Monday, May 20, 2024

ಸಂತ್ರಸ್ತ ಮಹಿಳೆಯರಿಗೆ ಆಮೀಷ ಹಾಗೂ ಬೆದರಿಕೆ ಹಾಕಲಾಗಿದೆ : ಹೆಚ್.ಕೆ. ಪಾಟೀಲ್

ಗದಗ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯರಿಗೆ ಆಮೀಷ ಹಾಗೂ ಬೆದರಿಕೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಹೆಚ್.ಕೆ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಗದಗದಲ್ಲಿ ಮಾತನಾಡಿದ ಅವರು, ಸಾಕ್ಷಿಗಳಿಗೆ (ಸಂತ್ರಸ್ತ ಮಹಿಳೆ) ಆಮಿಷಗಳಿಗೆ ಒಳಪಡಿಸ್ತಿರೋದು ಹಾಗೂ ಬೆದರಿಕೆ ಹಾಕಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಹೇಳಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಸಂಬಂಧ ಹಲವು ಪ್ರಕರಣ ದಾಖಲಾಗಿದೆ. ಈ ಬಗ್ಗೆ ಎಸ್​ಐಟಿ ತನಿಖೆ ಮುಂದುವರೆದಿದೆ. ಈ ಪ್ರಕರಣ ವಿಚಾರಣೆ ಮಾಡುತ್ತಿರುವ ನ್ಯಾಯಾಲಯಗಳು ಸಿವಿಲ್ ಕೋರ್ಟ್​ ಸಂಕೀರ್ಣದಲ್ಲಿ ಕಾರ್ಯ ನಿರ್ವಹಿಸ್ತಿವೆ. ನೊಂದ ಮಹಿಳೆಯರ, ಸಾಕ್ಷಿ ದಾರರ ಗೌಪ್ಯತೆ ಕಾಪಾಡೋದು ಕಷ್ಟಕರವಾಗತ್ತದೆ ಎಂದು ತಿಳಿಸಿದ್ದಾರೆ.

ತನಿಖೆ ಸಂದರ್ಭದಲ್ಲಿ ನೊಂದ ಮಹಿಳೆಯರ, ಸಾಕ್ಷಿದಾರರ ಗೌಪ್ಯತೆ ರಕ್ಷಣೆ ಸಲುವಾಗಿ ಎರಡೂ ನ್ಯಾಯಾಲಯಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಕೋರಿದೆ. ಕೋವಿಡ್ ಸಂದರ್ಭದಲ್ಲಿ ಗುರುನಾನಕ್ ಭವನದಲ್ಲಿ ನ್ಯಾಯಾಲಯ ಸ್ಥಾಪನೆ ಮಾಡಲಾಗಿತ್ತು. 42ನೇ ACMM, 81 ಸಿಟಿ ಸಿವಿಲ್ ಸೆಶನ್ಸ್ ನ್ಯಾಯಾಲಯಯ, ಸ್ಪೆಷಲ್ ಕೋರ್ಟ್​ ಆಫೀಸರ್ಸ್ ಎಂಪಿ ಮತ್ತು MLAಗಳು ಈ ವಿಚಾರಣೆ ಬಂದ ದಿನಗಳಲ್ಲಿ ಮಾತ್ರ ಗುರುನಾನಕ್ ಭವನದಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಿಸೋ ಬಗ್ಗೆ ನಮ್ಮ ಇಲಾಖೆ ಅನುಮೋದನೆ ನೀಡಿದೆ. ಈ ಕುರಿತು ಹೈಕೋರ್ಟ್​ಗೆ ಪತ್ರ ರವಾನಿಸ್ತಿದ್ದೇವೆ ಎಂದು ಹೆಚ್​.ಕೆ. ಪಾಟೀಲ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES