Tuesday, May 21, 2024

NDA ಮೈತ್ರಿಕೂಟದವರೇ ಪ್ರಜ್ವಲ್ ವಿಡಿಯೋ ಲೀಕ್ ಮಾಡಿದ್ದಾರೆ : ನಯನಾ ಮೋಟಮ್ಮ

ಬೆಳಗಾವಿ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಕಾಂಗ್ರೆಸ್​ ಶಾಸಕಿ ನಯನಾ ಮೋಟಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎನ್​ಡಿಎ ಮೈತ್ರಿಕೂಟದವರೇ ಹಾಸನ ಸಂಸದ ಹಾಗೂ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣನವರ ಅಶ್ಲೀಲ ವಿಡಿಯೋ ಲೀಕ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಹಾಸನದ ಸಾವಿರಾರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಎಸ್​ಐಟಿ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ವೈರಲ್ ಆಗಿರುವ ಆ ವಿಡಿಯೋದಲ್ಲಿರುವ ಮಹಿಳೆಯರ ಪರಿಸ್ಥಿತಿ ಹೇಗಾಗಿರಬಾರದು? ಅವರ ಮನೆಯವರು ಅವರನ್ನು ಹೇಗೆ ನೋಡುತ್ತಿದ್ದಾರೆ? ಈ ಪರಿಕಲ್ಪನೆ ಯಾರಿಗೂ ಇಲ್ಲ. ಈ ಅಶ್ಲೀಲ ವಿಡಿಯೋಗಳನ್ನು ಲೀಕ್ ಮಾಡಿದವರ‌ ವಿರುದ್ಧವೂ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES