Monday, May 20, 2024

ಹಾಸನ ಪ್ರಕರಣದಲ್ಲಿ ತಪ್ಪು ಸಾಬೀತಾದ್ರೆ ಗಲ್ಲಿಗೇರಿಸಿ : ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು : ಹಾಸನ ಪ್ರಕರಣದಲ್ಲಿ ತಪ್ಪು ಸಾಬೀತಾದ್ರೆ ತಪ್ಪಿತಸ್ಥರನ್ನು ಗಲ್ಲಿಗೇರಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಡಿವೈಡ್ ಆಗಿದ್ದೇವೆ. ವ್ಯವಹಾರ ಬೇರೆ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಕುಟುಂಬ ಅಂತ ಜನ ಹೇಳ್ತಿದ್ದಾರೆ. ಕಾನೂನು ಬಾಹಿರ ಚಟುವಟಿಕೆ ಇಟ್ಟುಕೊಳ್ಳಿ ಅಂತ ತಂದೆ ತಾಯಿ ಹೇಳುತ್ತಾರಾ? ಆ ಡ್ರೈವರ್ ನನ್ನ ಬಳಿ ಬಂದಿದ್ನಾ ಬಂದು‌ ನನ್ನ ಬಳಿ ಹೇಳಿದ್ರೆ ಕ್ರಮ ತಗೆದುಕೊಳ್ಳುತ್ತಿದ್ದೆ. ಮೇಟಿದು ಬಂತಲ್ವಾ? ಸಿಎಂ ಸಿದ್ದರಾಮಯ್ಯ ಕ್ಷಮೆ ಕೋರಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಪೆನ್​ಡ್ರೈವ್ ಇರೋದು ನನ್ನ ಹತ್ತಿರ

ಕಾರ್ತಿಕ್ ಗೌಡ ಯಾರ ಜೊತೆಯಲ್ಲಿ ಶ್ರೇಯಲ್ ಪಟೇಲ್ ಮನೆಗೆ ಹೋದ? ಬೆಂಗಳೂರಿಗೆ ಬಂದಾಗ ಯಾರ ಮನೆಗೆ ಹೋದ? ಇದೆಲ್ಲಾ ಹೊರಗೆ ಬರಬೇಕಾದ್ರೆ ಸ್ವತಂತ್ರ ತನಿಖೆ ಆಗಬೇಕು. ನಾನು ಇಂತಹ ಪೆನ್​ಡ್ರೈವ್ ಇಟ್ಟುಕೊಂಡಿಲ್ಲ. ಸ್ಪೀಕರ್‌ಗೆ, ಸಿಎಂಗೆ, ಸರ್ಕಾರಕ್ಕೆ ಕ್ರಮ ತೆಗೆದುಕೊಳ್ಳೊದಾದ್ರೆ ಕೊಡ್ತಿನಿ ಅಂದೆ. ಸಿಎಸ್​ಆರ್ ಅಂತ ಸಿಎಂ ಮಗ ಮಾತನಾಡಿದ್ರಲ್ವಾ? ಆ ತರದ ಪೆನ್​ಡ್ರೈವ್ ಇರೋದು ನನ್ನ ಹತ್ತಿರ. ಈಗಲೂ ಪೆನ್​ಡ್ರೈವ್ ಇದೆ. ನಿಮಗೆ ತಾಕತ್ತು‌ ಇದೆಯಾ ತನಿಖೆ ನಡೆಸಲು? ಎಂದು ವಾಗ್ದಾಳಿ ನಡೆಸಿದ್ದಾರೆ.

ಪಿಪಿ‌ ಯಾಕೆ ರಾಜೀನಾಮೆ ಕೊಟ್ಟ?

ಸಚಿವ ಕೃಷ್ಣಬೈರೇಗೌಡ ನನ್ನ ಮೇಲೆ ಏನು ಚಾರ್ಜ್ ಮಾಡಿದ್ದಾರೆ, ಅದಕ್ಕೆ ನಾನು ಉತ್ತರ ಕೊಡುತ್ತಿದ್ದೇನೆ. ನಾನು ದಾರಿ ತಪ್ಪಿಸುತ್ತಿದ್ದೆನೆ ಎಂದಿದ್ದಾರೆ. ಸಂತ್ರಸ್ತರಿಗೆ ನ್ಯಾಯ ಹರಣ ಮಾಡಿದ್ದೇವೆ ಅಂತ ಹೇಳಿದ್ದಾರೆ. ಸಂತ್ರಸ್ತರಿಗೆ ಎಷ್ಟು ಹಣ ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಮಹಿಳೆ ಹೋಗಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಪೊಲೀಸರು‌ ಒತ್ತಡ ಹಾಕ್ತಿದ್ದಾರೆ ಎಂದು ದೂರು ನೀಡಿದ್ದಾರೆ. ನೀವು ಹೇಳಿಕೆ ಕೊಡದಿದ್ದರೇ ಪ್ರಾಸ್ಟಿಟ್ಯೂಟ್ ಅಂತ ನಿಮ್ಮ ಮೇಲೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ನೀವು ಮಾಡುತ್ತಿರೋದು ತನಿಖೆನಾ ಏನು?ಪಿಪಿ‌ ಯಾಕೆ ರಾಜೀನಾಮೆ ಕೊಟ್ಟ? ಯಾಕೆ ಚೆಂಜ್ ಮಾಡಿದ್ರಿ? ಎಂದು ಹೆಚ್​.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES