Saturday, May 11, 2024

ಸನಾತನ ಧರ್ಮ ಶಾಶ್ವತವೇ ಅಲ್ಲ : ನಟ ಚೇತನ್

ತುಮಕೂರು : ‘ನನ್ನ ಪ್ರಕಾರ ಸೂರ್ಯ-ಚಂದ್ರ, ಬೆಟ್ಟ-ಗುಡ್ಡ ಇವುಗಳೇ ಶಾಶ್ವತವೇ ಹೊರತು ಸನಾತನ ಧರ್ಮವಲ್ಲ. ಸನಾತನ ಧರ್ಮವನ್ನು ಮಲೇರಿಯಾ, ಡೆಂಘಿಗೆ ಹೋಲಿಸಿರುವುದು ಪ್ರಶ್ನಾರ್ಹ’ ಎಂದು ನಟ ಚೇತನ್ ಕುಮಾರ್ ಹೇಳಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಮಾನತೆ ಪಕ್ಷಗಳು ತಮಿಳುನಾಡಿನಲ್ಲಿ ಇಲ್ಲ. ಅವುಗಳು ಕರ್ನಾಟಕದಲ್ಲಿವೆ. ಪೆರಿಯಾರ್ ಚಳವಳಿ ತಮಿಳುನಾಡಿಗಿಂತ ಹೆಚ್ಚಾಗಿ ನಮ್ಮ ರಾಜ್ಯಕ್ಕೆ ಅಗ್ಯತವಿದೆ ಎಂದು ತಿಳಿಸಿದ್ದಾರೆ.

ಸನಾತನ ಹಿಂದೂ ಧರ್ಮ ಆಗಿರಬಹುದು. ಇಸ್ಲಾಂ, ಕ್ರೈಸ್ತವಾಗಿರಬಹುದು. ಜೈನ, ಬೌದ್ಧ, ಸಿಖ್, ನವಯಾನ ಧರ್ಮವಾಗಿರಬಹುದು. ಲಿಂಗಾಯತ ಧರ್ಮವಾಗಿರಬಹುದು. ಇದನ್ನು ಆಚರಿಸಬಹುದು. ಆದರೆ, ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಅಂದರೆ ಅದಕ್ಕೆ ಅರ್ಥ ಏನು? ಎಂದು ಪ್ರಶ್ನಿಸಿದ್ದಾರೆ.

ಸನಾತನ ಅಂದರೆ ಶಾಶ್ವತ

ಸನಾತನ ಹಿಂದೂ ಧರ್ಮವನ್ನು ಉಳಿಸುತ್ತಿರುವುದೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ. ರಾಜಾರಾಮ್ ಮೋಹನ ರಾಯ್ ಸನಾತನ ಧರ್ಮವನ್ನು ಹಿಂದೂ ಧರ್ಮ ಅಂತ ಕರೆದರು. ಅದಕ್ಕೂ ಮೊದಲು ವೈದಿಕ ಧರ್ಮ, ವರ್ಣಾಶ್ರಮ ಧರ್ಮ, ಬ್ರಾಹ್ಮಣ ಧರ್ಮ ಮತ್ತು ಸನಾತನ ಧರ್ಮ ಅಂತ ಕರೆಯುತ್ತಿದ್ದರು. ಸನಾತನ ಧರ್ಮ ಎಂಬ ಪದ ಸಂಸ್ಕೃತ ಮತ್ತು ಪಾಲಿಯಿಂದ ಬಂದಿದೆ. ಸನಾತನ ಅಂದರೆ ಶಾಶ್ವತ ಎಂಬ ಅರ್ಥವಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES