Saturday, July 27, 2024

ದ್ವಿತೀಯ ಪಿಯು-2 ಫಲಿತಾಂಶ ಪ್ರಕಟ

ಬೆಂಗಳೂರು: ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯೂ ಇಂದು ದ್ವಿತೀಯ ಪಿಯುಸಿ ಪರೀಕ್ಷೆ-2 ರ ಫಲಿತಾಂಶವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಿದ್ದು ಈ ಪರೀಕ್ಷೆಯಲ್ಲಿ ಒಟ್ಟಾರೆ ಫಲಿತಾಂಶ 35.25% ಬಂದಿದೆ ಎಂದು ತಿಳಿಸಿದೆ.

ಏಪ್ರಿಲ್ 29 ರಿಂದ ಮೇ 16ರವರೆಗೆ ನಡೆದ ದ್ವಿತೀಯ ಪಿಯು ಪರೀಕ್ಷೆ ಪರೀಕ್ಷೆಗೆ ಒಟ್ಟು 1,48,942 ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 52,505 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಬಾಲಕರು 26,496 (31.31%) ಮತ್ತು 26009 ( 40.44%) ಬಾಲಕಿಯರು ಪಾಸ್ ಆಗಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಸ್ಮೋಕಿ ಫುಡ್​ ಬ್ಯಾನ್​: ನಿಯಮ ಉಲ್ಲಂಘಿಸಿದರೆ 10ಲಕ್ಷ ದಂಡ

ಸಂಯೋಜನೆವಾರು ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ 11589 (22.24%) ವಾಣಿಜ್ಯ ವಿಭಾಗದಲ್ಲಿ 8709 (22.06%) ಮತ್ತು ವಿಜ್ಞಾನ ವಿಭಾಗದಲ್ಲಿ- 32207 (56.16%) ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಪರೀಕ್ಷೆ-2 ಬರೆದ ವಿದ್ಯಾರ್ಥಿಗಳಲ್ಲಿ ಫಲಿತಾಂಶ ಸುಧಾರಣೆ ಬಯಸಿದ 32940 ವಿದ್ಯಾರ್ಥಿಗಳು ಇದ್ದಾರೆ. ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿಗೆ ಅರ್ಜಿ ಸಲ್ಲಿಕೆ ಕೊನೆ ದಿನ ಮೇ 23, ಮರು ಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಕೆ ಕೊನೆ ದಿನ ಮೇ 25 ಆಗಿದೆ.

ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪರೀಕ್ಷೆ-3ಗೆ ಬಗ್ಗೆ ಇಲಾಖೆ ವೆಬ್​ ಸೈಟ್​ನಲ್ಲಿ ಮಾಹಿತಿ ನೀಡಿದೆ. ಜೂನ್ 26 ರಿಂದ ಜುಲೈ 5ರವರೆಗೆ ಪರೀಕ್ಷೆ ನಡೆಯಲಿದ್ದು ಪರೀಕ್ಷಾ ಶುಲ್ಕ ಪಾವತಿ ಕೊನೆಯ ದಿನಾಂಕವನ್ನು ದಂಡ ರಹಿತ ಮೇ 23 ರಿಂದ ಮೇ 28ರ ವರೆಗೆ ಪಾವತಿಸಬಹುದಾಗಿದೆ ಹಾಗೂ ದಂಡ ಸಹಿತ ಮೇ 29 ರಿಂದ ಮೇ 30ರ ವರೆಗೆ ಪಾವತಿಸಬಹುದು ಎಂದು ಇಲಾಖೆ ತಿಳಿಸಿದೆ.

RELATED ARTICLES

Related Articles

TRENDING ARTICLES