Monday, May 20, 2024

ಪಿಜಿ ಮೇಲಿಂದ ಹಾರಿ ಆತ್ಮಹತ್ಯೆಗೆ ಶರಣಾದ ಯುವಕ!

ಬೆಂಗಳೂರು: ಪಿಜಿ ಮೇಲಿಂದ ಬಿದ್ದು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವೈಟ್​ ಫೀಲ್ಡ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗುಲ್ಬರ್ಗ ಮೂಲದ 28 ವರ್ಷ ವಯಸ್ಸಿನ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಲ್ಬರ್ಗದಿಂದ ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದಿದ್ದ ಯುವಕ ಬೆಂಗಳೂರಿನ ಅಂಬೇಡ್ಕರ್​ ನಗರದಲ್ಲಿ ಪಿಜಿಯಲ್ಲಿ ತಂಗಿದ್ದ. ಕೆಲಸಕ್ಕಾಗಿ ಎಲ್ಲಾ ಕಡೆ ಪ್ರಯತ್ನಿಸಿದ್ದ. ಆದರೇ, ಯಾವುದೇ ಉತ್ತರ ಸಿಕ್ಕಿರಲಿಲ್ಲ ಇದರಿಂದ ಮನನೊಂದ ಯುವಕ ಇಂದು ತಾನು ತಂಗಿದ್ದ ಪಿಜಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: KSRTC ಬಸ್​ ಮತ್ತು ಮೊಪೆಡ್​ ನಡುವೆ ಅಪಘಾತ: ಮೊಪೆಡ್​ ಚಾಲಕನಿಗೆ ಗಂಭೀರ ಗಾಯ

ಘಟನಾ ಸ್ಥಳಕ್ಕೆ ವೈಟ್​ ಫೀಲ್ಡ್​ ಪೊಲೀಸರು ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES