Friday, May 10, 2024

ಚಿಕನ್‌ ಪ್ರಿಯರಿಗೆ ಸಿಹಿ ಸುದ್ದಿ: ಕಳೆದ ಮೂರು ದಿನಗಳಿಂದ ಚಿಕನ್ ದರ ಇಳಿಕೆ!

ಬೆಂಗಳೂರು : ಬೆಳಗ್ಗೆ ಎದ್ರೆ ಸಾಕು ದಿನಸಿ,ತರಕಾರಿ ದರ ಕೇಳಿ ತಲೆಬಿಸಿ ಮಾಡ್ಕೊಳ್ತಿದ್ದ ಮಂದಿಗೆ ಮಾಂಸ ದರ ಇಳಿಕೆಯಿಂದ ಕೊಂಚ ರಿಲೀಫ್ ಸಿಕ್ಕಂತಾಗಿದೆ. 40 ರೂ.ನಿಂದ 50 ರೂ. ವರೆಗೆ ಚಿಕೆನ್ ದರ ಗಣನೀಯ ಇಳಿಕೆಯಾಗಿದೆ.

ಕಳೆದ ಒಂದೂವರೆ ತಿಂಗಳಿನಿಂದ ಚಿಕನ್ ದರ 250 ರಿಂದ 300 ರೂ.ವರೆಗೆ ಏರಿಕೆಯಾಗಿ ಗ್ರಾಹಕರಿಗೆ ಬಿಸಿ ತಟ್ಟಿತ್ತು. ಆದರೆ. ಈಗ ಏರುಗತಿಯಲ್ಲಿ ಸಾಗಿದ್ದ ಚಿಕನ್ ದರ ಕಳೆದ ಮೂರು ದಿನಗಳಿಂದ ಇಳಿಕೆಯಾಗಿದೆ.

ಇನ್ನು ನಾಳೆಯಿಂದ ಶ್ರಾವಣ ಮಾಸ ಶುರುವಾಗತಿದ್ದುಬಹುತೇಕರು ಶ್ರಾವಣ ಮಾಸದಲ್ಲಿ ಮಾಂಸಹಾರ ಸೇವಿಸುವುದಿಲ್ಲ. ಹೀಗಾಗಿ, ಚಿಕನ್ ದರ ಮತ್ತಷ್ಟು ಕಡಿಮೆಯಾಗಲಿದೆ.

ಇದನ್ನೂ ಓದಿ : ಬಲು ರುಚಿ ಚೆಟ್ಟಿನಾಡು ಚಿಕನ್​​​​ : ನಿಮ್ಮ ಕೈಯಾರ ನಿಮ್ಮವರಿಗೆ ಮಾಡಿ ಬಡಿಸಿ

ಇನ್ನು ಬೇಸಿಗೆಯಲ್ಲಿ ಕೋಳಿಗಳು ಆಹಾರ ಕಡಿಮೆ ಸೇವಿಸುತ್ತವೆ. ಹೀಗಾಗಿ, ಬೆಳವಣಿಗೆ ಕಡಿಮೆಯಾಗಿ ಕೋಳಿಗಳ ಉತ್ಪಾದನೆ ಕುಂಠಿತವಾಗಿದ್ದರಿಂದ ದರ ಏರಿಕೆಯಾಗಿತ್ತು. ಮೊಟ್ಟೆ ದರ ಕೂಡ ಭಾರಿ ಏರಿಕೆ ಕಂಡಿತ್ತು. ಇದೀಗ ಮುಂಗಾರು ಆರಂಭ ಗೊಂಡಿದ್ದು, ಕೋಳಿಗಳಿಗೆ ಪೂರಕ ವಾತಾವರಣವಿದೆ. ಹೀಗಾಗಿ, ಕೋಳಿಗಳು ಆಹಾರ ಸೇವಿಸುತ್ತಿದ್ದು, ತೂಕವೂ ಹೆಚ್ಚಾಗುತ್ತಿದೆ.

ಶ್ರಾವಣ ಹಿನ್ನೆಲೆ ಬೇಡಿಕೆಯು ಕಡಿಮೆಯಾಗುವುದರಿಂದ ಚಿಕನ್ ದರ ಸಹಜವಾಗಿಯೇ ಮತ್ತಷ್ಟು ಇಳಿಕೆಯಾಗಲಿದೆ ಎಂದು ಹೇಳಲಾಗಿದೆ. ಒಟ್ಟಾರೆ ಬೆಲೆ ಏರಿಕೆ ಇಂದ ಬೇಸತ್ತಿದ್ದ ಮಂದಿಗೆ ಮಾಂಸ ದರ ಇಳಿಕೆಯಿಂದ ಕೊಂಚ ರಿಲೀಫ್ ಸಿಕ್ಕಂತಾಗಿದೆ.

RELATED ARTICLES

Related Articles

TRENDING ARTICLES