Saturday, July 27, 2024

ಪ್ರೇಯಸಿಯೊಂದಿಗೆ ನೇಣಿಗೆ ಶರಣಾದ ಪೊಲೀಸ್​ ಪೇದೆ

ಹುಬ್ಬಳ್ಳಿ: ಪ್ರೇಯಸಿಯೊಂದಿಗೆ ಒಂದೇ ವೇಲಿಗೆ ಕೊರಳೊಡ್ಡಿ ಪೊಲೀಸ್​ ಪೇದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಎಪಿಎಂಸಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಹೇಶ್ ಹಸರೂರು ಮತ್ತು ಲಕ್ಷ್ಮೀ ವಾಲಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಧಾರವಾಡ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್​, ಅದಾಗಲೇ ಮದುವೆಯಾಗಿದ್ದರು ಆಂಟಿ ಜೊತೆಗೆ ಲವ್​ ಆಗಿ ಆಕೆಯೊಂದಿಗೆ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇತ್ತ ಆಂಟಿಗೂ ಇದಕ್ಕೂ ಮುನ್ನ ಮದುವೆಯಾಗಿ ಗಂಡನನ್ನು ಬಿಟ್ಟು ಪೇದೆ ಮಹೇಶ್​ ನೊಂದಿಗೆ ಜೀವಿಸುತ್ತಿದ್ದಳು ಎಂದು ತಿಳಿದು ಬಂದಿದೆ.

ಇದನ್ನು ಓದಿ:  ಕಾರ್ಖಾನೆಯಲ್ಲಿ ಬಾಯ್ಲರ್​ ಸ್ಪೋಟ: ಮೂವರ ಸ್ಥಿತಿ ಚಿಂತಾಜನಕ

ಕಳೆದ ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕೊಳೆತು ನಾರುತ್ತಿರುವ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿದೆ. ಇನ್ನು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES