Monday, May 20, 2024

ಮಗನೊಂದಿಗೆ SSLC ಪರೀಕ್ಷೆ ಬರೆದ ತಾಯಿ ಪಾಸ್​

ಹಾಸನ: 2023-24ನೇ ಸಾಲಿನಲ್ಲಿ ನಡೆದ ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟಣೆಗೊಂಡಿದ್ದು ಮಗನ ಜೊತೆ ತಾಯಿಯೂ ಪರೀಕ್ಷೆಯಲ್ಲಿ ಪಾಸಾಗಿರುವ ಅಪರೂಪದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಜ್ಯೋತಿ ಪಿ.ಆರ್​ ತಮ್ಮ 38ನೇ ವಯಸ್ಸಿನಲ್ಲಿ ಪುತ್ರನೊಂದಿಗೆ ಪರೀಕ್ಷೆ ಕಟ್ಟಿ ಬರೆದಿದ್ದರು. ಇಂದು SSLC ಫಲಿತಾಂಶ ಪ್ರಕಟಗೊಂಡಿದ್ದು ತೇರ್ಗಡೆಯಾಗಿದ್ದಾರೆ.

ಇದನ್ನೂ ಓದಿ: SSLC ಫಲಿತಾಂಶ ಪ್ರಕಟ: ಬಾಗಲಕೋಟೆಯ ಅಂಕಿತಾ ರಾಜ್ಯಕ್ಕೆ ಪ್ರಥಮ

ಚಿನ್ನಳ್ಳಿ ಗ್ರಾಮದ ಭುವನೇಶ್​ ಪತ್ನಿ ಜ್ಯೋತಿ ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆಯ ಸಿದ್ದಣ್ಯಯ್ಯ ಹೈಸ್ಕೂಲ್‌ನಲ್ಲಿ ಮಗ ನಿತಿನ್.ಸಿ.ಬಿ ಜೊತೆ ಎರಡನೇ ಬಾರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಇಂದು ಪ್ರಕಟಗೊಂಡಿರುವ SSLC ಫಲಿತಾಂಶದಲ್ಲಿ 625ಕ್ಕೆ 250 ಅಂಗಳನ್ನು ಪಡೆಯುವ ಮೂಲಕ ಜ್ಯೋತಿ ತೇರ್ಗಡೆಯಾಗಿದ್ದಾರೆ. ಇನ್ನು ಇವರ ಪುತ್ರ ನಿತಿನ್​ 625ಕ್ಕೆ 582 ಅಂಕಗಳನ್ನು ಪಡೆದು ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾನೆ.

ಸದ್ಯ ಮಗನೊಂದಿಗೆ ತಾಯಿಯೂ ಪಾಸಾಗಿರುವುದು ಜ್ಯೋತಿ ಕುಟುಂಬದಲ್ಲಿ ಸಂತಸ ಮನೆಮಾಡಿದೆ.

RELATED ARTICLES

Related Articles

TRENDING ARTICLES