Friday, May 10, 2024

ರಸ್ತೆಗಿಳಿದು ಕಲ್ಲು ತೂರಿ, ಬಸ್ಸಿಗೆ ಬೆಂಕಿ ಹಚ್ಚಿ ಮೀಸಲಾತಿ ಸಿಗುತ್ತೆ : ಹಡಪದ ಶ್ರೀ ವಿವಾದಾತ್ಮಕ ಹೇಳಿಕೆ

ದಾವಣಗೆರೆ : ಮೀಸಲಾತಿ ಬೇಕು ಎಂದರೆ ಬಸ್ಸಿಗೆ ಬೆಂಕಿ ಹಚ್ಚಿ, ಕಲ್ಲು ತೂರಿ ಎಂದು ಹಡಪದ ಮಠದ ಶ್ರೀಗಳಾದ ಅನ್ನದಾನಿ ಭಾರತಿ ಹಡಪದ ಅಣ್ಣಪ್ಪ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಈ ರೀತಿಯ ವಿವಾದಾತ್ಮಕ ಹೇಳಿಕೆಯನ್ನ ಶ್ರೀಗಳು ಹೇಳಿದ್ದಾರೆ. ಭಾಷಣ ಮಾಡುತ್ತಿದ್ದ ಅವರು, ಯಾರು ಸಹ ಕರೆದು ಮೀಸಲಾತಿ ಸೌಲಭ್ಯ ಕೊಡೋದಿಲ್ಲ. ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ಅವಶ್ಯಕವಾಗಿದೆ. 2ಎ ಮೀಸಲಾತಿಗಾಗಿ ಹೋರಾಟ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

ಮಕ್ಕಳ ಭವಿಷ್ಯ ಉಜ್ವಲ ಆಗಬೇಕು ಎಂದರೆ ಬೀದಿಗೆ ಇಳಿಯಿರಿ. ಬೀದಿಗೆ ಇಳಿದು ಕಲ್ಲು ತೂರಿ, ಬೆಂಕಿ ಹಚ್ಚಿ ಆಗ ಸವಲತ್ತು ಸಿಗುತ್ತವೆ. ಸುಮ್ ಸುಮ್ನೆ ಸೌಲಭ್ಯ ಯಾರು ಕೊಡುವುದಿಲ್ಲ. ನಿಮ್ಮ ಹಕ್ಕು ಕಿತ್ತುಕೊಳ್ಳಿ, ನೀವೇ ಬೆಂಕಿ ಹಚ್ಚಿ. ಇಲ್ಲ ಎಂದರೆ ನಿಮ್ಮ ಹಕ್ಕುಗಳನ್ನು ಮೂಟೆ ಕಟ್ಟೆ ಇಡಿ ಎಂದು ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದ್ದಾರೆ.

ಜಾತಿ ಗಣತಿಯಿಂದ ದೇಶದ ಪ್ರಗತಿ

ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಜಾತಿಗಣತಿ ಮಾಡುವ ಪರಮಾಧಿಕಾರ ಕೇಂದ್ರ ಸರ್ಕಾರಕ್ಕಿದೆ. ಜಾತಿ ಗಣತಿ ಯಾವುದೇ ದುರುದ್ದೇಶದಿಂದ ಕೂಡಿರಬಾರದು. ಎಲ್ಲ ಸಮಾಜಕ್ಕೂ ಸಾಮಾಜಿಕ ನ್ಯಾಯ ಕೊಡುವಂತಿರಬೇಕು. ಈ ರೀತಿ ಜಾತಿ ಗಣತಿ ಮಾಡಿದರೆ ದೇಶ ಪ್ರಗತಿ ಹೊಂದಲಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES