Monday, May 20, 2024

ಆಸ್ತಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ : ಎಣ್ಣೆ ಏಟಲ್ಲಿ ಚಿಕ್ಕಪ್ಪನನ್ನೇ ಕೊಂದ ಮಗ

ಚಿಕ್ಕೋಡಿ : ಆಸ್ತಿ ವಿಚಾರಕ್ಕೆ ಚಿಕ್ಕಪ್ಪ ಹಾಗೂ ಮಗನ ಮಧ್ಯೆ ನಡೆದ ಜಗಳ, ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದಿದೆ.

ಕೇಶವ ಬೊಸಲೆ (47) ಕೊಲೆಯಾದ ದುರ್ದೈವಿ. ಖಂಡೊಬಾ ಬೊಸಲೆ (27) ಚಿಕ್ಕಪ್ಪನನ್ನೇ ಕೊಂದ ಪಾಪಿ ಮಗ. ಇಬ್ಬರೂ ದಬದಬಹಟ್ಟಿ ಗ್ರಾಮದ ನಿವಾಸಿಗಳು.

ಕಳೆದ 20 ವರ್ಷಗಳಿಂದ ಜಮೀನಿನ ವಿಚಾರಕ್ಕೆ ಚಿಕ್ಕಪ್ಪ ಹಾಗೂ ಮಗನ ನಡುವೆ ಕಲಹ ಇತ್ತು. ಆಗಾಗ್ಗೆ ಇಬ್ಬರ ನಡುವೆ ಇದೇ ವಿಚಾರಕ್ಕೆ ಜಗಳ ನಡೆಯುತ್ತಲ್ಲೇ ಇತ್ತು. ನಿನ್ನೆ ಇಬ್ಬರು ದಾಯಾದಿಗಳು ಕೂಡಿ ಕೊಕಟನೂರ ಹೊರವಲಯದಲ್ಲಿ ಮದ್ಯ ಸೇವನೆ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ : 8 ಜನರು ದಾರುಣ ಸಾವು, 18 ಮಂದಿ ಗಂಭೀರ

ಮದ್ಯ ಸೇವನೆ ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದ ತಾರಕಕ್ಕೇರಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಕೋಪದ ಕೈಗೆ ಬುದ್ದಿ ಕೊಟ್ಟ ಮಗ, ಚಿಕ್ಕಪ್ಪನ್ನೇ ಕೊಂದಿದ್ದಾನೆ. ಸದ್ಯ ಕೊಲೆ ಮಾಡಿದ ಆರೋಪಿ ಖಂಡೊಬಾ ಬೊಸಲೆಯನ್ನು ಐಗಳಿ ಪೋಲಿಸರು ಬಂಧಿಸಿದ್ದಾರೆ. ಈ ಸಂಬಂಧ ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES