Thursday, May 9, 2024

ನಾನು ಕೂಡ ಪ್ರಜ್ವಲ್ ವಿಡಿಯೋ ನೋಡಿದೆ : ಡಿ.ಕೆ. ಶಿವಕುಮಾರ್

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಕಾಮ ಪುರಾಣ ಕುರಿತು ಪವರ್ ಟಿವಿ ಪ್ರಸಾರ ಮಾಡುತ್ತಿರುವ ‘ದಾರಿ ತಪ್ಪಿದ ಮೊಮ್ಮಗ’ ಎಪಿಸೋಡ್​ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗೂ ಆ ಕ್ಲಿಪ್ಪಿಂಗ್ಸ್ ಎರಡ್ಮೂರು ಸಲ ಕಳಿಸಿದ್ರು. ನಾನು ಕೂಡ ಅದನ್ನು ನೋಡಿದೆ. ಸಂತ್ರಸ್ತೆಯರ ದೂರಿನ ಬಗ್ಗೆ ತಿಳಿದುಕೊಂಡು ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಪೆನ್​ಡ್ರೈವ್ ಬಗ್ಗೆ ಕುಮಾರಣ್ಣಗೆ ಗೊತ್ತು‌. ಜೇಬಲ್ಲಿ ಇಟ್ಟುಕೊಂಡಿದ್ದು ತೋರಿಸ್ತಿದ್ರಲ್ಲಾ ಅವರು. ಈಗ ನಂಗೆ ಗೊತ್ತಾಯ್ತು, ಆ ಪೆನ್​ಡ್ರೈವ್ ಬಗ್ಗೆ. ಅವನು ನಾಯಕ ಅಲ್ಲ, ಎನ್​ಡಿಎ ಸಂಸದ. ಫಸ್ಟ್ ಆರ್. ಅಶೋಕ್, ಕುಮಾರಣ್ಣ ಉತ್ತರ ಕೊಡಬೇಕು. ಅಶ್ವತ್ಥ ನಾರಾಯಣ್ ಗಂಡಸ್ತನ ಬಗ್ಗೆ ಮಾತಾಡ್ತಿದ್ರಲ್ವಾ? ಶೋಭಕ್ಕ ಏನು ಹೇಳ್ತಾರೆ ಈ ಬಗ್ಗೆ? ಎಂದು ಪ್ರಶ್ನೆ ಮಾಡಿದ್ದಾರೆ.

ನನ್ನ ನುಡಿಮುತ್ತು ಆಮೇಲೆ ಬರುತ್ತೆ

ಮಹಿಳೆಯರ ಮಾನ ಹರಣ ಮಾಡಿದವರು ಯಾರು..? ಕುಮಾರಸ್ವಾಮಿ ನನ್ನ ಹೆಸರು ಹೇಳಿ ಮಾತನಾಡಲಿ. ನನ್ನ ಪುರಾಣ, ನನ್ನ ನುಡಿಮುತ್ತು ಆಮೇಲೆ ಬರುತ್ತೆ. ಹೆಣ್ಣು ಮಕ್ಕಳ ಮಾನ ಹರಣ ಆಯ್ತು. ಅವ್ರು ಸಮರ್ಥನೆ ಮಾಡಿಕೊಳ್ತಿದ್ದಾರಾ? ಸಹೋದರನ ಪುತ್ರನ ಈ ಕೃತ್ಯದ ಬಗ್ಗೆ ಏನು ಹೇಳ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳಿಗೆ ಡಿ.ಕೆ. ಶಿವಕುಮಾರ್ ಪ್ರಶ್ನೆ

ಮಹಿಳಾ ಆಯೋಗದ ಅಧ್ಯಕ್ಷರು ಪೊಲೀಸ್ ಇಲಾಖೆ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದಿದ್ದಾರೆ. ಹಾಸನ ಸಂಸದನ ವಿರುದ್ದ ತನಿಖೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಬೇಕು. ಇಂಥ ದೊಡ್ಡ ದೊಡ್ಡ ವಿಚಾರಗಳನ್ನ ಮುಚ್ಚಿಟ್ರೆ ನಿಮಗೂ ಶೋಭೆ ತರಲ್ಲ. ನೀವು ಯಾಕೆ ಮೌನವಾಗಿದ್ದೀರಿ ಎಂದು ಮಾಧ್ಯಮಗಳಿಗೆ ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES