Wednesday, May 1, 2024

ಬಿಟ್​ ಕಾಯಿನ್​ ಹಗರಣ: ನಟಿ ಶಿಲ್ಪಾ ಶೆಟ್ಟಿಗೆ ಸೇರಿದ 100 ಕೋಟಿ ಆಸ್ತಿ ED ವಶಕ್ಕೆ

ಮುಂಬೈ: ಬಿಟ್‌ಕಾಯಿನ್ ಹಗರಣದಲ್ಲಿ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಹೆಸರು ಕೇಳಿ ಬಂದ ಬೆನ್ನಲ್ಲಿ ಜಾರಿ ನಿರ್ದೇಶನಾಲಯ ಹೆಚ್ಚು ಕಡಿಮೆ 100 ಕೋಟಿ ರೂಪಾಯಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಇತ್ತೀಚೆಗೆ ರಾಜ್ ಕುಂದ್ರಾರನ್ನು ಅಶ್ಲೀಲ ಸಿನಿಮಾ ನಿರ್ಮಾಣ ಹಾಗೂ ವಿತರಣೆ ಕೇಸ್‌ನಲ್ಲಿ ಬಂಧಿಸಿದ್ದರು. ಈಗ ಮತ್ತೊಂದು ಪ್ರಕರಣದಲ್ಲಿ ಅವರ ಹೆಸರು ಕೇಳಿ ಬಂದಿದ್ದು, ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಬಾರೀ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಕೊಂಡಿದೆ.

ಮುಂಬೈನ ಜೂಹುನಲ್ಲಿರುವ ಫ್ಲ್ಯಾಟ್‌ನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಸದ್ಯ ಈ ಪ್ರಾಪರ್ಟಿ ಪತ್ನಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೆಸರಿನಲ್ಲಿ ಇದೆ. ಹಾಗೇ ಪೂನಾದಲ್ಲಿರುವ ಐಶಾರಾಮಿ ಬಂಗಲೆ, ರಾಜ್ ಕುಂದ್ರಾ ಹೆಸರಿನಲ್ಲಿರುವ ಶೇರ್‌ಗಳನ್ನು ಕೂಡ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ವಶಕ್ಕೆ ಪಡೆದಿದೆ.

ಇದನ್ನೂ ಓದಿ: ಸೈಕಲ್​ ಸವಾರನಿಗೆ ಕಾರು ಡಿಕ್ಕಿ: ಸೈಕಲ್​ ಸವಾರ ದಾರುಣ ಸಾವು!

ಏನಿದು ಪ್ರಕರಣ ?

ಪೊಂಜಿ ಸ್ಕೀಮ್ ಅಡಿಯಲ್ಲಿ ಹೂಡಿಕೆದಾರರಿಗೆ ಕಡಿಮೆ, ಇಲ್ಲವೇ ಯಾವುದೇ ಅಪಾಯವಿಲ್ಲದೆ ಭಾರೀ ಲಾಭದ ಭರವಸೆಯನ್ನು ನೀಡಲಾಗುತ್ತದೆ. ಇದೇ ಪ್ರಕರಣದಲ್ಲಿ ರಾಜ್‌ ಕುಂದ್ರ ಹಾಗೂ ಅವರ ಪಾರ್ಟ್ನರ್‌ಗಳು 2017ರಲ್ಲಿ 6600 ಕೋಟಿ ರೂಪಾಯಿಯನ್ನು ಬಿಟ್​ಕಾಯಿನ್ ಮೂಲಕ ಗಳಿಸಿದ್ದು, ತಿಂಗಳಿಗೆ ಶೇ. 10 ರಷ್ಟು ಪಾವತಿ ಮಾಡುವುದಾಗಿ ಜನರಿಗೆ ಆಮಿಷ ಒಡ್ಡಲಾಗಿತ್ತು ಎಂಬ ಆರೋಪವಿದೆ. ಈ ಪ್ರಕರಣವನ್ನು ಬೃಹತ್ ಬಿಟ್‌ಕಾಯಿನ್ ಹಗರಣ ಬಣ್ಣಿಸಲಾಗಿದ್ದು, ಇದರಿಂದ ರಾಜ್ ಕುಂದ್ರಾ 150 ಕೋಟಿ ರೂಪಾಯಿ ಲಾಭ ಮಾಡುತ್ತಿದ್ದಾರೆಂದು ಇಡಿ ಆರೋಪಿಸಿದೆ. ಮಹಾರಾಷ್ಟ್ರ ಹಾಗೂ ದೆಹಲಿ ಪೊಲೀಸರ ಬಳಿ ಹಲವು ದೂರುಗಳು ಇದೇ ವಿಚಾರಕ್ಕೆ ಬಂದಿದ್ದವು. ಇದನ್ನು ಆಧಾರವಾಗಿಟ್ಟುಕೊಂಡು ಇಡಿ ಅಧಿಕಾರಿಗಳು ವೆರಿಯಬಲ್ ಟೆಕ್ ಪ್ರೈವೆಟ್ ಲಿಮಿಟೆಡ್‌ನ ದಿವಂಗತ ಅಮಿತ್ ಭಾರದ್ವಾಜ್, ಅಜಯ್ ಭಾರದ್ವಾಜ್, ವಿವೇಕ್ ಭಾರದ್ವಾಜ್, ಸಿಂಪಿ ಭಾರದ್ವಾಜ್, ಮಹೇಂದ್ರ ಭಾರದ್ವಾಜ್ ಸೇರಿದಂತೆ ಹಲವರ ವಿರುದ್ಧ ತನಿಖೆ ಆರಂಭಿಸಿದ್ದರು.

ಈ ತನಿಖೆ ವೇಳೆ ಇಡಿ ಅಧಿಕಾರಿಗೆ ರಾಜ್ ಕುಂದ್ರಾ ಬಗ್ಗೆ ಮಾಹಿತಿ ಸಿಕ್ಕಿತ್ತು. ಬಿಟ್‌ಕಾಯಿನ್ ಹಗರಣದ ಪ್ರಮುಖ ಮಾಸ್ಟರ್ ಮೈಂಡ್ ಅಮಿತ್ ಭಾರದ್ವಾಜ್‌ರಿಂದ ಸುಮಾರು 285 ಬಿಟ್‌ ಕಾಯಿನ್‌ಗಳನ್ನು ರಾಜ್‌ ಕುಂದ್ರಾ ಪಡೆದಿದ್ದರು ಎಂದು ಗೊತ್ತಾಗಿದೆ. ಈ ಬಿಟ್ ಕಾಯಿನ್‌ಗಳ ಬೆಲೆ ಸುಮಾರು 150 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

RELATED ARTICLES

Related Articles

TRENDING ARTICLES