾರಿ ಆಹಾರ ಸೇವಿಸಿ, ಸಸ್ಯಾಹಾರ ಕಡೆ ಗಮನಹರಿಸಿ
  5. ಹೆಚ್ಚು ಸಮಯ ಸ್ನಾನ ಮಾಡಬೇಡಿ
  6. ಒಳ್ಳೆಯ ವ್ಯಾಯಾಮ  ಮಾಡಿ
  7. ಬೆಚ್ಚನೆಯ ಬಟ್ಟೆಗಳನ್ನು ಧರಿಸಿ

ನೀವು ಈ ಮೇಲಿನ ವಿಧಾನವನ್ನು ಫಾಲೋ ಮಾಡಿದ್ರೆ ನಾವು ಆರೋಗ್ಯದ ಬಗ್ಗೆ ಕಾಳಜಿ ಮಾಡಬಹುದು.

 

RELATED ARTICLES

Related Articles

TRENDING ARTICLES