Friday, May 10, 2024

ಶಿರಾ ಜಿಲ್ಲೆ ಆಗಬೇಕೆಂಬ ‘ಜನರ ಕನಸು ಪೂರೈಸುತ್ತೇನೆ’ : ಟಿ.ಬಿ ಜಯಚಂದ್ರ

ತುಮಕೂರು : ಶಿರಾ ಜಿಲ್ಲೆ ಆಗಬೇಕು ಅನ್ನೋದು ಇಲ್ಲಿನ ಜನತೆಯ ಆಶಯ. ಅವರ ಕನಸನ್ನು ನಾನು ನನಸು ಮಾಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಭರವಸೆ ನೀಡಿದರು.

ಶಿರಾ ವಿಧಾನಸಭಾ ಕ್ಷೇತ್ರದ ಮೇಲಕುಂಟೆ ಪಂಚಾಯತಿ, ಹುಚ್ಚಗಿರನಹಳ್ಳಿ ಉಗಣೆಕಟ್ಟೆ ಗೇಟ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಪಕ್ಷ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಪ್ರಚಾರ ನಡೆಸಿ, ಮತಯಾಚಿಸಿದರು.

ಪ್ರಚಾರದ ಸಂದರ್ಭದಲ್ಲಿ ಪವರ್ ಟಿವಿ ಜೊತೆಗೆ ಮಾತನಾಡಿರುವ ಅವರು, ಶಿರಾದಲ್ಲಿ ಹೊಸದಾಗಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಶಿರಾ ಜಿಲ್ಲೆ ಆಗಬೇಕು ಅನ್ನೋದು ಇಲ್ಲಿನ ಜನತೆಯ ಆಶಯ. ಖಂಡಿತ ಈ ಸಲ ಎಲ್ಲಾ ನಿರೀಕ್ಷೆಗಳನ್ನು ಪೂರೈಸುವ ಪ್ರಯತ್ನ ಮಾಡ್ತೇನೆ ಎಂದು ಹೇಳಿದರು.

ಇದನ್ನೂ ಓದಿ : ಇದು ‘ಸಿದ್ದರಾಮಯ್ಯರ ಕೊನೆ ಚುನಾವಣೆ’, ಪ್ಲೀಸ್.. ಗೆಲ್ಲಿಸಿ

ಈ ಹಿಂದೆ ಹತ್ತು ವರ್ಷಗಳ ಕಾಲ ಮೂರು ಸಾವಿರ ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ಈ ಹಿನ್ನೆಲೆ ಈ ಬಾರಿ ಚುನಾವಣಾ ಪ್ರಚಾರ ನಡೆಸಲು ಸುಲಭವಾಗುತ್ತಿದೆ. ಸಾಕಷ್ಟು ನೀರಾವರಿ ಯೋಜನೆಗಳ ಮೂಲಕ ಕೆರೆಗಳ ಅಭಿವೃದ್ಧಿ ಮಾಡಿದ್ದೇನೆ ಎಂದು ಟಿ.ಬಿ ಜಯಚಂದ್ರ ತಿಳಿಸಿದರು.

ಒಂದು ಸಾವಿರ ರೂ. ದೇಣಿಗೆ

ಯಾದಲಡಕು ಗೊಲ್ಲರಹಟ್ಟಿ ಗ್ರಾಮದ ವಿಶೇಷ ಚೇತನ (ವಿಕಲಚೇತನ) ನೇಗಿಲು ತಯಾರು ಮಾಡುವ ಕಾಡುಗೊಲ್ಲ ಸಮುದಾಯದ ಕೃಷ್ಣಪ್ಪ ಅವರು ತಮ್ಮ ಕೆಲಸದಿಂದ ಕೂಡಿಟ್ಟ ಒಂದು ಸಾವಿರ ರೂಪಾಯಿ ಹಣವನ್ನು ಟಿ.ಬಿ ಜಯಚಂದ್ರ ಅವರಿಗೆ ದೇಣಿಗೆ ನೀಡಿದರು. ಈ ಬಾರಿಯ ಚುನಾವಣೆಯಲ್ಲಿ ನೀವು ಗೆದ್ದು ಬರಬೇಕು ಎಂದು ತುಂಬು ಹೃದಯದಿಂದ ಹರಸಿದರು‌.

ಈ ಕುರಿತು ಪ್ರತಿಕ್ರಿಯಿಸಿರುವ ಟಿ.ಬಿ ಜಯಚಂದ್ರ ಅವರು, ನಿಜಕ್ಕೂ ಇಂತಹ ಹಿರಿಯ ಜೀವಿಯ ಹಾರೈಕೆ, ಪ್ರೀತಿ ಅಭಿಮಾನ ಕೋಟಿ ರೂಪಾಯಿ ಕೊಟ್ಟರು ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES