Monday, May 20, 2024

SSLC ಫಲಿತಾಂಶ ಪ್ರಕಟ: ಬಾಗಲಕೋಟೆಯ ಅಂಕಿತಾ ರಾಜ್ಯಕ್ಕೆ ಪ್ರಥಮ

ಬೆಂಗಳೂರು: 2023-24ನೇ ಪ್ರಸಕ್ತ ಸಾಲಿನ SSLC ಪರೀಕ್ಷೆ ಫಲಿತಾಂಶವನ್ನು ಪ್ರಕಟಣೆಯಾಗಿದ್ದು. ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಬಾಗಲಕೋಟೆ ಜಿಲ್ಲೆಯ ಮುಧೋಳದ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು 625/625ಕ್ಕೆ ಅಂಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು 7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ ಸ್ಥಾನ

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ :

  • ಅಂಕಿತಾ ಬಸಪ್ಪ ಕೊನ್ನೂರು (ಬಾಗಲಕೋಟೆ) 625/625 (ಪ್ರಥಮ)
  • ಮೇದಾ ಪಿ ಶೆಟ್ಟಿ (ಬೆಂಗಳೂರು) 625ಕ್ಕೆ 624 ಅಂಕ
  • ಹರ್ಷಿತಾ ಡಿಎಂ (ಮಧುಗಿರಿ) 625ಕ್ಕೆ 624 ಅಂಕ
  • ಚಿನ್ಮಯ್ (ದಕ್ಷಿಣ ಕನ್ನಡ) 625ಕ್ಕೆ 624 ಅಂಕ
  • ಸಿದ್ದಾಂತ್ (ಚಿಕ್ಕೊಡಿ) 625ಕ್ಕೆ 624 ಅಂಕ
  • ದರ್ಶನ್ (ಶಿರಸಿ) 625ಕ್ಕೆ 624 ಅಂಕ
  • ಚಿನ್ಮಯ್ (ಶಿರಸಿ) 625ಕ್ಕೆ 624 ಅಂಕ
  • ಶ್ರೀರಾಮ್ (ಶಿರಸಿ) 625ಕ್ಕೆ 624 ಅಂಕ

ಜಿಲ್ಲಾವಾರು ಫಲಿತಾಂಶ:

ಈ ಬಾರಿ ಪ್ರಕಟಗೊಂಡ ಜಿಲ್ಲಾವಾರು ಫಲಿತಾಂಶದ ಪ್ರಕಾರ ಉಡುಪಿ ಪ್ರಥಮ ಸ್ಥಾನ ಪಡೆದಿದ್ದು, ದ್ವಿತಿಯ ಮತ್ತು ತೃತಿಯ ಸ್ಥಾನವನ್ನು ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಪಡೆದುಕೊಂಡಿದೆ.

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ 94% ಫಲಿತಾಂಶ, ದಕ್ಷಿಣ ಕನ್ನಡ 92.12%, ಶಿವಮೊಗ್ಗ 88.67%, ಕೊಡಗು 88.67%, ಉತ್ತರ ಕನ್ನಡ 86.54%, ಹಾಸನ 86.28%, ಮೈಸೂರು 85.5%, ಶಿರಸಿ 84.64%, ಬೆಂಗಳೂರು ಗ್ರಾ. 83.67%, ಚಿಕ್ಕಮಗಳೂರು 83.39%, ವಿಜಯಪುರ 79.82%, ಬೆಂಗಳೂರು ದಕ್ಷಿಣ 79%, ಬಾಗಲಕೋಟೆ 77.92%, ಬೆಂಗಳೂರು ಉತ್ತರ, 77.09%, ಹಾವೇರಿ 75.85%, ತುಮಕೂರು 75.16%, ಗದಗ 74.76%, ಚಿಕ್ಕಬಳ್ಳಾಪುರ 73.61%, ಮಂಡ್ಯ 73.59% ಕೋಲಾರ 73.57%, ಚಿತ್ರದುರ್ಗ 72.85%, ಧಾರವಾಡ 72.67%, ದಾವಣಗೆರೆ 72.49%, ಚಾಮರಾಜನಗರ 71.59%, ಚಿಕ್ಕೋಡಿ 69.82%, ರಾಮನಗರ 69.53%, ವಿಜಯನಗರ 65.61%, ಬಳ್ಳಾರಿ 64.99%, ಬೆಳಗಾವಿ 64.93%, ಮಧುಗಿರಿ 62.44%, ರಾಯಚೂರು 61.2%, ಕೊಪ್ಪಳ 61.16%, ಬೀದರ್ 57.52%, ಕಲಬುರಗಿ 53.04%, SSLC ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆ 50.59% ಫಲಿತಾಂಶ ಬಂದಿದೆ.

RELATED ARTICLES

Related Articles

TRENDING ARTICLES