Monday, May 20, 2024

ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ : 8 ಜಿಲ್ಲೆಗಳಿಗೆ ಬೆಸ್ಕಾಂನಿಂದ ವಾಟ್ಸಾಪ್ ನಂಬರ್ ಬಿಡುಗಡೆ

ಬೆಂಗಳೂರು : ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ಎಂಟು ಜಿಲ್ಲೆಗಳಿಗೆ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಿದೆ.

ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಯ ಜನರು ಸಮಸ್ಯೆಯನ್ನು ಫೋಟೋ ಸಮೇತ ವಾಟ್ಸಾಪ್ ಮಾಡಿದರೆ ಕೂಡಲೇ ಪರಿಹಾರ ಒದಗಿಸಲಾಗುತ್ತದೆ. ಎಂಟು ಜಿಲ್ಲೆಗಳಿಗೂ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಿದ್ದು, ವಾಟ್ಸಾಪ್ ನಂಬರ್‌ನಲ್ಲಿ ದೂರು ಸಲ್ಲಿಸಲು ಬೆಸ್ಕಾಂ ಸೂಚನೆ ನೀಡಿದೆ.

ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ, ಬೆಂಗಳೂರು ಪಶ್ಚಿಮ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಿದೆ.

ಮಳೆಗಾಲದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ತನ್ನ ವ್ಯಾಪ್ತಿಯ ಎಂಟೂ ಜಿಲ್ಲೆಗಳಲ್ಲಿ ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿಗೆ ಪರ್ಯಾಯವಾಗಿ ಎಂಟು ಪ್ರತ್ಯೇಕ ವಾಟ್ಸಾಪ್ ಸಂಖ್ಯೆಗಳನ್ನು ನೀಡಿದೆ. ಈ ಮೂಲಕ ವಿದ್ಯುತ್ ಸಮಸ್ಯೆ ಬಗ್ಗೆ ಗ್ರಾಹಕರು ತಮ್ಮ ಪ್ರದೇಶಕ್ಕೆ ಅನುಗುಣವಾಗಿ ದೂರು ಸಲ್ಲಿಸಬಹುದು.

  • ಬೆಂಗಳೂರು ಪಶ್ಚಿಮ : 8277884012
  • ಬೆಂಗಳೂರು ಪೂರ್ವ : 8277884013
  • ಬೆಂಗಳೂರು ಉತ್ತರ : 8277884014
  • ಬೆಂಗಳೂರು ದಕ್ಷಿಣ : 8277884017
  • ಕೋಲಾರ : 8277884015
  • ಚಿಕ್ಕಬಳ್ಳಾಪುರ : 8277884016
  • ಬಿಆರ್​ಸಿ : 8277884017
  • ರಾಮನಗರ : 8277884018
  • ತುಮಕೂರು : 8277884019
  • ಚಿತ್ರದುರ್ಗ : 8277884020
  • ದಾವಣಗೆರೆ : 8277884020

RELATED ARTICLES

Related Articles

TRENDING ARTICLES