Friday, May 10, 2024

ಪವರ್ ಬೇಟೆ ನಂ.16 : ‘ಎಲ್ಲರಿಗೂ ಎಷ್ಟು ಕೊಟ್ಟಿದ್ದೀರಿ’.. ನನ್ಗೂ ಅಷ್ಟೇ ಕೊಡಿ ಎಂದ ರಹೀಂ ‘ಸಾಹೇಬ್ರು’

ಬೆಂಗಳೂರು : ಯಾರು ನೀವು? ಏನು ವಿಷಯ? ಓಎಫ್​ಸಿ ಕೇಬಲ್ ಅಳವಡಿಕೆ ಮಾಡ್ತೀರಾ? ಒಕೆ, ಎಲ್ಲರಿಗೂ ಎಷ್ಟು ಕೊಟ್ಟಿದ್ದೀರಿ ನನಗೂ ಅಷ್ಟೇ ಕೊಡಿ.

ಇದು, ಬೀದರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವರಾದ ರಹೀಂ ಖಾನ್ ಲಂಚಾವತಾರ. ಪವರ್ ಟಿವಿ ಮೆಗಾ ಬೇಟೆಯಲ್ಲಿ ರಹೀಂ ಸಾಹೇಬ್ರು ಲಂಚ ಪುರಾಣ ಜಗಜ್ಜಾಹಿರು ಆಗಿದೆ. ಪವರ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 16ನೇ ಬೇಟೆಯೇ ಕಾಂಗ್ರೆಸ್ ಶಾಸಕ ರಹೀಂ ಖಾನ್.

ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಪ್ರತೀ ಕಿಲೋಮೀಟರ್​​​​ಗೆ ಒಂದು ಲಕ್ಷ ರೂಪಾಯಿ ಲಂಚಕ್ಕೆ ಶಾಸಕ ರಹೀಂ ಖಾನ್ ಫೈನಲ್ ಆಗಿ ವ್ಯವಹಾರ ಕುದುರಿಸಿದ್ದಾರೆ. ಬೀದರ್​​ನಲ್ಲಿರುವ ರಹೀಂ ಖಾನ್ ನಿವಾಸಕ್ಕೆ ‘ಪವರ್’ ತಂಡದ ಭೇಟಿ ನೀಡಿತ್ತು. ಓಎಫ್​ಸಿ ಕೇಬಲ್ ಅಳವಡಿಕೆಗೆ ಪರ್ಮಿಶನ್​ ನೀಡುವಂತೆ ಪ್ರಸ್ತಾಪ ಮಾಡಿತ್ತು.

1 ಲಕ್ಷ ರೂಪಾಯಿಗೆ ಡೀಲ್

ಈ ವೇಳೆ ಶಾಸಕ ರಹೀಂ ಖಾನ್, ಎಲ್ಲರಿಗೂ ಎಷ್ಟು ಕೊಟ್ಟಿದ್ದೀರಿ ನನಗೂ ಅಷ್ಟೇ ಕೊಡಿ ಎಂದು ಪ್ರಸ್ತಾಪ ಮಾಡಿದ್ದಾರೆ. ಅಂತಿಮವಾಗಿ ಪ್ರತೀ ಕಿಲೋಮೀಟರ್​ಗೆ 1 ಲಕ್ಷ ರೂಪಾಯಿ ಡೀಲ್​ಗೆ ಒಪ್ಪಿಕೊಂಡಿದ್ದಾರೆ. ಸಹಾಯಕನ ಮೂಲಕ 1 ಲಕ್ಷ ರೂಪಾಯಿ ಅಡ್ವಾನ್ಸ್ ಅನ್ನು ಪಡೆದಿದ್ದಾರೆ. ರಹೀಂ ರಂಗಿತರಂಗಿ ಲಂಚದಾಟ ಪವರ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಹೀಂ ಖಾನ್

ಪಕ್ಷ : ಕಾಂಗ್ರೆಸ್

ಕ್ಷೇತ್ರ: ಬೀದರ್

ಜಿಲ್ಲೆ: ಬೀದರ್

ಸ್ಥಳ: ಶಾಸಕರ ನಿವಾಸ, ಬೀದರ್

RELATED ARTICLES

Related Articles

TRENDING ARTICLES