Monday, May 20, 2024

ದೇವರಾಜೇಗೌಡ ವಿರುದ್ದ ಶಿಸ್ತುಕ್ರಮಕ್ಕೆ ಆಗ್ರಹಿಸಿ ಬಾರ್​ ಕೌನ್ಸಿಲ್​ಗೆ ಕೆಪಿಸಿಸಿ ಕಾನೂನು ಘಟಕ ದೂರು

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್​ ರೇವಣ್ಣ ರಾಸಲೀಲೆ ವೀಡಿಯೋಗಳ ಪೆನ್​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ವಿರುದ್ದ ಶಿಸ್ತುಕ್ರಮಕ್ಕೆ ಆಗ್ರಹಿಸಿ ಬಾರ್​ ಕೌನ್ಸಿಲ್​ ಗೆ ಕಾಂಗ್ರೆಸ್​ ಕಾನೂನು ಘಟಕದಿಂದ ದೂರು ದಾಖಲಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಲೀಗಲ್​ ಸೆಲ್​ ಮುಖ್ಯಸ್ಥ ವಕೀಲ ಸೂರ್ಯಮುಕುಂದರಾಜ್​ , ವಕೀಲ ದೇವರಾಜೇಗೌಡ ಬಳಿಗೆ ಬಂದ ಕಕ್ಷೀದಾರ ಕಾರ್ತಿಕ್​ ಕೊಟ್ಟ ಪೆನ್​ಡ್ರೈವ್​ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ, ವಕಾಲತ್ತು ಕೂಡ ಹಾಕಿಲ್ಲ, 6 ತಿಂಗಳ ಹಿಂದೆ ಪ್ರೆಸ್ ಮಿಟ್ ಮಾಡಿ ಈ ಬಗ್ಗೆ ಮಾತಾಡಿದ್ರು, ಇತ್ತೀಚೆಗೆ ಕಾರ್ತಿಕ್ ಜೊತೆ ಇದ್ದ ಸಿಸಿಟಿವಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: HDK ಹಿಟ್‌ ಅಂಡ್‌ ರನ್‌ ಗಿರಾಕಿ ಅನ್ನೋದು ಗೊತ್ತಿದೆ: ಡಿಕೆ ಶಿವಕುಮಾರ್​

ಕಕ್ಷಿದಾರ ಕೊಟ್ಟ ಮಾಹಿತಿ ರಿಲೀಸ್ ಮಾಡೋದು ದುರ್ನಡತೆ, ಈ ಬಗ್ಗೆ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸದೆ, ಪೊಲೀಸರಿಗೆ ಹೇಳದೇ ಪಕ್ಷದ ಮುಖಂಡರಿಗೆ ಮಾಹಿತಿ ಕೊಟ್ಟಿದ್ದಾರೆ. ದೇವರಾಜೇಗೌಡ ಗೆ IPC, CRPC ಅಂದ್ರೆ ಏನು ಅಂತ ಗೊತ್ತಿಲ್ವಾ? ಅವತ್ತೇ ಪ್ರಜ್ವಲ್ ತಂದಿದ್ದ ಸ್ಟೇ ವೆಕೆಟ್ ಮಾಡಿ ಅಂತ ನ್ಯಾಯಾಲಯಕ್ಕೆ ಹಾಕಬಹುದಾಗಿತ್ತು. ಕಾರ್ತಿಕ್ ಕರೆದುಕೊಂಡು ದೂರು ಕೊಡಿಸಬಹುದಿತ್ತು. ಆದರೇ, ಕಕ್ಷಿದಾರರ ಅನುಮತಿ ತೆಗೆದುಕೊಂಡು ಪ್ರಧಾನಿಗೆ ಪತ್ರ ಬರೆದಿದ್ದಾರಾ? ಎಂದು ಪ್ರಶ್ನೆ ಮಾಡಿದರು.

ಎವಿಡೆನ್ಸ್ ಆಕ್ಟ್ ಉಲ್ಲಂಘನೆ ಆಗಿದೆ. ಈ ಕುರಿತು ಬಾರ್​ ಕೌನ್ಸಿಲ್​ಗೆ ದೂರು ನೀಡಿದ್ದೇವೆ. ಬಾರ್ ಕೌನ್ಸಿಲ್ ಈ ಬಗ್ಗೆ ದೇವರಾಜೇಗೌಡಗೆ ನೋಟಿಸ್ ಕೊಡ್ತೀವಿ ಎಂದು ಹೇಳಿದ್ದಾರೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES