Monday, May 20, 2024

ಪ್ರಜ್ವಲ್​ ರೇವಣ್ಣ ಪ್ರಕರಣ: ಜಿ.ದೇವರಾಜೇಗೌಡ ಹಾಗೂ ಕಾರ್ತಿಕ್​ಗೆ SIT ನೋಟಿಸ್

ಬೆಂಗಳೂರು: ಕಿಡ್ನಾಪ್ ಕೇಸ್​ಗೆ ಸಂಬಂಧಪಟ್ಟಂತೆ ಮಾಜಿ ಸಚಿವ ಹೆಚ್​.ಡಿ ರೇವಣ್ಣನ ನ್ಯಾಯಾಂಗ ಬಂಧನ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜ್ ಗೌಡ ಹಾಗೂ ಕಾರ್ತಿಕ್​ಗೆ ವಿಚಾರಣೆಗೆ ಹಾಜರಾಗಲು ಎಸ್ಐಟಿ ನೋಟಿಸ್ ನೀಡಿದ್ದು ಒಂದೆಡೆ ಆದರೆ, ಪ್ರಕರಣ ತನಿಖೆಯಲ್ಲಿ ಎಸ್​ಐಟಿ ಅಧಿಕಾರಿಗಳು ಮತ್ತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ನಾಪತ್ತೆ ಪ್ರಕರಣದ ಆರೋಪಿಗಳಾದ ಶಾಸಕ ಹೆಚ್​.ಡಿ ರೇವಣ್ಣ ಹಾಗೂ ಸತೀಶ್ ಬಾಬು ನ್ಯಾಯಾಂಗ ಬಂಧಕ್ಕೆ ಒಳಪಡೆಸಿದ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಪ್ರಕರಣದ ಇಂಚು ಇಂಚು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅದರಂತೆ ಕಿಡ್ನಾಪ್ ಕೇಸ್​ಗೆ ಸಹಕಾರ ನೀಡಿದ್ದರು ಅನ್ನೋ ಮಾಹಿತಿ ಮೇರೆಗೆ ಕೆಆರ್ ನಗರದಲ್ಲಿ ಮತ್ತೆ ನಾಲ್ವಾರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಮುಂದಾಗಿದ್ದಾರೆ.

ಪ್ರಜ್ವಲ್ ಪೆನ್​ಡ್ರೈವ್ ವಿಚಾರಣೆ ಸಂತ್ರಸ್ತೆ ಕಿಡ್ನಾಪ್ ಪ್ರಕರಣದಲ್ಲಿ ಮತ್ತೆ ನಾಲ್ವರನ್ನ ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತ ಮಹಿಳೆ ಕಿಡ್ನಾಪ್ ಪ್ರಕಣದಲ್ಲಿ ರೇವಣ್ಣ ಹಾಗೂ ರೇವಣ್ಣ ಆಪ್ತ ಸತೀಶ್ ಬಾಬು ಬಂಧನವಾಗಿ ಇಗಾಗ್ಲೆ ಜೈಲು ಸೇರಿದ್ದಾರೆ. ಕಿಡ್ನಾಪ್ ಪ್ರಕರಣದ ಸಂತ್ರಸ್ತತೆಯನ್ನ ಈಗಾಗಲೇ ವಿಚಾರಣೆ ಮಾಡಿ ಸ್ಥಳ ಮಹಜರು ಕೂಡ ಮಾಡಿದ್ದಾರೆ. ಬಳಿಕ ಪ್ರಕರಣ ಜಾಡು ಹಿಡಿದ ಹೊರಟಿದ್ದ ಎಸ್ಐಟಿ ಮತ್ತೆ ನಾಲ್ವರನ್ನು ವಶಕ್ಕೆ ಪಡೆದಿದ್ದೆ. ಕೆ.ಆರ್​ ನಗರದ ಜೆಡಿಎಸ್ ಮುಖಂಡರಾದ ಸುಜಯ್ ಹೆಬ್ಬಾಳು, ಕೀರ್ತಿ ಹೊಸೂರು, ಮನು ಮತ್ತು ತಿಮ್ಮಪ್ಪ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: HDK ಹಿಟ್‌ ಅಂಡ್‌ ರನ್‌ ಗಿರಾಕಿ ಅನ್ನೋದು ಗೊತ್ತಿದೆ: ಡಿಕೆ ಶಿವಕುಮಾರ್​

ಕಿಡ್ಯ್ನಾಪ್​ ಪ್ರಕರಣದ ಆರೋಪಿ ಎ2 ಸತೀಶ್ ಬಾಬು ಜೊತೆಗೆ ಸಂಪರ್ಕದಲ್ಲಿ ಇದ್ದರು ಅನ್ನೊ ಕಾರಣ ಹಾಗೂ ಕಿಡ್ಯ್ನಾಪ್​ಗೆ ಸಹಾಯ ಮಾಡಿದ್ದಾರೆ ಅನ್ನೋ ಮಾಹಿತಿ ಮೇರೆಗೆ ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಸುಜಯ್ ಹೆಬ್ಬಾಳು, ಕೀರ್ತಿ ಹೊಸೂರು ಕೆ.ಆರ್ ನಗರ ತಾಲೋಕಿನವರಾಗಿದ್ರೆ, ತಿಮ್ಮಪ್ಪ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಸದ್ಯ ನಾಲ್ವರನ್ನು ವಶಕ್ಕೆ ಪಡೆದು ಎಸ್​ಐಟಿ ಅಧಿಕಾರಿಗಳ ತೀವ್ರ ವಿಚಾರಣೆ ನಡೆಸುತ್ತಿದೆ.

ಇನ್ನೂ ಮತ್ತೊಂದು ಕಡೆ ವಕೀಲ ದೇವರಾಜೇಗೌಡ, ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಗೆ ವಿಚಾರಣೆಗೆ ಬರುವಂತೆ ಎಸ್ಐಟಿ ಮತ್ತೊಮ್ಮೆ ನೋಟಿಸ್ ನೀಡಿದೆ. ಪೆಂಡ್ರೈವ್ ಕೇಸ್ ನಲ್ಲಿ ದೇವರಾಜೇಗೌಡನ ಸುತ್ತವೇ ಅನುಮಾನ ಹುಟ್ಟಿಕೊಳ್ಳುತ್ತಿವೆ. ಇತ್ತೀಚೆಗೆ ಬಹಿರಂಗವಾಗಿ ಒಂದಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿ, ಮಾಧ್ಯಮಗಳ ಮುಂದೆ ಒಂದಷ್ಟು ಗಂಭೀರ ಆರೋಪಗಳನ್ನು ದೇವರಾಜೇಗೌಡ ಮಾಡಿದರು.

ಈ ಬೆನ್ನಲ್ಲೇ ಎಸ್ಐಟಿಯಿಂದ ನೊಟೀಸ್ ನೀಡಿದ್ದು, ನಿಮ್ಮ ಬಳಿ ಇರುವ ಎವಿಡೆನ್ಸ್, ಫೋಟೋಸ್, ಆಡಿಯೋ ತರಲು ದೇವರಾಜೇಗೌಡಗೆ ಸೂಚಿಸಿದೆ. ಮತ್ತೊಂದು ಕಡೆ ನಾಪತ್ತೆಯಾಗಿರುವ ಕಾರ್ತಿಕ್ ಗೂ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಒಟ್ಟಾರೆಯಾಗಿ ಪೆನ್ಡ್ರೈವ್ ಪ್ರಕರಣ ಮತ್ತೊಂದು ಹಂತ ತಲುಪಿದ್ದು, ಪ್ರಜ್ವಲ್ ಬಂದ ನಂತರವೇ ಪ್ರಕರಣ ಮತ್ತೊಂದು ಹಂತ ತಲುಪಲಿದೆ.

RELATED ARTICLES

Related Articles

TRENDING ARTICLES