Monday, May 20, 2024

RCBಗೆ ಪಂಜಾಬ್ ಸವಾಲ್ : ಇಂದು ಸೋತವರು ನೇರ ಮನೆಗೆ, RCB ಗೆಲ್ಲುತ್ತಾ?

ಬೆಂಗಳೂರು : ಐಪಿಎಲ್​ನಲ್ಲಿ ಇಂದು ಮಾಡು ಇಲ್ಲವೇ ಮಡಿ ಪಂದ್ಯ ನಡೆಯಲಿದೆ. ಹ್ಯಾಟ್ರಿಕ್ ಪಂದ್ಯ ಗೆದ್ದು ಬೀಗುತ್ತಿರುವ ಆರ್​ಸಿಬಿ ತಂಡ ಪಂಜಾಬ್​ ಕಿಂಗ್ಸ್​ ವಿರುದ್ಧ ಸೆಣಸಲಿದೆ.

ಧರ್ಮಶಾಲ ಮೈದಾನ ಐಪಿಎಲ್​ನ 58ನೇ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಇಂದಿನ ಪಂದ್ಯ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್​ ಭವಿಷ್ಯವನ್ನು ನಿರ್ಧರಿಸಲಿದೆ. ಇಂದು ಸೋತವರು ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈವರೆಗೆ ಆಡಿರುವ 11 ಪಂದ್ಯಗಳಲ್ಲಿ 4 ಗೆಲುವು ಹಾಗೂ 7 ಪಂದ್ಯಗಳಲ್ಲಿ ಸೋಲು ಕಂಡಿದೆ. ಪಂಜಾಬ್ ಕಿಂಗ್ಸ್ ಸಹ 11 ಪಂದ್ಯಗಳನ್ನು ಆಡಿದ್ದು 4 ಗೆಲುವು ಹಾಗೂ 7 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆರ್​ಸಿಬಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರೆ, ಪಂಜಾಬ್ 8ನೇ ಸ್ಥಾನದಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿಲ್ ಜಾಕ್ಸ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿ.ಕೀ), ಕರ್ಣ್ ಶರ್ಮಾ, ಸ್ವಪ್ನಿಲ್ ಸಿಂಗ್, ಯಶ್ ದಯಾಳ್, ವಿಜಯ್ ಕುಮಾರ್ ವೈಶಾಖ್, ಮೊಹಮ್ಮದ್ ಸಿರಾಜ್.

ಆರ್​ಸಿಬಿ ಇಂಪ್ಯಾಕ್ಟ್​ ಪ್ಲೇಯರ್ : ರಜತ್ ಪಾಟಿದಾರ್

ಪಂಜಾಬ್ ಕಿಂಗ್ಸ್

ಜಾನಿ ಬೈರ್‌ಸ್ಟೋವ್, ರಿಲೀ ರೊಸೊವ್, ಶಶಾಂಕ್ ಸಿಂಗ್, ಸ್ಯಾಮ್ ಕರ್ರಾನ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್

ಪಂಜಾಬ್ ಇಂಪ್ಯಾಕ್ಟ್ ಪ್ಲೇಯರ್ : ಪ್ರಭಾಸಿಮ್ರಾನ್ ಸಿಂಗ್

RELATED ARTICLES

Related Articles

TRENDING ARTICLES