Saturday, July 27, 2024

ರಾಜ್ಯದಲ್ಲಿ ಸ್ಮೋಕಿ ಫುಡ್​ ಬ್ಯಾನ್​: ನಿಯಮ ಉಲ್ಲಂಘಿಸಿದರೆ 10ಲಕ್ಷ ದಂಡ

ಬೆಂಗಳೂರು: ರಾಜ್ಯದಲ್ಲಿ ಲಿಕ್ವಿಡ್​ ನೈಟ್ರೋಜನ್​ ಆಹಾರ ಬ್ಯಾನ್​ ಮಾಡಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶ ಹೊರಡಿಸಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಲಿಕ್ವಿಡ್​ ನೈಟ್ರೋಜನ್​ ಫುಡ್​​ ಟ್ರೆಂಡ್​ ಆಗುತ್ತಿದ್ದು ಆಹಾರ ಪ್ರಿಯರನ್ನು ಕೈಬೀಸಿ ಕರೆಯುತ್ತಿತ್ತು. ಸ್ಮೋಕಿ ಬಿಸ್ಕೆಟ್​ ಹಾಗು ಸ್ಮೋಕಿ ಡೆಸಾರ್ಟ್​ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಸ್ಮೋಕಿ ಫುಡ್​ ದುಷ್ಪರಿಣಾಮಗಳನ್ನು ಅರಿಯದ ಜನರು ಡೆಸರ್ಟ್​ಗಳ ರುಚಿ ಸವಿಯುತ್ತಿದ್ದರು. ಇದನ್ನು ಗಮನಿಸಿದ ಆಹಾರ ಸುರಕ್ಷತೆ ಹಾಗು ಗುಣಮಟ್ಟ ಇಲಾಖೆಯೂ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಲಿಕ್ವಿಡ್​ ನೈಟ್ರೋಜನ್​ ಆಹಾರಗಳನ್ನು ಬ್ಯಾನ್ ಮಾಡಿದೆ.

ಇದನ್ನೂ ಓದಿ: ಕೆಲಸ ಕೊಡಿಸುವುದಾಗಿ ಹೇಳಿ ಮಹಾರಾಷ್ಟ್ರದಲ್ಲಿ ಮಹಿಳೆಯ ಮಾರಾಟ!: ದೂರು ದಾಖಲು

ಕಂಟ್ರೋಲ್ ಫ್ರೀಜಿಂಗ್ ಮತ್ತು ಕೂಲಿಂಗ್ ಎಜೆಂಟ್‌ ಆಗಿ ಮಾತ್ರ  ಲಿಕ್ವಿಡ್ ನೈಟ್ರೋಜನ್‌ಗಳನ್ನು ಬಳಸಲು ಅವಕಾಶವಿದೆ. ಆದರೆ ಇವುಗಳನ್ನು ಫಾಸ್ಟ್​ ಫುಡ್​ ಹೆಸರಿನಲ್ಲಿ ಸ್ಮೋಕಿ ಬಿಸ್ಕೆಟ್ ಹಾಗು ಡೆಸಾರ್ಟ್ ಗಳಿಗೆ ಹೆಚ್ಚಾಗಿ ಬಳಸಲಾಗುತ್ತಿದೆ. ಈ ರೀತಿ ಆಹಾರಗಳಲ್ಲಿ ಲಿಕ್ವಿಡ್​ ನೈಟ್ರೋಜನ್​ ಬಳಸಲು ಸರ್ಕಾರದಿಂದ ಅನುಮೋದನೆ ಇಲ್ಲ. ಇಂತ ಆಹಾರಗಳ ಸೇವನೆಯಿಂದ ಜೀರ್ಣಾಂಗದ ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆ ಆಹಾರದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆಯನ್ನು ಆಹಾರ ಗುಣಮಟ್ಟ ಕಾಯ್ದೆ-2006ರ ನಿಯಮದಡಿ ನಿಷೇಧಿಸಲಾಗಿದೆ.

ನಿಯಮ ಬಾಹಿರವಾಗಿ ಲಿಕ್ವಿಡ್​ ನೈಟ್ರೋಜನ್​ಗಳನ್ನು ಆಹಾರದಲ್ಲಿ ಬಳಕೆ ಮಾಡಿದರೇ 7 ವರ್ಷಗಳಿಂದ ಜೀವಾವಧಿ ಶಿಕ್ಷೆ ಹಾಗೂ 10ಲಕ್ಷ ದಂಡ ವಿಧಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಎಚ್ಚರಿಕೆ ನೀಡಿದೆ.

RELATED ARTICLES

Related Articles

TRENDING ARTICLES