Saturday, May 11, 2024

ಕಬ್ಜದಲ್ಲಿ ರೆಟ್ರೋ ಕಾರ್ಗಳ ಕಲರವ : ಅಬ್ಬಬ್ಬಾ ಎಷ್ಟು ಕೋಟಿ ವೆಚ್ಚ ಮಾಡಿದ್ದಾರೆ ಗೊತ್ತಾ..?

ಬೆಂಗಳೂರು : ಕಬ್ಜ.. ಇದು ಸೌತ್ ಸಿನಿ ದುನಿಯಾದಲ್ಲಿ ಹಲ್ ಚಲ್ ಎಬ್ಬಿಸಿರುವ ಸಿನಿಮಾ. ಕಬ್ಜ ಚಿತ್ರದ ಮೇಕಿಂಗ್ ಲೆವೆಲ್ ನೋಡ್ತಿದ್ರೆ ಕೆಜಿಎಫ್ ಸಿನಿಮಾವನ್ನು ಸಹ ಒಂದು ಕೈ ಮೀರಿಸುವಂತಿದೆ. ಸಿನಿಮಾಕ್ಕಾಗಿ ಖರ್ಚು ಮಾಡಿರೋದು, ಕಬ್ಜ ವರ್ಲ್ಡ್​ ಕ್ರಿಯೇಟ್ ಮಾಡಿರೋ ಪರಿ ನಿಜಕ್ಕೂ ವರ್ಣಿಸಲಸಾಧ್ಯ.

ಹೌದು, ಕಬ್ಜ ಸಿನಿಮಾ ರೆಟ್ರೋ ಕಥಾನಕ ಆಗಿರುವುದರಿಂದ ಕಂಪ್ಲೀಟ್ ಬ್ಯಾಕ್​ಡ್ರಾಪ್ ರೆಟ್ರೋ ಶೈಲಿಯಲ್ಲೇ ಮೂಡಿ ಬಂದಿದೆ. 1945ರಿಂದ 1987 ವರೆಗಿನ ಕಾಲಘಟ್ಟದ ಈ ಚಿತ್ರಕ್ಕಾಗಿ ನೂರಾರು ವಿಂಟೇಜ್ ವೆಹಿಕಲ್ಸ್​​ನ ಬಳಸಲಾಗಿದೆ.

ಆ ಪೈಕಿ 30ಕ್ಕೂ ಅಧಿಕ ವಿಂಟೇಜ್ ಕಾರ್​​ಗಳು ಚಿತ್ರದಲ್ಲಿ ಹೈಲೆಟ್ ಆಗಲಿವೆ. ದುಬಾರಿ ಕಾರ್​​ಗಳನ್ನು ಹೆಕ್ಕಿ, ಸೆಟ್​ಗೆ ತರಿಸಿ, ಚಿತ್ರೀಕರಿಸಿರುವ ನಿರ್ದೇಶಕ ಆರ್.ಚಂದು ಸಹಾಸಕ್ಕೆ ಸೈ ಎನ್ನಬೇಕು. ಇದು ಅಸಾಧ್ಯ ಎನ್ನುವವರಿಗೆ ಸಾಧ್ಯವಾಗಿಸಿದ್ದಾರೆ ಆರ್. ಚಂದ್ರು. ಮೂವರು ಸೂಪರ್ ಸ್ಟಾರ್​ಗಳ ಮಹಾಸಂಗಮದಿಂದ ಜಗಮಗಿಸುತ್ತಿರೋ ಕಬ್ಜ ಅಡ್ಡದ ಮತ್ತೊಂದು ವಿಶೇಷವಾಗಿದೆ.

ಚಂದನವನದಲ್ಲಿ ನ್ಯೂ ಟ್ರೆಂಡ್​ ಸೆಟ್

ಸ್ಯಾಂಡಲ್ ವುಡ್ ನ ಟ್ರೆಂಡ್​ ಸೆಟ್ಟರ್​ಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಉಪೇಂದ್ರ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಆದರೆ, ಹೊಂಬಾಳೆ ಫಿಲಂಸ್​ ಮಾಡಿದ ಸಾಹಸಗಳಿಂದ ಪ್ರಶಾಂತ್ ನೀಲ್, ಯಶ್, ರಿಷಬ್ ಶೆಟ್ಟಿ ಕೂಡ ‘ಕ್ರಾಂತಿ’ ಮಾಡಿದ್ದು ಸುಳ್ಳಲ್ಲ. ಇದೀಗ ಆ ಸಾಲಿಗೆ ಹೊಸದೊಂದು ಹೆಸರು ಸೇರಿಕೊಳ್ಳಲಿದ್ದು, ಅದು ಆರ್ ಚಂದ್ರು ಎಂದರೆ ನಿಜಕ್ಕೂ ತಪ್ಪಾಗಲಾರದು.

ಇದನ್ನೂ ಓದಿ : ದಾಖಲೆ ಮೊತ್ತಕ್ಕೆ ಕಬ್ಜ ತಮಿಳು ರೈಟ್ಸ್ ಸೇಲ್

ಹಲ್ ಚಲ್ ಎಬ್ಬಿಸುತ್ತಿರುವ ಬಯಲುಸೀಮೆ ಪ್ರತಿಭೆ

ನಿರ್ದೇಶಕ ಆರ್. ಚಂದ್ರು ಮೂಲತಃ ಬಯಲುಸೀಮೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಒಂದು ಸಣ್ಣ ಹಳ್ಳಿ ಕೇಶವಾರದವರು. ಅವರ ಈ ಹಿಂದಿನ ಎಲ್ಲಾ ಸಿನಿಮಾಗಳು ಒಂದು ಲೆಕ್ಕ ಆದ್ರೆ, ಕಬ್ಜ ನೆಕ್ಟ್ಸ್ ಲೆವೆಲ್ ಎಂದೇ ಹೇಳಬಹುದು. ಕಬ್ಜ ಸಿನಿಮಾವನ್ನು ಇಷ್ಟೊಂದು ದೊಡ್ಡ ಸ್ಕೇಲ್​​ನಲ್ಲಿ ಮಾಡಲು ಮುಂದಾದ ಅವರ ಧೈರ್ಯ ಹಾಗೂ ಮನಸ್ಥಿತಿ ಇದನ್ನು ಸಾರಿ ಹೇಳುತ್ತಿದೆ.

ಕಬ್ಜ ಎಂಬ ಸೂಪರ್ ಪ್ರಾಡಕ್ಟ್​​ನ ಚಂದ್ರು ತಯಾರು ಮಾಡಿದ್ದಷ್ಟೇ ಅಲ್ಲ. ಅಷ್ಟೇ ಅದ್ಭುತವಾಗಿ ಮಾರ್ಕೆಟಿಂಗ್ ಕೂಡ ಮಾಡುತ್ತಿದ್ದಾರೆ. ಬಾಲಿವುಡ್​ ಶೆಹೆನ್​ಷಾ ಬಿಗ್ ಬಿ ಅಮಿತಾಬ್ ಬಚ್ಚನ್​ನ ಭೇಟಿ ಆಗಿ, ಅವರನ್ನು ತನ್ನ ಸಿನಿಮಾದ ಟ್ರೈಲರ್​ನಿಂದ ಮೆಚ್ಚಿಸಿರುವುದು ಇದಕ್ಕೆ ಸಾಕ್ಷಿ. ಪ್ರಾಜೆಕ್ಟ್ ಕೆ ಚಿತ್ರದ ಶೂಟಿಂಗ್ ವೇಳೆ ಬಿದ್ದು, ರಿಬ್ ಕಟ್ ಆಗಿದ್ರೂ ಸಹ ತಾವೇ ಟ್ರೈಲರ್ ಲಾಂಚ್ ಮಾಡಿದ್ದು, ಅಮಿತಾಬ್​ಗಿದ್ದ ಸಿನಿಮಾ ಪ್ಯಾಷನ್​ ಎಂಥದ್ದು ಅನ್ನೋದನ್ನು ಎತ್ತಿ ತೋರಿಸುತ್ತದೆ.

ಮಾ.17ಕ್ಕೆ ವಿಶ್ವದಾದ್ಯಂತ ತೆರೆಗೆ

ಕಬ್ಜ ಚಿತ್ರದ ಡಬ್ಬಿಂಗ್ ಕಾರ್ಯಗಳು ಭರದಿಂದ ಸಾಗಿದೆ. ಉಪೇಂದ್ರ ಹಾಗೂ ಶಿವರಾಜ್​ಕುಮಾರ್ ಇಬ್ಬರೂ ಆಕಾಶ್ ಸ್ಟುಡಿಯೋದಲ್ಲಿ ಕಬ್ಜ ಡೈಲಾಗ್ಸ್​ನ ನೀರು ಕುಡಿದಷ್ಟೇ ಸಲೀಸಾಗಿ ಡೆಲಿವರಿ ಮಾಡಿದ್ದಾರೆ. ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಹೀಗೆ ಪಂಚಭಾಷಾ ಚಿತ್ರವಾಗಿ ಇದೇ ಮಾರ್ಚ್​ 17ಕ್ಕೆ ವಿಶ್ವದಾದ್ಯಂತ ಬಿಗ್​ಸ್ಕ್ರೀನ್​ಗೆ ಕಬ್ಜ ಲಗ್ಗೆ ಇಡಲಿದೆ.

ಒಟ್ನಲ್ಲಿ, ಕಬ್ಜ ಟ್ರೈಲರ್​​ನಲ್ಲಿರೋ ಧಮ್, ರಿಧಮ್ ನೋಡ್ತಿದ್ರೆ ಬಾಕ್ಸ್ ಆಫೀಸ್ ಬ್ಯಾಂಗ್ ಆಗೋದು ಪಕ್ಕಾ ಅನಿಸುತ್ತೆ. ಸಿನಿಪಂಡಿತರ ಪ್ರಕಾರ ಕಬ್ಜ 1,000 ಕೋಟಿ ಕೊಳ್ಳೆ ಹೊಡೆಯುತ್ತೆ ಅನ್ನೋದು ಸದ್ಯಸ ಲೆಕ್ಕಾಚಾರ. ಚಂದ್ರು ಅವರ ಈ ಸಾಧನೆ ನಿಜಕ್ಕೂ ಅನನ್ಯ. ಇದು ಕೇವಲ ಟ್ರೈಲರ್ ಅಷ್ಟೇ. ಪಿಕ್ಚರ್ ಅಭಿ ಬಾಕಿ ಹೈ ಎನ್ನುವುದು ಸ್ಯಾಂಡಲ್ ವುಡ್ ಪಡಸಾಲೆಯ ನಯಾ ಕಬರ್.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ   

RELATED ARTICLES

Related Articles

TRENDING ARTICLES