Tuesday, May 21, 2024

ಯತ್ನಾಳ್ ಶಾಸಕನಾಗಿರಲು ನಾಲಾಯಕ್ : ಈಶ್ವರ್ ಖಂಡ್ರೆ

ಬೀದರ್ : ದ್ವೇಷ ಬಿತ್ತುವ ಕೋಮುವಾದಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಶಾಸಕನಾಗಿರಲು ನಾಲಾಯಕ್ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

ಖಂಡ್ರೆ ಕುಟುಂಬ ಲಿಂಗಾಯತರಿಗೆ ಕೊಟ್ಟಿರುವ ಕೊಡುಗೆ ಏನು ಎಂದು ಶಾಸಕ ಯತ್ನಾಳ್​ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ, ತಿರುಗೇಟು ನೀಡಿದ್ದಾರೆ.

ವೀರಶೈವ ಲಿಂಗಾಯತರನ್ನು ಒಗ್ಗೂಡಿಸಿ ಸಂಘಟನೆ ಮಾಡಿದ್ದೇ ಶತಾಯುಷಿ ಭೀಮಣ್ಣ ಖಂಡ್ರೆ. ಬೆಂಗಳೂರಿನಲ್ಲಿ ಭವ್ಯ ವೀರಶೈವ ಲಿಂಗಾಯತ ಭವನ ನಿರ್ಮಿಸಿದ್ದು ಭೀಮಣ್ಣ ಖಂಡ್ರೆ ಅವರು. ಇಂದು ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ವೀರಶೈವ ಭವನ ನಿರ್ಮಾಣವಾಗಿದ್ದರೆ ಅದಕ್ಕೆ ಭೀಮಣ್ಣ ಖಂಡ್ರೆಯವರು ಕಾರಣ ಎಂದು ಹೇಳಿದ್ದಾರೆ.

ಸಮಾಜದ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ, ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುತ್ತಿರುವುದು ಮಹಾಸಭಾ. ಯತ್ನಾಳ್​ಗೆ ಇದರ ಬಗ್ಗೆ ಮಾಹಿತಿಯೂ ಇಲ್ಲ. ಇತ್ತ ಬಸವವಾದಿಯೂ ಅಲ್ಲದ, ಅತ್ತ ಹಿಂದೂ ಅಲ್ಲದ ಯತ್ನಾಳ್ ರಾತ್ರಿ ಸೆರೆ ಕುಡಿದು, ಮಾಂಸ ತಿಂದು, ಬೆಳಗ್ಗೆ ವಿಭೂತಿ ಹಚ್ಚಿಕೊಂಡು ಬರುತ್ತಾರೆ. ಇವರಿಗೆ ವೀರಶೈವ ಲಿಂಗಾಯತ ಮಹಾಸಭಾ ಬಗ್ಗೆಯಾಗಲೀ, ನಮ್ಮ ತಂದೆ ಪೂಜ್ಯ ಭೀಮಣ್ಣ ಖಂಡ್ರೆ ಅವರ ಬಗ್ಗೆಯಾಗಲೀ ಮಾತನಾಡುವ ಯಾವುದೇ ಹಕ್ಕಿಲ್ಲ ಎಂದು ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES