Monday, May 20, 2024

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾರನ್ನು ಶೀಘ್ರ ಭೇಟಿಯಾಗುತ್ತೇನೆ : ಡಿಕೆಶಿ

ಬೆಂಗಳೂರು : 2023-24ನೇ ಸಾಲಿನ SSLC ಪರೀಕ್ಷೆ ಫಲಿತಾಂಶವನ್ನು ಪ್ರಕಟಣೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳದ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು 625(625) ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಅಂಕಿತಾ ಸಾಧನೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಆದಷ್ಟು ಬೇಗ ವಿದ್ಯಾರ್ಥಿನಿ ಅಂಕಿತಾ ಅವರನ್ನು ಭೇಟಿಯಾಗುತ್ತೇನೆ ಎಂದು ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

SSLC ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಬಾಗಲಕೋಟೆಯ ಮುಧೋಳ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಅವರಿಗೆ, ಆಕೆಯ ಶಿಕ್ಷಕರಿಗೆ ನನ್ನ ಹೃದಯಪೂರ್ವಕ ಶುಭಾಶಯಗಳು. ಸರ್ಕಾರಿ ಶಾಲೆ ಮಕ್ಕಳು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಅಂಕಿತಾ ಅವರು ನಿರೂಪಿಸಿದ್ದಾರೆ.‌ ನೀವು ಹಾಗೂ ನಿಮ್ಮ ಶಾಲೆ ಬಗ್ಗೆ ಇಡೀ ಕರ್ನಾಟಕವೇ ಹೆಮ್ಮೆಪಡುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಶ್ಲಾಘಿಸಿದ್ದಾರೆ.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು

  • ಅಂಕಿತಾ ಬಸಪ್ಪ ಕೊನ್ನೂರು (ಬಾಗಲಕೋಟೆ) : 625/625 (ಪ್ರಥಮ)
  • ಮೇದಾ ಪಿ ಶೆಟ್ಟಿ (ಬೆಂಗಳೂರು) : 624
  • ಹರ್ಷಿತಾ ಡಿಎಂ (ಮಧುಗಿರಿ) : 624
  • ಚಿನ್ಮಯ್ (ದಕ್ಷಿಣ ಕನ್ನಡ) : 624
  • ಸಿದ್ದಾಂತ್ (ಚಿಕ್ಕೊಡಿ) : 624
  • ದರ್ಶನ್ (ಶಿರಸಿ) : 624
  • ಚಿನ್ಮಯ್ (ಶಿರಸಿ) : 624
  • ಶ್ರೀರಾಮ್ (ಶಿರಸಿ) : 624

 

RELATED ARTICLES

Related Articles

TRENDING ARTICLES